ಇಡೀ ಜಗತ್ತು ಕೊರೋನಾ ಕಾಟಕ್ಕೆ ಕಂಗಾಲಾಗಿದೆ. ಇಂಡಿಯಾದಲ್ಲೂ ಜನ ಮನೆಯಿಂದ ಹೊರಬರದಂತೆ ಲಾಕ್ ಆಗಿದ್ದಾರೆ. ಮನೆಯಲ್ಲಿದ್ದು ಮಂದಿ ತಾನೆ ಏನು ಮಾಡಲು ಸಾಧ್ಯ? ನ್ಯೂಸ್ ಚಾನೆಲ್ಲುಗಳನ್ನು ಆನ್ ಮಾಡಿದರೆ ಮತ್ತದೇ ಕೊವಿಡ್ ಬಗೆಗಿನ ನ್ಯೂಸುಗಳು. ಈ ಸಂದರ್ಭದಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ಪ್ರಸಾರ ಮಾಡುತ್ತಿರುವ ಮನರಂಜನಾ ವಾಹಿನಿಗಳಿಗೆ ಭರ್ಜರಿ ಟಿ ಆರ್ ಪಿ ಲಭಿಸುತ್ತಿದೆ.
ಮೊನ್ನೆ ಮಾರ್ಚ್ ೨೫ರಂದು ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯಶಾಂತಿ ಮತ್ತು ಪ್ರಕಾಶ್ ರೈ ಪ್ರಮುಖವಾಗಿ ನಟಿಸಿದ್ದ ಸರಿಲೇರು ನೀಕೆವ್ವರು ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಅನಿಲ್ ರವಿಪುಡಿ ನಿರ್ದೇಶನದ ಆಕ್ಷನ್, ಕಾಮಿಡಿ ಜಾನರಿನ ಈ ಚಿತ್ರ ಮಹೇಶ್ ಬಾಬು ಅಭಿಮಾನಿಗಳಿಗೆ ಅಷ್ಟೇನೂ ಇಷ್ಟವಾಗಿರಲಿಲ್ಲ. ರಶ್ಮಿಕಾ ಮಂದಣ್ಣ ನಟನೆ ಮಾತ್ರ ಬಲು ಮಜವಾಗಿದ್ದು, ಜನ ಆಕೆಯ ನಟನೆಯನ್ನು ಎಂಜಾಯ್ ಮಾಡಿದ್ದರು. ಈಗ ಟಿವಿಯಲ್ಲಿ ಪ್ರಸಾರ ವಾದ ಸರಿಲೇರು ನೀಕೆವ್ವರು ಚಿತ್ರಕ್ಕೆ ಬರೋಬ್ಬರಿ ೨೩.೪ ಟಿವಿಆರ್ ದೊರಕಿದೆ.
No Comment! Be the first one.