ಕರ್ನಾಟಕದಲ್ಲಿ ಕನ್ನಡಿಗನೆ ಸ್ಟಾರ್ ಹಾಗೂ ಸಾರ್ವಭೌಮ ಎಂಬ ಅಂಶ ಹೊತ್ತ ‘ಸ್ಟಾರ್ ಕನ್ನಡಿಗ’ ಚಿತ್ರ ಕನ್ನಡ ರಾಜ್ಯೋತ್ಸವ ದಿವಸದಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ಮಾಪಕರಲ್ಲಿ ಮೂವರು ಆಟೋ ಚಾಲಕರು ಹಾಗೂ ಒಬ್ಬ ಕಾರು ಚಾಲಕ. ಇದು ಮಂಜುನಾಥ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿದೆ. ಮೂವರು ಆಟೋ ಚಾಲಕರು ಚನ್ನವೀರ, ಅರುಣ್, ಭೈರವ ಜೊತೆ ಕ್ಯಾಬ್ ಚಾಲಕ ಹರೀಶ್ ಜೋಗಿ ತಾವು ಕಷ್ಟ ಪಟ್ಟು ದುಡಿದಿದ್ದ ಹಣವನನ್ನು ಈ ಚಿತ್ರಕ್ಕಾಗಿ ತೊಡಗಿಸಿದ್ದಾರೆ.
ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ಕನ್ನಡದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಸುತ್ತ ಐದು ಹಾಡುಗಳೊಂದಿಗೆ ಚಿತ್ರ ತಯಾರಿಸಿದ್ದಾರೆ. ಇಲ್ಲಿ ಐದು ಹುಡುಗರು ಗುಂಪೊಂದು ಸ್ನೇಹ, ಪ್ರೀತಿ, ವಿಶ್ವಾಸ ಜೊತೆಗೆ ಕೆಲವು ಅನಿರೀಕ್ಷಿತ ತಿರುವುಗಳನ್ನು ಸಹ ಚಿತ್ರ ‘ಸ್ಟಾರ್ ಕನ್ನಡಿಗ’ ಒಳಗೊಂಡಿದೆ.
ಶಾಲಿನಿ ಭಟ್ ಚಿತ್ರದ ಕಥಾ ನಾಯಕಿ. ರಾಕ್ ಲೈನ್ ಸುಧಾಕರ್ ಅವರೊಬ್ಬರನ್ನು ಬಿಟ್ಟರೆ ಮಿಕ್ಕ ಬಹುತೇಕರು ಹೊಸಬರು. ಕಿರಣ್, ರೋಹಿತ್, ಕೆವಿನ್, ಹರೀಶ್, ಮೋಹನ್, ಎಂ ನಾಗಭೂಷಣ್, ಕೋಬ್ರಾ ನಾಗರಾಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಫ್ರಾನ್ಸಿಸ್ ಹಾಗೂ ಪ್ರತಾಪ್ ನೃತ್ಯ, ಮಹಾದೇವ ಛಾಯಾಗ್ರಹಣ, ಶಿವಕುಮಾರಸ್ವಾಮಿ ಸಂಕಲನ, ಪವನ್ ಪಾರ್ಥ ಹಿನ್ನಲೆ ಸಂಗೀತ ಈ ಚಿತ್ರಕ್ಕೆ ನೀಡಿದ್ದಾರೆ.
No Comment! Be the first one.