ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು.
ಬದುಕಲ್ಲಿ ಕಷ್ಟ ಕಂಡವರು ಮಾತ್ರ ಮತ್ತೊಬ್ಬರ ಕಣ್ಣೀರು ಒರೆಸಲು ಸಾಧ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವ ದೊಡ್ಡಬಳ್ಳಾಪುರದಲ್ಲಿ ದೊಡ್ಡರಾಯಪ್ಪನಹಳ್ಳಿ ಎನ್ನುವ ಪುಟ್ಟ ಗ್ರಾಮವೊಂದಿದೆ. ಆ ಗ್ರಾಮದಲ್ಲಿ ಹುಟ್ಟಿ ಬೆಳೆದು ಇಂದು ಮಾದರಿ ಮಹಿಳೆ ಅನ್ನಿಸಿಕೊಂಡಿರುವವರು ಸುನಿತಾ ಮಂಜುನಾಥ್. ಸ್ವಗ್ರಾಮದಲ್ಲೇ ಶಾಲಾ ವಿದ್ಯಾಭ್ಯಾಸ ಮುಗಿಸಿ, ನಂತರ ಬೆಂಗಳೂರಿಗೆ ಬಂದು ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡೇ ಇಂಜಿನಿಯರಿಂಗ್ ಪದವಿ ಪಡೆದವರು ಸುನಿತಾ. ತೀರಾ ಸಣ್ಣ ವಯಸ್ಸಿನಿಂದಲೂ ಸುನಿತಾರಿಗೆ ಅಶಕ್ತರು, ಕಡುಗಷ್ಟದಲ್ಲಿರುವವರನ್ನು ಕಂಡರೆ ಮಮತೆ. ಬೆಳೆಯುತ್ತಿದ್ದಂತೇ ಇವರ ಪರೋಪಕಾರದ ಗುಣ ಕೂಡಾ ಬೆಳೆಯುತ್ತಾ ಬಂದಿತ್ತು. ಸಮಸಿದ್ದಾಂತದ ಕಡೆ ಒಲವು ಬೆಳೆದಿತ್ತು. ಸಮಾಜದಲ್ಲಿರುವ ಎಲ್ಲರೂ ಒಂದೇ. ಎಲ್ಲರಿಗೂ ಒಂದೇ ಬಗೆಯ ಬದುಕುವ ಹಕ್ಕು ಸಿಗಬೇಕು ಅಂತಾ ಬಯಸಿದ್ದರು. ಈ ನಡುವೆ 2011ರಲ್ಲಿ ಮಂಜುನಾಥ್ ಅವರ ಜೊತೆ ಸುನಿತಾ ಹೊಸ ಬದುಕಿಗೆ ಹೆಜ್ಜೆ ಇರಿಸಿದರು.
ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು. ಚನ್ನಕೇಶವ ಎಜುಕೇಶನ್ ಟ್ರಸ್ಟ್ನಡಿ ನಡೆದುಬರುತ್ತಿರುವ ರಾಧಾಕೃಷ್ಣ ಪಬ್ಲಿಕ್ ಶಾಲೆಯ ಸಂಪೂರ್ಣ ಮೇಲ್ವಿಚಾರಣೆ ಸುನಿತಾ ವಹಿಸಿಕೊಂಡರು. ಶಾಲೆಯ ಕೆಲಸಗಳ ಜೊತೆಗೆ ಹಿಂದಿನಿಂದಲೂ ಪೊರೆದುಕೊಂಡು ಬಂದಿದ್ದ ಸಮಾಜ ಸೇವೆಯ ಕಾರ್ಯಗಳ ಕಡೆಗೆ ಹೆಚ್ಚು ಸಮಯ ನೀಡಿದರು. ಇವೆಲ್ಲದರ ಪ್ರತಿಫಲವಾಗಿ ಸುನಿತಾ ಮಂಜುನಾಥ್ ಇಂದು ಯುವ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸಮಾಜ ಸೇವೆಯ ಜೊತೆಗೆ ರಾಜಕಾರಣದಲ್ಲೂ ಮಹತ್ತರವಾದ ಹೆಜ್ಜೆ ಇರಿಸಿದ್ದಾರೆ.
