ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂ ಎಂಬೆರಡು ಸಿನಿಮಾಳನ್ನು ನಿರ್ದೇಶಿಸಿದ್ದವರು ನರೇಶ್. ತೀರಾ ಹೊಸಬರನ್ನು ಬಳಸಿಕೊಂಡು ಅತ್ಯುತ್ತಮ ಕಂಟೆಂಟ್ ಕೊಡುವ ತಾಕತ್ತಿರುವ ನಿರ್ದೇಶಕ. ಈ ಸಲ ಸೌತ್ ಇಂಡಿಯನ್ ಹೀರೋ ಎನ್ನುವ ಕಾನ್ಸೆಪ್ಟು ರೆಡಿ ಮಾಡಿಕೊಂಡು ಬಂದಿದ್ದಾರೆ. ಸಿನಿಮಾರಂಗದ ಒಳಸುಳಿಗಳನ್ನು ಬಿಚ್ಚಿಡುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ನರೇಶ್ ಅವರ ʻಸೌತ್ ಇಂಡಿಯನ್ ಹೀರೋʼ ಸಿನಿಮಾದ ಟ್ರೇಲರು ನೋಡಿದರೆ ಹಿಂದನ ಎಲ್ಲದಕ್ಕಿಂತಾ ಭಿನ್ನವಾಗಿರುವ ಸೂಚನೆಗಳಿವೆ.
ಏನೇನೂ ಹಿನ್ನೆಲೆ ಇಲ್ಲದೆ ಬಂದು ಸಿನಿಮಾ ಹೀರೋ ಆಗುವವರು, ಅವರನ್ನು ರೂಪಿಸುವ ನಿರ್ದೇಶಕ, ನಿರ್ಮಾಪಕ, ಎಲ್ಲಕ್ಕಿಂತಾ ಮುಖ್ಯವಾಗಿ ಹೀರೋಗಳನ್ನು ಆರಾಧಿಸುವ ಅಭಿಮಾನಿಗಳು, ಎಲ್ಲವನ್ನೂ ಗಮನಿಸುವ ಮೀಡಿಯಾಗಳು – ಎಲ್ಲರ ದೃಷ್ಟಿಯಲ್ಲಿ ಸೌತ್ ಇಂಡಿಯನ್ ಹೀರೋ ಸಿನಿಮಾ ಕ್ರಿಯೇಟ್ ಆದಂತಿದೆ. ಇದಲ್ಲದೆ, ಸಿನಿಮಾ ನಟರ ವರಸೆಗಳನ್ನು, ಅವರಾಡುವ ಆಟಗಳನ್ನು ಲೇವಡಿ ಮಾಡುವ, ತಿವಿಯುವ ಕೆಲಸ ಕೂಡಾ ಈ ಚಿತ್ರದಲ್ಲಿ ಆಗಿರುವ ಸೂಚನೆ ಇದೆ. ಅದು ನಿರ್ದಿಷ್ಟವಾಗಿ ಯಾವುದಾದರೂ ಹೀರೋ/ಹೀರೋಯಿನ್ ಗಳನ್ನು ಟಾರ್ಗೆಟ್ ಮಾಡಿದ್ದಾರಾ? ಅನ್ನೋದು ಇದೇ ವಾರ ಜಾಹೀರಾಗಲಿದೆ.
ಈ ಹಿಂದೆ ನರೇಶ್ ಭಿನ್ನ ಕಥಾಹಂದರಗಳನ್ನು ಮುಟ್ಟಿದ್ದಾರೆ. ಮತ್ತು ಪ್ರೇಕ್ಷಕರ ಮನಸ್ಸಿಗೆ ಅದನ್ನು ದಾಟಿಸುವಲ್ಲಿ ಗೆಲುವು ಕಂಡಿದ್ದಾರೆ. ಸೌತ್ ಇಂಡಿಯನ್ ಹೀರೋ ಕೂಡಾ ಅದೇ ರೀತಿ ಟ್ರೆಂಡ್ ಸೆಟ್ ಮಾಡುವ ಎಲ್ಲ ಸಾಧ್ಯತೆ ಇದೆ.
No Comment! Be the first one.