ಮೊದಲೆಲ್ಲಾ ಸಿನಿಮಾ ಅಂದರೆ ಅರೇ.. ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ.. ಬರೀ ದುಡ್ಡಿನವರಿಗೆ ಅದು ಹೇಳಿ ಮಾಡಿಸಿದ ಪ್ರೊಫೆಷನ್.. ಅಂತಹ ಹುಚ್ಚು ಆಲೋಚನೆಗಳನ್ನು ತೆಗೆದು ಬಿಸಾಕು ಅಂತ ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು. ಆದ ಈಗ ಹಾಗಲ್ಲ. ಕಾಲ ಬದಲಾಗಿದೆ. ಎಷ್ಟೋ ಪಾಲಕರೇ ತಮ್ಮ ಮಕ್ಕಳ ಕನಸನ್ನು ಈಡೇರಿಸಲು ಸ್ವತಃ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಸಿನಿಮಾ ಕ್ಷೇತ್ರ ಬರೀ ದುಡ್ಡಿರುವವರಿಗೆ ಇರದೇ ಪ್ರತಿಭೆ ಇರುವವರಿಗೂ ಅಲ್ಲಿ ಹೆಚ್ಚಿನ ಮನ್ನಣೆ ಎಂಬುದು ಸಾಕಷ್ಟು ನಿದರ್ಶನಗಳಿಂದ ಸಾಬೀತಾಗಿದೆ.
ಹೊಸ ಮುಖಗಳನ್ನು ಚಿತ್ರ ಜಗತ್ತು ಮುಕ್ತವಾಗಿ ಸ್ವಾಗತಿಸುತ್ತಿದೆ. ಅಂತಹ ಸಾಕಷ್ಟು ಹೊಸ ಪ್ರತಿಭೆಗಳು ಈಗಾಗಲೇ ಲಗ್ಗೆ ಇಡಲು ಶುರುವಿಟ್ಟಿದ್ದಾರೆ. ಅಂತಹ ಹೊಸಬರ ತಂಡವೇ ಸೇರಿ ಸಿದ್ದಪಡಿಸಿರುವ ಹೊಸ ಸಿನಿಮಾ ಸ್ಟಾರ್ ಕನ್ನಡಿಗ. ಬೋಲೋ ಕನ್ನಡಿಗಾ ಕೀ ಜೈ.. ಇದು ಕನ್ನಡಿಗರ ಕಥೆ ಎಂಬ ಟ್ಯಾಗ್ ಲೈನ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಶೇಷವೆಂದರೆ ಸಿನಿಮಾದೊಳಗೆ ಮತ್ತೊಂದು ಸಿನಿಮಾ ಕಥೆಯನ್ನು ಹೇಳಲಾಗಿದೆಯಂತೆ.
ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ಯಾವುದು ಗೆಲ್ಲುತ್ತೆ ಎಂಬುದೇ ಸ್ಟಾರ್ ಕನ್ನಡಿಗ ಚಿತ್ರದ ಒಂದೆಳೆ. ಪವರ್ಸ್ಟಾರ್, ಚಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್. ಎಲ್ಲಾ ಸ್ಟಾರ್ ಈ ಸ್ಟಾರ್ ಹಿಂದೇನೇ. ಗಾಂದಿನಗರದ ಗಲ್ಲಿಗೂ ಜನರ ದಿಲ್ಲಿಗೂ ಈ ಸ್ಟಾರ್ ಸೂಪರ್ಸ್ಟಾರ್ ಎಂದು ಪೋಸ್ಟರ್ನಲ್ಲಿ ಮುದ್ರಣವಾಗಿರುವ ವಾಕ್ಯಗಳಿಗೆ ಸಿನಿಮಾದಲ್ಲಿ ಉತ್ತರವನ್ನು ಹೇಳಲಾಗಿದೆಯಂತೆ.
ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು, ಬಿಡುವಿನಲ್ಲಿ ಸಂಭಾಷಣೆ, ಸಹ ನಿರ್ದೇಶನ ಮಾಡುತ್ತಿದ್ದ ವಿ.ಆರ್.ಮಂಜುನಾಥ್ಸಿನಿಮಾ ಕನಸು ಸ್ಟಾರ್ ಕನ್ನಡಿಗವನ್ನು ತಯಾರಿಸಲು ಪ್ರೇರಣೆ ನೀಡಿದ್ದಂತೆ. ಇವರಿಗೆ ಬೆಂಬಲವಾಗಿ ಆಟೋ ಚಾಲಕ ಗೆಳಯರಾದ ಚೆನ್ನೀರ, ಅರುಣ್ಕುಮಾರ್ ಮತ್ತು ಭೈರವ ಕೈ ಜೋಡಿಸಿದ್ದರಿಂದ ಸಿನಿಮಾ ಬಿಡುಗಡೆ ಹಂತದವರೆಗೂ ಬಂದಿದೆ. ನಿರ್ದೆಶನ ಹಾಗೂ ನಿರ್ಮಾಣದ ಜತೆಗೆ ನಾಯಕನಾಗಿಯೂ ಈ ಚಿತ್ರದಲ್ಲಿ ಮಂಜುನಾಥ ಕಾಣಿಸಿಕೊಂಡಿದ್ದಾರೆ.
ಇನ್ನು ಶಾಲಿನಿ ಭಟ್ ನಾಯಕಿಯಾಗಿ ಮಂಜುನಾಥ್ ಗೆ ಜತೆಯಾಗಿದ್ದು, ಚಿತ್ರದಲ್ಲಿ ಅವರು ಆಟೋ ಚಾಲಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ನಿರ್ಮಾಪಕನಾಗಿ ರಾಕ್ಲೈನ್ ಸುಧಾಕರ್, ಆಟೋ ಮಾಲೀಕನಾಗಿ ಕೋಬ್ರಾ ನಾಗರಾಜ್, ಹೊಸ ಪ್ರತಿಭೆಗಳಾದ ಕಿರಣ್, ರೋಹಿತ್, ಕೆವಿನ್, ಮೋಹನ್ ಮುಂತಾದವರು ನಟಿಸಿದ್ದಾರೆ.
No Comment! Be the first one.