ಸರಿಸುಮಾರು ನೂರು ಕನ್ನಡ ಶಾಲೆಗಳನ್ನು ದತ್ತು ಪಡೆದು ನವೀಕರಣಗೊಳಿಸುವ ಧ್ಯೇಯ ಇವರದ್ದಾಗಿದೆ. ಇದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಪ್ರಾಣಿಪ್ರೀತಿ ಕೂಡಾ ಇರಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯದಂತೆ ಜನಜಾಗೃತಿ ಮೂಡಿಸುವಲ್ಲಿ ಸುನಿತಾ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮಿಂದಾದಷ್ಟೂ ಜನರಿಗೆ ಪಟಾಕಿಯಿಂದಾಗುವ ಸಮಸ್ಯೆಗಳನ್ನು ವಿವರಿಸಿ, ಅದನ್ನು ಬಳಸದಂತೆ ಕೈಮುಗಿದು ಬೇಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಸುಮನಾ ಫೌಂಡೇಶನ್ ವತಿಯಿಂದ ಸರಿಸುಮಾರು ಇಪ್ಪತ್ತೈದು ಸಾವಿರದಷ್ಟು ಮಣ್ಣಿನ ದೀಪಗಳನ್ನು ಉಚಿತವಾಗಿ ಹಂಚಿದ್ದಾರೆ. ಜಗತ್ತು ಎಂತೆಂಥದ್ದೋ ಕಷ್ಟಗಳನ್ನು ಕಂಡಿದೆ. ನಮ್ಮ ಕಣ್ಣೆದುರಿಗಿನ ಜೀವಗಳಿಗೆ ನಮ್ಮಿಂದಾದ ಒಳಿತು ಮಾಡೋಣ ಎನ್ನುವ ಸುನಿತಾ ಮಂಜುನಾಥ್ ಯುವ ಪೀಳಿಗೆಗೆ ನಿಜಕ್ಕೂ ಸ್ಪೂರ್ತಿ ನೀಡುವ ಹೆಣ್ಣುಮಗಳಾಗಿದ್ದಾರೆ.
ಹಸಿದವರಿಗೆ ಗೊತ್ತು ಅನ್ನದ ಬೆಲೆ
ಸುನಿತಾ ಮಂಜುನಾಥ್ ಅವರು ತಮ್ಮ ಸುಮನಾ ಫೌಂಡೇಶನ್ ವತಿಯಿಂದ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ʻಹಸಿದವರಿಗೆ ಗೊತ್ತು ಅನ್ನದ ಬೆಲೆʼ ಹೆಸರಿನ ಕಾರ್ಯ ಕೂಡಾ ಅದರಲ್ಲಿ ಒಂದು. ಈ ಕಾರ್ಯಕ್ರಮದ ಮೂಲಕ ಪ್ರತಿದಿನ 250ಕ್ಕೂ ಹೆಚ್ಚು ಮಂದಿಗೆ ಅನ್ನ ದಾಸೋಹ ಮಾಡುತ್ತಿದ್ದಾರೆ. ನಿರ್ಗತಿಕರು, ದುಡಿಯಲು ಸಾಧ್ಯವಿಲ್ಲದ ಕೆಲವರು ಈ ದಾಸೋಹದ ಫಲಾನುಭವಿಗಳಾಗಿದ್ದಾರೆ. ಸುಮನಾ ಫೌಂಡೇಶನ್ ಸರ್ಕಾರದ ಸವಲತ್ತುಗಳನ್ನು ತಲುಪಬೇಕಾದವರಿಗೆ ತಲುಪುವ ಪುಣ್ಯದ ಕೆಲಸವನ್ನೂ ಮಾಡುತ್ತಾ ಬರುತ್ತಿದೆ. ಈ ವರೆಗೆ ಹತ್ತು ಸಾವಿರ ಆಯುಷ್ಮಾನ್ ಕಾರ್ಡ್ ಗಳನ್ನು ಅಗತ್ಯವಿದ್ದವರಿಗೆ ಕೊಡಿಸಿದ ಕೀರ್ತಿ ಈ ಸಂಸ್ಥೆಯದ್ದು. ಸ್ವಚ್ಚ ಭಾರದ, ಸುಂದರ ಭಾರತ ಹೆಸರಿನ ಅಭಿಯಾನ ನಡೆಸಿ 300ಕ್ಕೂ ಹೆಚ್ಚು ಕಾರ್ಯಕ್ರಮವನ್ನು ಕೂಡಾ ಆಯೋಜಿಸಿದ್ದಾರೆ. ಕನ್ನಡ ಉಳಿಸಿ ಕನ್ನಡ ಬೆಳೆಸಿ ಕಾರ್ಯಕ್ರಮದಡಿ 50 ಶಾಲೆಗಳಿಗೆ ಸುಣ್ಣ ಬಣ್ಣ, ಮಕ್ಕಳಿಗೆ ಓದಲು ಬೇಕಾದ ಎಲ್ಲಾ ಸಲಕರಣೆಗಳು ಹಾಗೂ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದಾರೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಹಿಳೆಯರಿಗೆ ಕರಕುಶಲ ತರಬೇತಿ ಕಾರ್ಯಕ್ರಮ ನಡೆಸಿ, ಉಚಿತವಾಗಿ ಹಲವು ಮಹಿಳೆಯರಿಗೆ ಟೈಲರಿಂಗ್ ಯಂತ್ರ ಕೊಡಿಸಿದ್ದಾರೆ. ರಕ್ತದಾನ ಹಾಗೂ ಕಣ್ಣು ಪರೀಕ್ಷಾ ಕ್ಯಾಂಪ್ ಗಳನ್ನು ನಡೆಸಿದ್ದಾರೆ. ಬಂಡೀಪುರ ಅರಣ್ಯ ನಾಶವಾಗುತ್ತಿದ್ದ ಸಮಯದಲ್ಲಿ, ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಜನರಿಗೆ ಕೈಲಾದಷ್ಟೂ ನೆರವು ನೀಡಿದ್ದಾರೆ. ಕೋವಿಡ್ ಧುರಿತ ಸಮಯದಲ್ಲಿ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದಾರೆ. ರೈತರು ಬೆಳೆದ ತರಕಾರಿಗಳನ್ನು ಅವರಿಂದಲೇ ಖರೀದಿಸಿ ಜನರಿಗೆ ಉಚಿತವಾಗಿ ನೀಡಿದ್ದಾರೆ.
ಸುಮನಾ ಕಲ್ಪಿಸಿದ ಸೂರು
ಸುಮನಾ ಸೂರು ಎಂಬ ಹೆಸರಿನಲ್ಲಿ ಹಲವು ಜನರಿಂದ ಸಹಾಯ ಪಡೆದು ಸೂರಿಲ್ಲದವರಿಗೆ ಮನೆ ನಿರ್ಮಿಸಿಕೊಡುವ ಕೆಲಸ ನಿಜಕ್ಕೂ ಸುಮನಾ ಸಂಸ್ಥೆಯ ಹೆಮ್ಮೆಯ ಕೆಲಸ. ಈ ಕಾರ್ಯಕ್ರಮದಡಿಯಲ್ಲಿ ಮುಂದಿನ ಐದು ವರ್ಷದಲ್ಲಿ 25ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಸದುದ್ದೇಶವನ್ನು ಸುನಿತಾ ಹಮ್ಮಿಕೊಂಡಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು
ಸುನೀತಾ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಇನ್ನಿತರೆ ಪ್ರಶಸ್ತಿಗಳು, ದೆಹಲಿ, ಹೈದ್ರಾಬಾದ್, ಕಲ್ಕತ್ತಾ ಎಲ್ಲ ಕಡೆ ಇವರ ಸಾಮಾಜಿಕ ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.
No Comment! Be the first one.