ಈಗೀಗ ಒಂದೇ ಸಿನಿಮಾದಲ್ಲಿ ಬಹಳಷ್ಟು ಸ್ಟಾರ್ ಗಳು ಅಭಿನಯಿಸುತ್ತಿರುವುದು ಅಭಿಮಾನಿಗಳ ದೃಷ್ಟಿಯಿಂದ ಹಾಗೂ ಕಮರ್ಷಿಯಲ್ ದೃಷ್ಟಿಯಿಂದ ಬಹಳಷ್ಟು ಲಾಭವಾಗಿರುವುದು ಸತ್ಯಸಂಗತಿ. 90ರ ದಶಕದಲ್ಲಿ ಇಂತಹ ಬದಲಾವಣೆಗಳು ಸರ್ವೇ ಸಾಮಾನ್ಯವಾಗಿದ್ದರೂ ಬರುಬರುತ್ತಾ ಸ್ಟಾರ್ ಗಳ ನಡುವಿನ ಶೀತರ ಸಮರ, ಹುಸಿ ಮುನಿಸು ಅಂತಹ ವಿದ್ಯಮಾನಕ್ಕೆ ಅಡ್ಡಗಾಲಾಗಿ ನಿಂತಿತ್ತು. ಸಂತೋಷದ ಸಂಗತಿಯೆಂದರೆ ಮನೆಯಲ್ಲಿ ಕಿತ್ತಾಡಿದರೂ ಪಬ್ಲಿಕ್ಕಿಗೆ ಬಂದಾಗ ಗಿಣಿಗಳಂತಿರುವ ಅತ್ತೆ ಸೊಸೆಯರಂತೆ ಸೆಲೆಬ್ರೆಟಿಗಳ ಅಭಿಮಾನಿಗಳ ಮುಂದೆ ತಮ್ಮ ಮನೋಭಾವನೆಯನ್ನು ಬದಲಿಸಿಕೊಂಡಿದ್ದು, ಒಟ್ಟಿಗೆ ಸೇರಿ ಸಿನಿಮಾ ಮಾಡುವ ಮೂಲಕ ಇಲ್ಲಸಲ್ಲದ ಅಪವಾದಗಳು, ಆರೋಪಗಳನ್ನು ತಳ್ಳಿ ಹಾಕುವ ಪ್ರಯತ್ನವನ್ನು ಮಾಡುತ್ತಿರುವುದು ಸ್ಯಾಂಡಲ್ ವುಡ್ ನ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ.
ಸದ್ಯದ ಹಾಟ್ ನ್ಯೂಸ್ ಏನಂದ್ರೆ ಉಪೇಂದ್ರ ಅವರು ಅಯೋಗ್ಯ, ಚಮಕ್ ಫೇಮಿನ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ನಿನ್ನೆಯಷ್ಟೇ ರಿವೀಲ್ ಆಗಿದ್ದು, ರಿಯಲ್ ಸ್ಟಾರ್ ಡೆಡ್ಲಿ ಆದಿತ್ಯರ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆಂಬ ಸುದ್ದಿ ಬ್ಲಾಸ್ಟ್ ಆಗಿದೆ. ಇನ್ನೂ ವಿಶೇಷವೆಂದ್ರೆ ಉಪೇಂದ್ರ ಅವರ ಮುಂದೆ ವಿಲನ್ ಆಗಿ ಡೆಡ್ಲಿ ಆದಿತ್ಯ ಅಬ್ಬರಿಸಲಿದ್ದಾರೆನ್ನುವುದು. ಇನ್ನು ಈ ಚಿತ್ರದಲ್ಲಿ ಉಪೇಂದ್ರ ಅವರು ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಈ ವಿಚಾರದ ಕುರಿತು ಅಧಿಕೃತ ಮಾಹಿತಿಗಳು ಸದ್ಯದಲ್ಲೇ ಹೊರಬರಲಿದೆ. ಇನ್ನು ಉಪ್ಪಿಗೆ ನಾಯಕಿಯರಾಗಿ ಮೇಘನಾ ರಾಜ್, ಸೋನಲ್ ನಟಿಸುತ್ತಿದ್ದು, ಚಿತ್ರಕ್ಕೆ ಮೌರ್ಯ ನಿರ್ದೇಶನ ಮಾಡುತ್ತಿದ್ದಾರೆ. ‘ಪಿತಾಮಹ’ ಅಥವಾ ‘ಬುದ್ಧಿವಂತ 2’ ಎಂದು ಟೈಟಲ್ ಫಿಕ್ಸ್ ಆಗುವ ಸಾಧ್ಯತೆಗಳಿವೆಯಂತೆ.
No Comment! Be the first one.