ಗಂಡನಿಗಾಗಿ ತನ್ನ ಜೀವನವನ್ನು ಅರ್ಪಿಸಿಕೊಂಡು, ಗಂಡನ ಮೇಲಿನ ಅಪವಾದಗಳನ್ನು ಹೊಗಲಾಡಿಸಲು ಆಕೆ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲೂ ದಿಗ್ಬ್ರಮೆಯನ್ನು ಮೂಡಿಸುತ್ತದೆ. ತನ್ನ ಗಂಡ ಅಮಾಯಕ ಎಂದು ಫ್ರೂ ಮಾಡಲು ಹೋಗಿ ಗಂಡ ಮಾಡಿದ ಕೃತ್ಯಗಳನ್ನೆಲ್ಲಾ ತಾನೂ ಮಾಡುತ್ತಾಳೆ.
ಇದಾರೋ ನಟೋರಿಯಲ್ ಕಿಲ್ಲರ್ ಬಗ್ಗೆ ಮಾತಾಡ್ತಿದ್ದೀನಿ ಅಂದುಕೊಂಡರಾ! ಹೌದು… ಆದರೆ ಇದು ರಿಯಲ್ ಅಲ್ಲ ರೀಲ್. ಬಾಲಿವುಡ್ ನ ಮಾದಕ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸುತ್ತಿರುವ ವೆಬ್ ಸರಣಿಯ ಒಂದೆಳೆ ಕಥೆಯಿಂದು. ಮಿಸೆಸ್ ಸೀರಿಯಲ್ ಕಿಲ್ಲರ್ ಎಂಬ ವೆಬ್ ಸಿರೀಸ್ ನ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಈ ವೆಬ್ ಸಿರೀಸ್ ಪ್ರಸಾರವಾಗಲಿದೆ. ಶಿರೀಶ್ ಕುಂದರ್ ಈ ವೆಬ್ ಸಿರೀಸ್ ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಫರಾಹ್ ಖಾನ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
No Comment! Be the first one.