ಬಾಲಿವುಡ್ ನಟಿ ವಾಣಿ ಕಪೂರ್ ಕೇವಲ ಎರಡೇ ತಿಂಗಳಲ್ಲಿ ಡಯಟ್ ಕಮ್ ಕಠಿಣ ವರ್ಕೌಟ್ ಮಾಡುವ ಮೂಲಕ ಸೂಪರ್ ಸ್ಲಿಮ್ ಆಗಿದ್ದಾರೆ. ಅವರ ಫಿಟ್ ನೆಸ್ ಟ್ರೇನರ್ ಯಾಸ್ಮಿನ್ ಕರಾಚಿವಾಲಾ ಅವರು ವಾಣಿ ಕಪೂರ್ ಅವರ ಸೂಪರ್ ಸ್ಲಿಮ್ ಬಾಡಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/B0nDRPLFaax/?utm_source=ig_web_copy_link
ವಾಣಿ ಕಪೂರ್ ಅವರು ಪೀಚ್ ಬಣ್ಣದ ಬಿಕಿನಿ ಧರಿಸಿ ನೀರಿನ ಮಧ್ಯ ಮಾದಕವಾಗಿ ಪೋಸ್ ಕೊಟ್ಟಿರುವ ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ. ನಟಿಯ ಅದ್ಭುತ ಬಾಡಿ ಟ್ರಾನ್ಸ್ಫಾರ್ಮೇಷನ್ಗೆ ನೋಡುಗರಿಂದ ಭರಪೂರ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಕುರಿತು ಮಾತನಾಡಿರುವ ವಾಣಿಯ ಫಿಟ್ನೆಸ್ ಟ್ರೇನರ್, ಈ ಪರ್ಫೆಕ್ಟ್ ಬಾಡಿ ಲುಕ್ ಗೆ ವಾಣಿ ಸೂಪರ್ ಡಯಟ್ ಜತೆಗೆ ಅತ್ಯಂತ ಕಠಿಣವಾಗಿರುವ ಪೈಲಟ್ಸ್ ವರ್ಕೌಟ್, ವ್ಯಾಯಾಮಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅವರು ಕೇವಲ ಹತ್ತು ವಾರಗಳಲ್ಲಿ ಸೂಪರ್ ಸ್ಲಿಮ್ ಆಗಲು ಸಾಧ್ಯವಾಯಿತು ಎಂದಿದ್ದಾರೆ. ಇನ್ನು ವಾಣಿ ಕಪೂರ್ ವಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ ಈ ಸಿನಿಮಾ ಬರುವ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
No Comment! Be the first one.