ಹಿಂದಿ ಸಿನಿಮಾ ಕಂಡ ಸೂಪರ್ಸ್ಟಾರ್ ಹಿರೋಯಿನ್ಗಳಲ್ಲಿ ಶ್ರೀದೇವಿ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಬಾಲಿವುಡ್ನಲ್ಲಿ ಯಶಸ್ವಿಯಾದ ದಕ್ಷಿಣ ಭಾರತದ ಸುಂದರಿ ಶ್ರೀದೇವಿ. 80, 90ರ ದಶಕದಲ್ಲಿ ತಮ್ಮ ಹೆಸರಿನಿಂದಲೇ ಶ್ರೀದೇವಿ ಪ್ರೇP್ಷÀಕರನ್ನು ಥಿಯೇಟರ್ಗೆ ಸೆಳೆಯುವಷ್ಟು ಜನಪ್ರಿಯತೆ ಗಳಿಸಿದ್ದರು. ಹೇಮಾ ಮಾಲಿನಿ ನಂತರ ಬಾಲಿವುಡ್ನಲ್ಲಿ ದೊಡ್ಡ ಯಶಸ್ಸು ಕಂಡ ದಕ್ಷಿಣದ ತಾರೆ ಶ್ರೀದೇವಿ.
1963, ಆಗಸ್ಟ್ 13ರಂದು ಜನಿಸಿದ ಶ್ರೀದೇವಿ ಪೂರ್ಣ ಹೆಸರು ಶ್ರೀದೇವಿ ಅಯ್ಯಪ್ಪನ್. ತಮಿಳುನಾಡು ಶಿವಕಾಶಿ ಜಿಲ್ಲೆಯ ಮೀನಾಂಪಟ್ಟಿ ಅವರ ಜನ್ಮಸ್ಥಳ. ತಂದೆ ಅಯ್ಯಪ್ಪನ್ ವಕೀಲರು. ಆಂಧ್ರಪ್ರದೇಶದ ನೆಲ್ಲೂರು ಮೂಲದ ತಾಯಿ ರಾಜೇಶ್ವರಿ ಗೃಹಿಣಿ. ಶ್ರೀಲತಂ ಆಕೆಯ ಸಹೋದರಿ.
`ಕಂದನ್ ಕರುಣೈ’ ತಮಿಳು ಚಿತ್ರದ ಬಾಲನಟಿಯಾಗಿ ಶ್ರೀದೇವಿ ಬೆಳ್ಳಿತೆರೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಶ್ರೀದೇವಿ ಮುರುಗ ದೇವತೆಯ ಪಾತ್ರ ನಿರ್ವಹಿಸಿದ್ದರು. ಟೀನೇಜ್ನಲ್ಲಿ ಅವರು ಹಲವು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಶ್ರೀದೇವಿ ನಟಿಸಿದರು. ಪದಹರೆಳ್ಳ ವಯಸು, ವೇಟಗಾಡು, ಜಗದೇಕ ವೀರುಡು, ಅತಿಲೋಕ ಸುಂದರಿ, P್ಷÀಣP್ಷÀಣಂ ಅವರ ಕೆಲವು ಯಶಸ್ವೀ ತೆಲುಗು ಚಿತ್ರಗಳು. ಐ.ವಿ.ಶಶಿ ನಿರ್ದೇಶನದ ಆದ್ಯಪಾದಂ, ಆಲಿಂಗನಂ, ಕುಟ್ಟವಂ ಶಿP್ಷÀಯಂ, ಆ ನಿಮಿಷಂ ಮಲಯಾಳಂ ಚಿತ್ರಗಳಲ್ಲಿಯೂ ಅವರು ಹೆಸರು ಮಾಡಿದರು. ಭಕ್ತ ಕುಂಬಾರ (1974), ಹೆಣ್ಣು ಸಂಸಾರದ ಕಣ್ಣು (1976) ಮತ್ತು ಪ್ರಿಯಾ (1979) ಕನ್ನಡ ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ.
