ಸಿನಿಮಾ ಜಗತ್ತಿನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದಾರೆ. ಸಾಕಷ್ಟು ಸಹ ನಟರು, ನಿರ್ಮಾಪಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಬಾಳದಂತೆ ಹರಾಜು ಹಾಕಿದ್ದಾರೆ. ಇದೆಲ್ಲವೂ ಈಗೀಗ ಕಾಮನ್ ಕೂಡ. ಅದಾವುದೋ ನಿರ್ಮಾಪಕ ನೈಟ್ ಔಟಿಗೆ ಕರೆದರೂ, ಮತ್ತಾವುದೋ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ತಪ್ಪಿದ ಇತ್ಯಾದಿ ಇತ್ಯಾದಿ. ಮೀಟೂ ಅಭಿಯಾನ ಬಂದಮೇಲಂತೂ ಸತ್ತು ಹೋಗಿದ್ದ ಸಾಕಷ್ಟು ಪ್ರಕರಣಗಳಿಗೆ ಜೀವನವೂ ಬಂದಿತು. ಮೀಟೂ ಎಷ್ಟರಮಟ್ಟಿಗೆ ಬಣ್ಣದ ಲೋಕದಲ್ಲಿ ಬಿರುಗಾಳಿ ಎಬ್ಬಿಸಿತ್ತು ಎಂಬುದನ್ನು ನಾವೇನೂ ಬಾಯ್ಬಿಟ್ಟು ಹೇಳಬೇಕಿಲ್ಲ.
ಸದ್ಯ ಬಾಲಿವುಡ್ ನಟಿ ಸೋನಾಲಿ ಸೇಗಲ್ ತನ್ನ ಮೇಲಾದ ಶೋಷಣೆಯನ್ನು ಎಲ್ಲರ ಮುಂದೆ ಬಿಚ್ಚಿಟ್ಟು ಹೊಸದೊಂದು ವಿವಾದದ ಹುಟ್ಟಿಗೆ ಮುನ್ನುಡಿ ಬರೆಯುತ್ತಿದ್ದಾರೆ. ನಟಿ ಸೋನಾಲಿಗೆ ನಿರ್ದೇಶಕರೊಬ್ಬರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಹೌದು ಆಡಿಷನ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸೋನಾಲಿ ಸೇಗಲ್, ಆಯ್ಕೆಯಾಗುವ ಆಸೆ ಹೊಂದಿದ್ದಳಂತೆ. ಕೊನೆಯಲ್ಲಿ ಬಂದ ಪ್ರಸಿದ್ಧ ನಿರ್ದೇಶಕರೊಬ್ಬರು ದೇಹದ ಪ್ರಮುಖದ ಅಂಗದ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಅಂಗದ ಸೌಂದರ್ಯ ಹೆಚ್ಚಾಗಲಿದೆ. ನಂತರ ನಟನೆಗೆ ಅವಕಾಶ ನೀಡುತ್ತೇನೆ ಎಂದು ಕಂಡೀಷನ್ ಕೂಡ ಹಾಕಿದ್ದರಂತೆ.
ಶಸ್ತ್ರ ಚಿಕಿತ್ಸೆಗೆ ಒಪ್ಪದ ಸೋನಾಲಿ ಚಿತ್ರಕ್ಕೆ ಎಳ್ಳುನೀರು ಬಿಟ್ಟಿದ್ದರಂತೆ. ಈ ವಿಚಾರವನ್ನು ಸೋನಾಲಿ ಇತ್ತೀಚಿಗೆ ಬಹಿರಂಗಪಡಿಸಿದ್ದಾಳೆ. ಆದರೆ ಆ ನಿರ್ದೇಶಕ ಯಾರೆಂದು ಕೇಳಿದರೆ ಮಾತ್ರ ತುಟಿ ಪಿಟಿಕ್ ಎನ್ನದೇ ಮಾತು ಬದಲಾಯಿಸಿದ್ದಾರೆ. ಇದು ಆಕೆ ತನ್ನ ಪ್ರಚಾರಕ್ಕಾಗಿ ಹಬ್ಬಿಸಿರಬಹುದಾದ ಸುಳ್ಳು ಸುದ್ದಿ ಎಂದೂ ಅನೇಕರು ಮಾತನಾಡಿಕೊಳ್ಳುತ್ತಿದ್ದರೆ, ನಿರ್ದೇಶಕರಿಂದ ಬೆದರಿಕೆಯೂ ಇರಬಹುದೆಂದೂ ಇನ್ನೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿ ಶುರು ಮಾಡಿದ್ದ ಸೋನಾಲಿ ಮೊದಲ ಬಾರಿ ಪ್ಯಾರ್ ಕಿ ಪಂಚನಾಮಾದಲ್ಲಿ ಕಾಣಿಸಿಕೊಂಡಿದ್ದಳು. ಈವರೆಗೆ ಆರು ಸಿನಿಮಾಗಳಲ್ಲಿ ಸೋನಾಲಿ ನಟಿಸಿದ್ದಾಳೆ.
No Comment! Be the first one.