ಬಾಲಿವುಡ್ ನ ನಟಿ ಸ್ವರ ಭಾಸ್ಕರ್ ಬೋಲ್ಡಾಗಿ ಅಪಪ್ರಚಾರದ ಅರಿವಿದ್ದರೂ ಇಲ್ಲದಂತೆ ವೀರ್ ದಿ ವೆಡ್ಡಿಂಗ್ ಸಿನಿಮಾದಲ್ಲಿ ಹಸ್ತ ಮೈಥುನದ ಸೀನ್ ನಲ್ಲಿ ನಟಿಸಿದ್ದಾರೆ. ಇದು ಆಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಲು ಪ್ರಮುಖ ಗುರಿಯಾಗಿತ್ತು. ಮೇಲಾಗಿ ಲೈಂಗಿಕ ಉದ್ರೇಕವನ್ನು ಪ್ರಚೋದಿಸುವ ಪಾತ್ರದಲ್ಲಿ ನಟಿಸಿರುವುದು ಟ್ರೋಲಿಗರಿಗೆ ಆಹಾರವಾಗಲು ಕಾರಣವಾಗಿತ್ತು.
ಮುಂಬೈನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೋಮವಾರ ಒಬ್ಬ ಮಧ್ಯ ವಯಸ್ಕ ಹಾಗೂ ಮಹಿಳೆ ಕೈನಲ್ಲಿ ಪ್ಲೇ ಕಾರ್ಡ್ ನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಆ ಕಾರ್ಡಿನಲ್ಲಿ ಮರೆಯದೇ ವೋಟ್ ಮಾಡಿ ಎನ್ನುವುದನ್ನು ತಿಳಿಸುವ ಜತೆಗೆ ಸ್ವರ ಭಾಸ್ಕರ್ ಅವರನ್ನು ಗುರಿಯಾಗಿಸುವಂತೆಯೂ ಇತ್ತು.
ಆ ಕಾರ್ಡಿನಲ್ಲಿ,
ಚುನಾವಣೆಯಲ್ಲಿ ಸ್ವರ ಭಾಸ್ಕರ್ ನಿನ್ನ ಬೆರಳನ್ನು ಬುದ್ದಿವಂತಿಕೆಯಿಂದ ವೋಟು ಹಾಕುವುದಕ್ಕೆ ಬಳಸು” ಎಂದು ಬರೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವರ ಭಾಸ್ಕರ್ ಆಕೆಯ ಸ್ವಂತ ಸ್ಟೈಲ್ ನಲ್ಲಿ ವ್ಹಾ… ನನ್ನ ಮೇಲೆ ಟ್ರೋಲ್ ಮಾಡುವುದಕ್ಕೆ ಬಹಳಷ್ಟು ಕಷ್ಟಪಡುತ್ತಿದ್ದಾರೆ. ನೀವೆಲ್ಲರೂ ಈ ಕೆಲಸದಲ್ಲಿ ಬಹಳಷ್ಟು ಪ್ರೀತಿಯಿಂದ, ಶ್ರದ್ದೆಯಿಂದ ಮಾಡುತ್ತಿದ್ದೀರಿ. ಆದರೆ ಪರಿಜ್ಞಾನವಿರಲಿ.. ಲವ್ ಎಂದು ತಿಳಿಸಿದ್ದಾರೆ.