ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ ನಂತರ ಶ್ರುತಿ ಹರಿಹರನ್ ಚಿರತ್ರರಂಗದಿಂದ ದೂರಾಗಿದ್ದಾಳೆ. ಆಕೆಗೀಗ ಅವಕಾಶಗಳಿಗೂ ತತ್ವಾರವಾಗಿದೆ ಅನ್ನೋ ಮಾತೂ ಇದೆ. ಹೀಗಿರೋವಾಗಲೇ ಶ್ರುತಿ ಮತ್ತೆ ಚಿತ್ರೀಕರಣಕ್ಕೆ ಮರಳಲು ಮುಂದಾಗಿದ್ದಾಳೆ. ವಿಶೇಷವೆಂದರೆ ಆಕೆ ನಟಿಸುತ್ತಿರೋದು ಅರ್ಜುನ್ ಸರ್ಜಾ ಅಳಿಯ ಚಿರಂಜೀವಿ ಸರ್ಜಾ ಜೊತೆಗೆ!
ತಮ್ಮ ಮಾವನ ಮೇಲೆ ಮೀಟೂ ಆರೋಪ ಮಾಡಿದ ಶ್ರುತಿ ಮೇಲೆ ಚಿರು ಮತ್ತು ಧ್ರುವ ಕೆಂಡಾಮಂಡಲವಾಗಿದ್ದರು. ಧ್ರುವ ಅಂತೂ ಈ ಬಗ್ಗೆ ಮಾಧ್ಯಮಗಳ ಮುಖೇನ ಸಮರವನ್ನೇ ಸಾರಿದ್ದರು. ಅಂಥಾದ್ದರಲ್ಲಿ ಶ್ರುತಿ ಮತ್ತು ಚಿರಂಜೀವಿ ಒಟ್ಟಾಗಿ ನಟಿಸಲು ಸಾಧ್ಯವೇ? ಹೀಗೊಂದು ಅಚ್ಚರಿದಾಯಕ ಪ್ರಶ್ನೆ ಕಾಡೋದು ಸಹಜವೇ.
ಅಂದಹಾಗೆ ಶ್ರುತಿ ಮತ್ತು ಚಿರು ಒಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರೋದು ನಿಜವಂತೆ. ಕೆ ಎಂ ಚೈತನ್ಯ ತಮಿಳಿನ ಕ್ಷಣಂ ಸಿನಿಮಾವನ್ನ ರೀಮೇಕ್ ಮಾಡುತ್ತಿರೋದಾಗಿ ಬಹು ಹಿಂದೆಯೇ ಸುದ್ದಿಯಾಗಿತ್ತಲ್ಲಾ? ಅದಕ್ಕೆ ಆದ್ಯ ಅಂತ ಹೆಸರಿಡಲಾಗಿತ್ತು. ತುಂಬಾ ಹಿಂದೆಯೇ ಚಿತ್ರೀಕರಣ ಆರಂಭವಾಗಿದ್ದ ಈ ಚಿತ್ರದಲ್ಲಿ ಚಿರು, ಶ್ರುತಿ ಮತ್ತು ಸಂಗೀತಾ ಭಟ್ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಒಂದಷ್ಟು ಚಿತ್ರೀಕರಣ ಬಾಕಿ ಉಳಿದುಕೊಂಡಿತ್ತು.
ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಇನ್ನೇನು ಕೆಲ ಸೀನುಗಳಷ್ಟೇ ಬಾಕಿ ಉಳಿದುಕೊಂಡಿದ್ದಾಗಲೇ ಮೀಟೂ ಬಾಂಬು ಉಡಾವಣೆಯಾಗಿತ್ತು. ಒಂದೇ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದ ಚಿರು ಮತ್ತು ಶ್ರುತಿ ವಿರುದ್ಧ ದಿಕ್ಕುಗಳಾಗಿದ್ದರು. ಇದರಿಂದ ಚಿತ್ರತಂಡ ಪೇಚಿಗೆ ಸಿಲುಕಿಕೊಂಡಿತ್ತು. ಕಡೆಗೂ ಶ್ರುತಿ ಮತ್ತು ಚಿರು ಚಿತ್ರೀಕರಣ ಕಂಪ್ಲೀಟ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆಂಬ ಸುದ್ದಿ ಇದೆ. ಆದರೆ ಮೀಟೂ ಬಗ್ಗೆ ತನಗಾದ ಅನುಭವದ ಬಗ್ಗೆ ಹೇಳಿಕೊಂಡು, ಆ ನಂತರದ ಬೆಳವಣಿಗೆ ಕಂಡು ಚಿತ್ರರಂಗದಿಂದ ಸಂಗೀತ ಭಟ್ ದೂರಾಗಿದ್ದಾರೆ. ಆಕೆ ಮತ್ತೆ ಚಿತ್ರೀಕರಣ ಮುಗಿಸಿಕೊಡಲು ಒಪ್ಪಿಕೊಳ್ತಾಳಾ ಎಂಬ ಅನುಮಾನವೂ ಇದೆ!
#
No Comment! Be the first one.