ಬಿಗ್ ಸ್ಕ್ರೀನ್ ನಲ್ಲಿ ಕಮಾಲು ಮಾಡುವ ನಟ ನಟಿಯರು ಈಗೀಗ ಕಿರುತೆರೆಗೂ ಅಲ್ಲಿಂದಿಲ್ಲೊಂದು ರಿಯಾಲಿಟಿ ಶೋ, ಅವಾರ್ಡ್ ಫಂಕ್ಷನ್ನು, ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೋಡುಗರಿಗೆ ಸಡನ್ ಶಾಕ್ ಗಳನ್ನು ನೀಡುತ್ತಿರುತ್ತಲೇ ಇರುತ್ತಾರೆ. ಈತನ್ಮಧ್ಯೆ ಮಾಸ್ಟರ್ ಪೀಸ್, ಸಾಹೇಬ, ಶ್ರೀಮನ್ನಾರಾಯಣ, ಗೀತಾ ಚಿತ್ರಗಳಲ್ಲಿ ನಟಿಸಿರುವ ಶಾನ್ವಿ ಶ್ರೀವಾತ್ಸವ್ ಕೂಡ ಅದೇ ದಾರಿಯನ್ನು ಹಿಡಿದಿದ್ದಾರೆ. ಯೆಸ್.. ಶಾನ್ವಿ ಶ್ರೀವಾತ್ಸವ್ ಕಿರುತೆರೆಗೆ ಕಾಲಿಟ್ಟಿದ್ದು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Nandini

ರಾಮ್ ಮತ್ತು ಜನನಿಯ ನಿಶ್ಚಿತಾರ್ಥ ನಡೀತಿದೆ ಆದ್ರೆ ಟ್ವಿಸ್ಟ್ ಕೊಡೋಕೆ ಬರ್ತಿದ್ದಾರೆ ಮಾಸ್ಟರ್ ಪೀಸ್ ಬೆಡಗಿ #ShanviSrivastava ವೀಕ್ಷಿಸಿ #Nandini ಇಂದು ರಾತ್ರಿ 8.30 ಕ್ಕೆ #UdayaTV ಯಲ್ಲಿ. Shanvi SrivastavaShanvi Srivastava – Cuteness Queen Shanvi Srivastav

Gepostet von Udaya TV am Freitag, 19. Juli 2019

ಕಥಾ ನಾಯಕಿ ಜನನಿ ನಾಯಕ ವಿರಾಟ್ ನನ್ನು ಲವ್ ಮಾಡುತ್ತಿದ್ದರೂ ಕೂಡ ಆಕೆಯ ಮದುವೆ ಖಳನಾಯಕ ರಾಮ್ ಜತೆ ನಿಶ್ಚಯವಾಗಿರುತ್ತದೆ. ಮನೆಯಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುವಷ್ಟರಲ್ಲಿ ಕಥೆಗೊಂದು ಟ್ವಿಸ್ಟ್ ಸಿಗುತ್ತದೆ. ಜನನಿ ಯಾರನ್ನು ಮದುವೆ ಆಗುತ್ತಾರೆ ಎಂಬುದೇ ಸದ್ಯದ ಕೌತುಕವಾಗಿದ್ದು, ಶಾನ್ವಿ ಶ್ರೀವಾತ್ಸವ ಎಂಟ್ರಿಯಾಗಿ ಏನು ಮಾಡಲಿದ್ದಾರೆ ಎಂಬುದನ್ನು ಧಾರವಾಹಿಯನ್ನು ನೋಡಿಯೇ ತಿಳಿಯಬೇಕು.

CG ARUN

ಆಸ್ತಮದಿಂದ ನರಳುತ್ತಿದ್ದವರ ಪರ ನಿಂತಿದ್ದ ಪ್ರಿಯಾಂಕ ಧಮ್ ಹೊಡೆದ್ರಂತೆ!

Previous article

ಇಂದಿನಿಂದ ಕಲರ್ಸ್ ಕನ್ನಡದಲ್ಲಿ ರಕ್ಷಾಬಂಧನ!

Next article

You may also like

Comments

Leave a reply

Your email address will not be published. Required fields are marked *