ಸಾಹೋ ಹೊಸ ಪೋಸ್ಟರ್ ರಿಲೀಸ್!

ಬಾಹುಬಲಿ ಖ್ಯಾತಿಯ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸಾಹೋ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. “ನಿಶ್ಯಬ್ದವಾಗಿ ಇರಿ, ರೇಸ್ ಆರಂಭವಾಗಿದೆ” ಎಂದು ಹೇಳುವ ಮೂಲಕ ಯೂವಿ ಕ್ರಿಯೇಷನ್ಸ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಸಾಹೋ ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರುತ್ತಿದ್ದು, ಹೊಸ ಪೋಸ್ಟರಿನಲ್ಲಿ ಬೈಕ್ ರೇಸರ್ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಸಾಹೋ-ಚಾಪ್ಟರ್ 1, ಸಾಹೋ-ಚಾಪ್ಟರ್ 2 ಎಂಬ ಮೇಕಿಂಗ್ ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಇದಾಗಿರುವುದು ಅಭಿಮಾನಿಗಳ ಕುತೂಹಲಕ್ಕೆ ಪ್ರಮುಖ ಕಾರಣವಾಗಿದೆ.  ಸಾಹೋ ಸಿನಿಮಾವನ್ನು ಸುಜಿತ್ ನಿರ್ದೇಶನ ಮಾಡುತ್ತಿದ್ದು, ಪ್ರಭಾಸ್ ಗೆ ಬಾಲಿವುಡ್ ತಾರೆ ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಂದಾಜು 300 ಕೋಟಿ ಬಜೆಟ್‌ನಲ್ಲಿ ಯೂವಿ ಕ್ರಿಯೇಷನ್ಸ್ ನಿರ್ಮಿಸಿದೆ. ಸಾಹೋ ಪಾತ್ರವರ್ಗದಲ್ಲಿ ನೀಲ್ ನಿತಿನ್ ಮುಖೇಶ್, ವೆನ್ನೆಲ ಕಿಶೋರ್, ಮುರಳಿ ಶರ್ಮ, ಜಾಕಿ ಶ್ರಾಫ್, ಅರುಣ್ ವಿಜಯ್, ಮಂದಿರಾ ಬೇಡಿ ಮತ್ತಿತರರು ಇದ್ದಾರೆ.


Posted

in

by

Tags:

Comments

Leave a Reply