ಶ್ರೀದೇವಿ ಹಿಂದಿ ಸಿನಿಮಾ ಅಭಿಯಾನ ಆರಂಭವಾಗಿದ್ದು `ಜ್ಯೂಲಿ’ ಚಿತ್ರದ ಬಾಲನಟಿಯಾಗಿ. `ಸೋಲ್ವಾ ಸಾವನ್’ (1979) ಚಿತ್ರದೊಂದಿಗೆ ನಾಯಕಿಯಾಗಿ ಬಾಲಿವುಡ್ಗೆ ಪರಿಚಯವಾದರು. ಈ ಚಿತ್ರದ ಸೋಲಿನೊಂದಿಗೆ ಶ್ರೀದೇವಿ ತೆಲುಗು ಚಿತ್ರರಂಗಕ್ಕೆ ವಾಪಸಾದರು. `ಹಿಮ್ಮತ್ವಾಲಾ’ (1983) ಅವರ ಸಿನಿಮಾ ಜೀವನಕ್ಕೆ ಮಹತ್ವದ ತಿರುವು ಕೊಟ್ಟಿತು. ಜಿತೇಂದ್ರ ಹೀರೋ ಆಗಿದ್ದ ಚಿತ್ರದೊಂದಿಗೆ ಆಕೆ ಸ್ಟಾರ್ ಹಿರೋಯಿನ್ ಆದರು. ಮುಂದೆ ಶ್ರೀದೇವಿ – ಜಿತೇಂದ್ರ ಜೋಡಿಯ ತೋಫಾ ಮತ್ತು ಮಾವಾಲಿ ಚಿತ್ರಗಳೂ ಯಶಸ್ವಿಯಾದವು.
ಸತತ ಮೂರು ಚಿತ್ರಗಳ ಗೆಲುವಿನೊಂದಿಗೆ ಶ್ರೀದೇವಿ ಸ್ಟಾರ್ ಎನಿಸಿಕೊಂಡರು. ಅದ್ಭುತವಾಗಿ ನೃತ್ಯ ಮಾಡುತ್ತಿದ್ದ ಶ್ರೀದೇವಿ ಹಿಂದಿ ಚಿತ್ರರಂಗದ ನಂ.1 ನಟಿಯಾಗಿ ಸ್ಥಾಪಿತರಾದರು. ಅಲ್ಲಿಯವರೆಗೆ ರೇಖಾ, ಹೇಮಾ ಮಾಲಿನಿ ಅವರ ಮುಡಿಯಲ್ಲಿದ್ದ ಕಿರೀಟ ಶ್ರೀದೇವಿ ಮುಡಿಗೇರಿತು. ಮುಂದೆ ಮಾಧುರಿ ದೀಕ್ಷಿತ್ ಗುರುತಿಸಿಕೊಳ್ಳುವವರೆಗೂ ಶ್ರೀದೇವಿ ಹಿಂದಿ ಚಿತ್ರರಂಗದ ಮುಂಚೂಣಿ ನಾಯಕಿಯಾಗಿ ಗುರುತಿಸಿಕೊಂಡರು. ಮಿಸ್ಟರ್ ಇಂಡಿಯಾ, ಚಾಲ್ಬಾಜ್, ನಾಗಿನಾ, ನಿಗಾಹೇನ್, ಚಾಂದಿನಿ, ಗುಮ್ರಾಹ್, ಜುದಾಯ್ ಸೇರಿದಂತೆ ಹತ್ತಾರು ಸೂಪರ್ಹಿಟ್ ಹಿಂದಿ ಚಿತ್ರಗಳು ಶ್ರೀದೇವಿ ಹೆಸರಿಗಿವೆ.
