ಒಂದು ಕಾಲದಲ್ಲಿ ಬಿ ಟೌನ್ ನಲ್ಲಿ ಪ್ರೇಮ ಪಕ್ಷಿಗಳ ಹಾಗೇ ಜೊತೆ ಜೊತೆಯಾಗಿ ಹಾರಾಡುತ್ತಿದ್ದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಗೆ ಅದ್ಯಾರ ಕಣ್ಣು ಬಿತ್ತೋ ಪಾಪ ಇಬ್ಬರು ಹಾವು ಮುಂಗುಸಿಗಳಾಗಿಬಿಟ್ಟರು. ಅದೇನೇ ಹಾಗಿರಲಿ ರಣಬೀರ್ ಕಪೂರ್ ಮತ್ತು ದೀಪಿಕಾ ನಟನೆಯ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು ಮಾತ್ರ ಬಿ ಟೌನ್ ನ ಮಂದಿಗೆ ನಡುಕ ಹುಟ್ಟಿಸಿತ್ತು. ಇನ್ನು ತಮಾಷ ಸಿನಿಮಾದಲ್ಲಿ ಆ ಜೋಡಿಯ ಮೋಡಿಯಂತೂ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೊಸ ವಿಚಾರ ಏನಂದ್ರೆ ರಣವೀರ್ ನ ಮದ್ವೆಯಾಗೋ ಮುನ್ನ ರಣಬೀರ್ ಜತೆ ಡ್ಯೂಯೇಟ್ ಹಾಡಿದ್ದ ಡಿಪ್ಪಿ ಈಗ ಮತ್ತೆ ಮಾಜಿ ಪ್ರಿಯಕರನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅರ್ಥಾತ್ ಸದ್ಯದಲ್ಲಿ ಈ ಜೋಡಿ ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.
ಬಿಟೌನ್ನಲ್ಲಿ ಬಹುತೇಕ ಹಿಟ್ ಸಿನಿಮಾಗಳನ್ನೇ ನೀಡಿರೋ ಸ್ಟಾರ್ ಡೈರೆಕ್ಟರ್ ಕವ್ ರಂಜನ್ ಹೊಸ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಈ ಚಿತ್ರದಲ್ಲಿ ರಣಭೀರ್ ಹಾಗೂ ದೀಪಿಕಾ ಪಡುಕೋಣೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದ್ದಾರಂತೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ರಣಬೀರ್-ಡಿಪ್ಪಿ ಒಟ್ಟಿಗೆ ಕಾಣಿಸಿಕೊಳ್ಳೋದು ಆಲ್ ಮೋಸ್ಟ್ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಮಾಜಿ ಪ್ರೇಮಿಗಳು ಮಾತ್ರ ಗಪ್ ಚುಪ್.
No Comment! Be the first one.