’ಪಿಂಕ್’ ಹಿಂದಿ ಚಿತ್ರದ ತಮಿಳು ರೀಮೇಕ್ನಲ್ಲಿ ಅಜಿತ್ ಜೊತೆ ನಟಿಸುವ ಸುದ್ದಿಯನ್ನು ನಟಿ ಶ್ರದ್ಧಾ ಶ್ರೀನಾಥ್ ಖಚಿತ ಪಡಿಸಿ ಟ್ವೀಟ್ ಮಾಡಿದ್ದಾರೆ. ಹಿಂದಿ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಲಿರುವ ಈ ಚಿತ್ರಕ್ಕೆ ಸದ್ಯ ’ಥಲಾ 59 ಎಂದು ಹೆಸರಿಸಲಾಗಿದೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ಪಾತ್ರವನ್ನು ಅಜಿತ್ ನಿರ್ವಹಿಸುತ್ತಿದ್ದು, ತಾಪ್ಸಿ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಲಿದ್ದಾರೆ.
“ಹೌದು ಈ ಚಿತ್ರಕ್ಕೆ ಆಯ್ಕೆಯಾಗಿರುವದನ್ನು ಈಗ ಅಧಿಕೃತವಾಗಿ ಹೇಳಿಕೊಳ್ಳಬಹುದು. ಇದು ನಾನು ಸಹಿ ಹಾಕಿರುವ ಆರನೇ ತಮಿಳು ಸಿನಿಮಾ. ಅಜಿತ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ನನಗೆ ಈಗ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ನನ್ನ ವೃತ್ತಿಬದುಕಿನ ದೊಡ್ಡ ತಿರುವುದು” ಎನ್ನು ಶ್ರದ್ಧಾ ಸದ್ಯ ’ಜರ್ಸೀ’ ತೆಲುಗು ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ನಾನಿ ಈ ಚಿತ್ರದ ಹೀರೋ. ಕನ್ನಡದಲ್ಲಿ ಅವರ ’ರುಸ್ತುಂ’ ಸಿನಿಮಾ ಸಿದ್ಧವಾಗುತ್ತಿದೆ. ’ಮಿಲನ್ ಟಾಕೀಸ್’ ಹಿಂದಿ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಶ್ರದ್ಧಾ ಅಜಿತ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.
ಬೋನಿ ಕಪೂರ್ ನಿರ್ಮಾಣದ ’ಇಂಗ್ಲಿಷ್ ವಿಂಗ್ಲಿಷ್’ ಹಿಂದಿ ಚಿತ್ರದಲ್ಲಿ ನಟಿ ಶ್ರೀದೇವಿ ಜೊತೆ ಅಜಿತ್ ನಟಿಸಿದ್ದರು. ಅಜಿತ್ಗೆ ಎರಡು ಸಿನಿಮಾ ನಿರ್ಮಿಸಬೇಕೆಂದು ಬೋನಿ ಆಗಲೇ ನಿರ್ಧರಿಸಿದ್ದರಂತೆ. ಶ್ರದ್ಧಾ ಅಲ್ಲದೆ ’ಪಿಂಕ್’ ತಮಿಳು ರಿಮೇಕ್ನ ಇತರೆ ತಾರಾಬಳಗ ಮತ್ತು ತಂತ್ರಜ್ಞರ ಬಗ್ಗೆಯೂ ಮಾಹಿತಿ ಸಿಕ್ಕಿದೆ. ವಿದ್ಯಾ ಬಾಲನ್, ಆದಿಕ್ ರವಿಚಂದ್ರನ್, ಅರ್ಜುನ್ ಚಿದಂಬರಂ, ಅಶ್ವಿನ್ ರಾವ್ ಇತರೆ ಪ್ರಮುಖ ಪಾತ್ರಗಳಲ್ಲಿರುತ್ತಾರೆ. ’ಥೀರನ್ ಅಧಿಗಂ ಒಂಡ್ರು’ ತಮಿಳು ಸಿನಿಮಾ ಖ್ಯಾತಿಯ ವಿನೋದ್ ’ಥಲಾ ೫೯’ ನಿರ್ದೇಶಿಸಲಿದ್ದಾರೆ.
#
No Comment! Be the first one.