ಸಾಹಸ ನಿರ್ದೇಶಕನಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರವಿ ವರ್ಮ ಅವರ ಎಂಟು ವರ್ಷದ ಕನಸು ಈಗ ನನಸಾಗುತ್ತಿದೆ. ಯಾವುದೇ ಒಬ್ಬ ಅನುಭವೀ ತಂತ್ರಜ್ಞನಿಗೆ ತಾನೂ ನಿರ್ದೇಶಕನಾಗಬೇಕು ಅನ್ನೋ ಬಯಕೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ರವಿವರ್ಮ ನಿರ್ದೇಶಕರಾಗಿರುವುದು ಮಾತ್ರವಲ್ಲದೆ, ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುವ ಸೂಚನೆ ತೋರಿದ್ದಾರೆ.

ಆರಂಭದಲ್ಲಿ ರವಿವರ್ಮಾ ರೆಡಿ ಮಾಡಿಟ್ಟುಕೊಂಡಿದ್ದ ಸಬ್ಜೆಕ್ಟನ್ನು ಶಿವಣ್ಣ ಓಕೆ ಮಾಡಿದರಂತೆ. ಆಮೇಲೆ ನಿರ್ಮಾಪಕ ಜಯಣ್ಣ ಒಪ್ಪಿ ಗ್ರೀನ್ ಸಿಗ್ನಲ್ ನೀಡದರಂತೆ. “ಅಲ್ಲಿಂದ ಶುರುವಾದ ಈ ಸಿನಿಮಾದ ಹಿಂದೆ ತುಂಬಾ ಜನರ ಶ್ರಮವಿದೆ. ಸಿನಿಮಾ  ಬಿಹಾರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಕಥೆ ಈ ಚಿತ್ರದ್ದಾಗಿದೆ. ಈ ಚಿತ್ರದ ನಾಯಕ ನಟ ಐಪಿಎಸ್ ಅಧಿಕಾರಿಯಾಗಿದ್ದು ಮಾಫಿಯಾವೊಂದರ ಜಾಡು ಹಿಡಿದು ಬೆಂಗಳೂರಿಗೆ ಬರುತ್ತಾನೆ. ಅದರ ಹಿನ್ನೆಲೆ ಏನು ಅನ್ನೋದು ಸಿನಿಮಾದಲ್ಲಿ ಹಂತಹಂತವಾಗಿ ತೆರೆದುಕೊಳ್ಳಲಿದೆ.  ಇದು ಒಂದು ತೀರಿಯಲ್ಲಿ ಕಳ್ಳ ಪೊಲೀಸ್ ಕತೆಯಾಗಿದ್ದು ನಾಲ್ಕು ದೊಡ್ಡ ಪೈಟ್ಸ್, ಒಂದು ಚೇಜ಼್ ಇದೆ.  ೮೦ ದಿವಸಗಳ ಕಾಲ ಬಿಹಾರ, ಪೂನಾ, ಬೆಂಗಳೂರು ಸೇರಿದಂತೆ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ” ಅನ್ನೋದು ರವಿವರ್ಮಾ ವಿವರಣೆ.

“ಕತೆ ಕೇಳಿದಾಗ ಖುಷಿ ಆಯ್ತು. ಅದಾದ್ಮೇಲೆ ಅನೇಕ ಬಗೆಯ ವೇರಿಯೇಷನ್ ಆಯ್ತು. ಈ ಚಿತ್ರದಲ್ಲಿ ಲುಕ್ ವೈಸ್ ಹೊಸತನವಿದೆ. ಆಟಿಟ್ಯೂಡ್ ಕೂಡಾ ಬೇರೆ ಇದೆ. ಶ್ರದ್ದಾ ಶ್ರೀನಾಥ್ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಸಾಹಸದ ಜೊತೆಗೆ ಎಮೋಷನ್ ಈ ಸಿನಿಮಾದ ವಿಶೇಷ. ನನ್ನ ಒಂದೊಂದು ಸಿನಿಮಾ ಕೂಡಾ ವೈವಿದ್ಯತೆಯಿಂದ ಕೂಡಿರುತ್ತದೆ. ಈ ಸಿನಿಮಾ ಕೂಡಾ ಬೇರೆ ಯಾವ ಚಿತ್ರಕ್ಕೂ ಹೋಲಿಕೆ ಇಲ್ಲದಂಥೆ ನನ್ನ ಅಭಿಮಾನಿಗಳು ಮತ್ತು ಸಿನಿಮಾ ಆಸಕ್ತರನ್ನು ರಂಜಿಸುವ ಎಲ್ಲ ಗುಣಗಳನ್ನೂ ಹೊಂದಿದೆ. ನೋಡುವುದಕ್ಕೂ ರಿಚ್ ಆಗಿ ಮೂಡಿಬಂದಿರೋದರಿಂದ ಜನ ‘ರುಸ್ತುಂ’ ಸಿನಿಮಾವನ್ನು ಬಿಗಿದಪ್ಪಿಕೊಳ್ಳೋದು ಗ್ಯಾರೆಂಟಿ ಎನ್ನುವುದು ನಾಯಕನಟ ಶಿವರಾಜ್ ಕುಮಾರ್ ಅವರ ಅನಿಸಿಕೆ.

CG ARUN

ಈ ಸಿನಿಮಾವನ್ನು ನೋಡಬೇಕಾಗಿ ಪ್ರೇಕ್ಷಕರಲ್ಲಿ ವಿನಂತಿ!

Previous article

ಕಸದ ರಾಶಿಯ ಮಧ್ಯೆ ಪ್ರಿಯಾಂಕ ಉಪ್ಪಿ ನಿಂತರೇಕೆ

Next article

You may also like

Comments

Leave a reply

Your email address will not be published. Required fields are marked *