80ರ ದಶಕದ ಶ್ರೀದೇವಿ ಚಿತ್ರಗಳ ಪೈಕಿ ಜಸ್ಟೀಸ್ ಚೌಧರಿ, ಜಾನಿ ದೋಸ್ತ್, ಮಾವಾಲಿ, ಮಕ್ಸದ್, ತೋಫಾ, ಆಖ್ರೀ ರಾಸ್ತಾ, ಜಾನ್ಬಾಜ್, ಘರ್ ಸನ್ಸಾರ್, ನಾಗಿನಾ, ಮಿಸ್ಟರ್ ಇಂಡಿಯಾ, ಸುಹಾಗನ್, ಔಲಾದ್ ಪ್ರಮುಖವಾದವು. ದ್ವಿಪಾತ್ರದಲ್ಲಿ ನಟಿಸಿದ್ದ `ಚಾಲ್ಬಾಜ್’ (1988) ಚಿತ್ರದ ಉತ್ತಮ ಅಭಿನಯಕ್ಕಾಗಿ ಶ್ರೀದೇವಿಗೆ ಮೊದಲ ಫಿಲ್ಮ್ಫೇರ್ ಪುರಸ್ಕಾರ ಸಂದಿತು. ಇದೇ ವರ್ಷ ತೆರೆಕಂಡ ಯಶ್ ಚೋಪ್ರಾ ನಿರ್ದೇಶನದ `ಚಾಂದಿನಿ’ ಚಿತ್ರದ ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಅವರು ನಾಮನಿರ್ದೇಶನಗೊಂಡಿದ್ದರು. ಮುಂದೆ ಚೋಪ್ರಾ ಅವರೇ ನಿರ್ದೇಶಿಸಿದ `ಲಮ್ಹೇ’ ಚಿತ್ರದ ದ್ವಿಪಾತ್ರಕ್ಕಾಗಿ ಅವರು ಮತ್ತೊಮ್ಮೆ ಫಿಲ್ಮ್ಫೇರ್ನಿಂದ ಪುರಸ್ಕøತರಾದರು.
`ಖುದಾ ಗವಾ’ (1992) ಚಿತ್ರದಲ್ಲಿ ಶ್ರೀದೇವಿ ಅವರು ಮೇರು ನಟ ಅಮಿತಾಭ್ ಬಚ್ಚನ್ ಜತೆ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಪಾತ್ರ ಪ್ರೇP್ಷÀಕರ ಮನಸೂರೆಗೊಂಡಿತು. ಇದೇ ವರ್ಷ ಅವರ ಅಭಿನಯದ ‘ ತೆಲುಗು ಚಿತ್ರ ತೆರೆಕಂಡಿತು. ಈ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಅವರು ಮತ್ತೊಮ್ಮೆ ಫಿಲ್ಮ್ಫೇರ್ ಹಾಗೂ ನಂದಿ ಪ್ರಶಸ್ತಿಗೆ ಭಾಜನರಾದರು. ಮುಂದೆ ಮಹೇಶ್ ಭಟ್ ನಿರ್ದೇಶನದ `ಗುಮ್ರಾಹ್’, `ಲಾಡ್ಲಾ’ (ನೆಗೆಟಿವ್ ಶೇಡ್) ಚಿತ್ರಗಳಲ್ಲಿ ಶ್ರೀ ಮಿಂಚಿದರು. `ಜುದಾಯಿ’ ಚಿತ್ರದ ನಂತರ ಶ್ರೀದೇವಿ ಚಿತ್ರರಂಗಕ್ಕೆ ವಿದಾಯ ಹೇಳಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವರಿಸಿದರು. ಈ ದಾಂಪತ್ಯಕ್ಕೆ ಜಾಹ್ನವಿ ಮತ್ತು ಖುಷಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಸಿನಿಮಾಗೆ ವಿದಾಯ ಹೇಳಿದ ಆರು ವರ್ಷಗಳ ನಂತರ ಶ್ರೀದೇವಿ `ಮಾಲಿನಿ ಅಯ್ಯರ್’ ಸರಣಿಯೊಂದಿಗೆ ಕಿರುತೆರೆಗೆ ಬಂದಿದ್ದರು. `ಮೇರಿ ಬೀವಿ ಕಾ ಜವಾಬ್ ನಹೀ’ (2004) ಚಿತ್ರದೊಂದಿಗೆ ಅವರು ಹಿರಿತೆರೆಗೆ ಮರಳಿದರು. 2012ರಲ್ಲಿ ತೆರೆಕಂಡ `ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ಶ್ರೀದೇವಿ ಅವರಿಗೆ ಹೆಸರು ತಂದುಕೊಟ್ಟಿತು. 2013ರ `ಬಾಂಬೆ ಟಾಕೀಸ್’ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದ ಹತ್ತಾರು ಪ್ರತಿಷ್ಟಿತ ಪುರಸ್ಕಾರಗಳು ಶ್ರೀದೇವಿ ಅವರನ್ನು ಅರಸಿಕೊಂಡು ಬಂದಿವೆ.