ಕಿಚ್ಚಾ ಸುದೀಪ್ ಕನ್ನಡದಲ್ಲಿ ಏಕ ಕಾಲದಲ್ಲಿಯೇ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಅವರು ತೆಲುಗು ಚಿತ್ರ ಸೈರಾ ದಲ್ಲಿ ಚಿರಂಜೀವಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇದೀಗ ಆ ಚಿತ್ರದ ಒಂದು ಹಂತದ ಚಿತ್ರೀಕರಣವನ್ನೂ ಸುದೀಪ್ ಮುಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿಯೇ ಮಹಾ ಅವಘಡವೊಂದರಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ!
ಸೈರಾ ಸ್ವಾತಂತ್ರ್ಯ ಯೋಧ ನರಸಿಂಹರೆಡ್ಡಿಯ ಜೀವನಗಾಥೆಯ ಚಿತ್ರ. ಈ ಚಿತ್ರದಲ್ಲಿ ಚಿರಂಜೀವಿ ನರಸಿಂಹ ರೆಡ್ಡಿಯಾಗಿ ನಟಿಸಿದರೆ, ಕಿಚ್ಚಾ ಸುದೀಪ್ ಸೇರಿದಂತೆ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರನೇಕರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಇಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನರಸಿಂಹ ರೆಡ್ಡಿ ಜೊತೆ ಕೈ ಜೋಡಿಸಿದ್ದ ಅವುಕು ಪ್ರಾಂತ್ಯದ ರಾಜನಾಗಿ ನಟಿಸಿದ್ದಾರೆ.
ಈ ಪಾತ್ರದ ಚಿತ್ರೀಕರಣದ ವೇಳೆ ಸುದೀಪ್ ಕುದುರೆ ಸವಾರಿ ನಡೆಸೋ ದೃಷ್ಯಗಳೂ ಇವೆ. ಇದರಲ್ಲಿ ಕಿಚ್ಚ ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಸುದೀಪ್ ಕುದುರೆಯಿಂದ ಕೆಳ ಬಿದ್ದಿದ್ದರು. ಒಂದಷ್ಟು ದೂರ ಕುದುರೆ ಅವರನ್ನು ಎಳೆದುಕೊಂಡು ಹೋಗಿತ್ತು. ಆದರೆ ಸುದೀಪ್ ಅವರಿಗೆ ಯಾವುದೇ ರೀತಿಯ ಗಾಯಗಳೂ ಆಗಿಲ್ಲ. ಕುದುರೆ ಸವಾರಿ ವೇಳೆ ಹಾಲಿವುಡ್ ಮಟ್ಟದಲ್ಲಿಯೂ ದುರಂತಗಳು ಸಂಭವಿಸಿವೆ. ಚಿತ್ರ ತಂಡ ಈ ಬಗ್ಗೆ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಅಂಥಾ ದುರಂತವೇನೂ ಸಂಭವಿಸಿಲ್ಲ.
ಹೀಗೆ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡಿರೋ ಸುದೀಪ್ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಗಾರ್ಜಿಯಾ ದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಪಕ್ಕಾ ಆಕ್ಷನ್ ಸೀನುಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
#
No Comment! Be the first one.