ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ಬಂದಿದ್ದ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತಲ್ಲಾ? ಆ ದಾಖಲೆಯನ್ನೆಲ್ಲ ನಿವಾಳಿಸಿ ಹಾಕುವಂತೆ ಇದೀಗ ಯೂಟ್ಯೂಬ್ನಲ್ಲಿ ಸೀತಾರಾಮನ ಟೈಲರ್ ಮೆರೆದಾಟ ಜೋರಾಗಿದೆ.
ಬಿಡುಗಡೆಯಾಗಿ ಕೆಲವೇ ಗಂಟೆಗಳ ಮೊದಲೇ ಈ ಟ್ರೈಲರ್ ವೀಕ್ಷಣೆಯ ಸಂಖ್ಯೆ ಲಕ್ಷ ದಾಟಿಕೊಂಡಿತ್ತು. ಎ ಹರ್ಷ ಅವರು ಹೇಳುತ್ತಾ ಬಂದಿದ್ದಂತೆಯೇ ಭಿನ್ನವಾದ ಕಥೆಯೊಂದರ ಸುಳಿವು, ರಿಚ್ ಆದ ಸನ್ನಿವೇಶಗಳೆಲ್ಲವೂ ಪ್ರೇಕ್ಷಕರನ್ನು ಮುದಗೊಳಿಸಿವೆ. ಈ ಟ್ರೈಲರ್ ಮೂಲಕವೇ ಸೀತಾರಾಮ ಮತ್ತಷ್ಟು ಜನರಿಗೆ ಹತ್ತಿರಾಗಿ ಬಿಟ್ಟಿದ್ದಾನೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಓರ್ವ ತಂದೆಯಾಗಿ, ನಿರ್ಮಾಪಕನಾಗಿ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಟ್ರೈಲರ್ ಬಿಡುಗಡೆ ಮಾಡಿ ಅವರಾಡಿದ್ದೊಂದು ಮಾತು ಸೀತಾರಾಮ ಕಲ್ಯಾಣ ಸಿನಿಮಾ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ರೈತ ಬದುಕಿದರೆ ದೇಶವೇ ಬದುಕುತ್ತೆ ಎಂಬ ಸಂದೇಶ ಈ ಸಿನಿಮಾದಲ್ಲಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.
ಸಂಕಷ್ಟದಲ್ಲಿರೋ ರೈತರ ಸಮಸ್ಯೆಗಳಿಗೆ ಉತ್ತರ ಹುಡುಕುವಂಥಾ ಪ್ರಯತ್ಕನಗಳೂ ಈ ಸಿನಿಮಾದಲ್ಲಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಅದು ನಿಜವಾಗಿದ್ದರೆ ಖಂಡಿತವಾಗಿಯೂ ಇದೊಂದು ಸಾರ್ಥಕ ಪ್ರಯತ್ನ ಅನ್ನೋದ್ರಲ್ಲಿ ಎರಡು ಮಾತಿಲ್ಲ.
https://www.youtube.com/watch?v=3pYwtl-VD-Y #
No Comment! Be the first one.