ಜೋಡಿ ಜೀವ ಮರೆಯಾದ ನೋವಿನ ನಡುವೆಯೂ ಸುಮಲತಾ ಅಂಬರೀಶ್ ಇದೀಗ ಸಂಕಟದ ಸಮಯದಲ್ಲಿ ಹೆಗಲಾದವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಸೇರಿದಂತೆ ಅಂಬಿ ಮರಣ ಹೊಂದಿದ ನಂತರ ದಿನಗಟ್ಟಲೆ ಜೊತೆಗಿದ್ದವರನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದೂರದ ದೇಶದಿಂದ ಧಾವಂತದಿಂದ ಬಂದು ಅಂಬಿ ಅಂತಿಮ ದರ್ಶನ ಪಡೆದ ದರ್ಶನ್ ಅವರ ಬಗೆಗೂ ಟ್ವೀಟ್ ಮೂಲಕ ಭಾವುಕರಾಗಿಯೇ ಕೆಲ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜೊತೆಯಾದ ಚಿತ್ರರಂಗಕ್ಕೆ ಹೃದಯಪೂರ್ವಕ ಧನ್ಯವಾದ ಸಮರ್ಪಿಸಿರುವ ಸುಮಲತಾ, ದರ್ಶನ್ ಅಂಬರೀಶ್ ಅವರ ಮತ್ತೊಬ್ಬ ಮಗನಿದ್ದಂತೆ. ದೂದರ ಸ್ಪೀಡನ್ ದೇಶದಲ್ಲಿದ್ದರೂ ಅಪ್ಪಾಜಿ ಮರಣದ ಸುದ್ದಿ ಕೇಳಿ ಬಂದು ದರ್ಶನ ಪಡೆದಿದ್ದರು ಅಂತ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಆರಂಭ ಕಾಲದಿಂದಲೂ ಅಂಬರೀಶದ್ ಅವರ ಬಗ್ಗಡೆ ಅಪಾರವಾದ ಪ್ರೀತಿ ಮತ್ತು ಗೌರವ ಹೊಂದಿದ್ದವರು. ಎಂಥಾ ಸಂದರ್ಭದಲ್ಲಿಯೂ ಅವರು ಅಂಬರೀಶ್ ಮನಾತನ್ನು ಕಡೆಗಣಿಸುತ್ತಿರಲಿಲ್ಲ. ಇನ್ನು ವ್ಯಕ್ತಿತ್ವದಲ್ಲಿಯೂ ಅಂಬಿ ಗುಣಗಳನ್ನೇ ಮೈಗೂಡಿಸಿಕೊಂಡಿರುವವರು ದರ್ಶನ್. ಅದೆಷ್ಟೇ ಬ್ಯುಸಿಯಾಗಿದ್ದರೂ ಆಗಾಗ ಮನೆಗೇ ತೆರಳಿ ಅಂಬರೀಶ್ ಜೊತೆ ಮಾತಾಡಿ ಬರುತ್ತಿದ್ದ ಒಂದಷ್ಟು ಜನರಲ್ಲಿ ದರ್ಶನ್ ಕೂಡಾ ಸೇರಿಕೊಂಡಿದ್ದಾರೆ. ಅಂಬಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳ ಸಂದರ್ಭದಲ್ಲಿಯೂ ಅಭಿಶೇಕ್ ಜೊತೆಗೇ ಇದ್ದು ಮತ್ತೋರ್ವ ಮಗನಂತೆಯೇ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ದರ್ಶನ್ ನೋಡಿಕೊಂಡಿದ್ದರು.
#
No Comment! Be the first one.