ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಚಿತ್ರದ ಮುಹೂರ್ತ ನೆರವೇರಿದ್ದು, ರಾಬರ್ಟ್ ಚಿತ್ರತಂಡ ಬನಶಂಕರಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದೆ. ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ, ನಟ ದರ್ಶನ್ ಸೇರಿ ಚಿತ್ರತಂಡದ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದು, ಬಳಿಕ ಚಿತ್ರಕ್ಕೆ ಕ್ಲಾಪ್ ಮಾಡಲಾಯಿತು.
ಇನ್ನು ಈ ಬಗ್ಗೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇವತ್ತಿನಿಂದಲೇ ಶೂಟಿಂಗ್ ಶುರುವಾಗಿದೆ. ಏನೋ ಒಂದು ಹೊಸದನ್ನು ಮಾಡಲು ಹೊರಟಿದ್ದೇವೆ ಎಂದರು. ಇನ್ನು ಮೊದಲ ಬಾರಿ ಫೋಟೋಶೂಟ್ ಮಾಡಲು ಹೊರಟಿರುವ ದರ್ಶನ್ ಆ ಬಗ್ಗೆ ಮಾತನಾಡಿದ್ದು, ಮೊದಲ ಸ್ಟಿಲ್ಗೋಸ್ಕರ್ ಎಲ್ಲರೂ ಕಾಯ್ತಿದ್ದಾರೆ. ಆದಷ್ಟು ಬೇಗ ಬರತ್ತೆ ಎಂದಿದ್ದಾರೆ. ಇನ್ನು ಚಿತ್ರದ ತಯಾರಿ ಬಗ್ಗೆ ತಮಾಷೆ ಮಾಡಿದ ದರ್ಶನ್, ತಯಾರಿ ಏನಿಲ್ಲಾ ತರುಣ್ ಹೇಗೆ ಹೇಳ್ತಾರೋ ಹಾಗೇ ಕೇಳೋದು, ಇವತ್ತಿಂದ ರೈಸ್ ತಿನ್ಬಾರ್ದು ಅಂದಿದ್ದಾರೆ, ನಮ್ಮ ಊಟವನ್ನ ಕಿತ್ಕೊಡ್ಡಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ತಮ್ಮ ಚಿತ್ರಕ್ಕೆ ಐಶ್ವರ್ಯಾ ರೈ ಬರ್ತಾರೆಂಬ ರೂಮರ್ ಬಗ್ಗೆ ಮಾತನಾಡಿದ್ದು, ಅದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಪೋಸ್ಟರ್ನಲ್ಲಿ ಹನುಮನ ಚಿತ್ರವಿದ್ದು, ಹೆಸರು ಮಾತ್ರ ರಾಬರ್ಟ್ ಇದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜಾಣರಾಗಿ ಉತ್ತರಿಸಿದ ದರ್ಶನ್, ಚಿತ್ರದ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.
No Comment! Be the first one.