ಉಲ್ಲಾಸಂಗ ಉತ್ಸಾಹಂಗ ಎಂಬ ಯಶಸ್ವಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸ್ನೇಹಾ ಉಲ್ಲಾಳ್ ಗೆ ಹೆಚ್ಚು ನಂದಮೂರಿ ಬಾಲಕೃಷ್ಣ ಅವರ ಜೈಸಿಂಹ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅವಕಾಶ ವಂಚಿತರಾಗಿರುವ ಸ್ನೇಹ ಸದ್ಯ ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಾದರೂ ಹೆಚ್ಚು ಸಕ್ರಿಯರಾಗಿರಬೇಕೆಂಬ ಉದ್ದೇಶದಿಂದ ತಮ್ಮ ಮಾದಕ ಮೈ ಮಾಟದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ.
https://www.instagram.com/p/B1odfhFhuUZ/?utm_source=ig_web_copy_link
ಇತ್ತೀಚಿಗಷ್ಟೇ ಪ್ಯಾಂಟ್ ಹಾಕದೆ ಕೇವಲ ಶರ್ಟ್ ಮಾತ್ರ ಧರಿಸಿರುವ ಪೋಟೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ಟ್ರೋಲ್ ಆಗಿರುವ ಸ್ನೇಹಾ ಕಮೆಂಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಸ್ನೇಹಾ ಅವರ ಕೆಲ ಅಭಿಮಾನಿಗಳು ಆಕೆಯ ಸೌಂದರ್ಯಕ್ಕೆ ಮನಸೋತಿದ್ದಾರೆ. ಮತ್ತೂ ಕೆಲವರು ‘ಇಂತಹ ಚಿತ್ರಗಳನ್ನು ಪೋಸ್ಟ್ ಮಾಡಬೇಡಿ, ಇನ್ನೊಬ್ಬ ರಾಖಿ ಸಾವಂತ್ ಆಗದಿರಲು ಪ್ರಯತ್ನಿಸಿ’ ಎಂದು ಅಭಿಮಾನಿಗಳು ಸ್ನೇಹಾಗೆ ಸಲಹೆಯನ್ನು ನೀಡಿದ್ದಾರೆ.
Comments