ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಾಣ ಮಾಡಿರುವ ಹೊಸ ಸಿನಿಮಾ ಅಲ್ಲೇ ಡ್ರಾ ಅಲ್ಲೇ ಬಹುಮಾನ. ಈ ಸಿನಿಮಾವನ್ನು ರತ್ನ ತೀರ್ಥ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕೈಗೆತ್ತಿಕೊಂಡಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ನಲ್ಲಿದೆ.
ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರಕ್ಕೆ ವೈ.ಎನ್. ಅಭಿನಂದನ್ ದೇಶಪ್ರಿಯ ಸಂಭಾಷಣೆ ಬರೆದಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಹಣವನ್ನು ಮಾಡಿದ್ದಾರೆ. ನಾಗಭೂಷಣ್ ಗೀತಸಾಹಿತ್ಯ, ವಿಜಯ್ ರಾಜ್ ಸಂಗೀತ, ಉಜ್ವಲ್ ಗೌಡ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ತಾರಾಗಣದಲ್ಲಿ ಶೌರ್ಯ, ತ್ರಿವೇಣಿ ಕೃಷ್ಣ, ಶಂಕರ್ ಅಶ್ವತ್ಥ್, ನಿಖಿಲ್ಗೌಡ, ಸುಮಂತ್, ಭಾರತಿ, ರಘುರಾಮನ್, ಧನು ಮುಂತಾದವರು ನಟಿಸಿದ್ದಾರೆ.