ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರ ಪೈಕಿ ತಾನ್ಯ ಹೋಪ್ ಕೂಡ ಒಬ್ಬರು. ತುಂಟ ನಗೆಯಿಂದಲೇ ಕನ್ನಡಿಗರ ಹಾರ್ಟ್ ಫೇವರೇಟ್ ಆಗಿರುವ ತಾನ್ಯ ಹೋಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಬಸಣ್ಣಿ ಬಾ ಅಂತ ಸ್ಟೆಪ್ ಹಾಕಿ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಳು. ಸದ್ಯ ರೆಬಲ್ ಸ್ಟಾರ್ ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ಅವರ ಅಮರ್ ಸಿನಿಮಾದಲ್ಲಿ ನಟಿಸಿರುವ ತಾನ್ಯ ಹೋಪ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈತನ್ಮಧ್ಯೆ ಪ್ರೇಕ್ಷಕರಿಗೆ ಹೊಸ ಅವತಾರದಲ್ಲಿ ಕಾಣಿಸಿದ್ದು, ಪಡ್ಡೆ ಹೈಕಳು ಕಣ್ಣಗಲಿಸಿ ನೋಡುವಂತಾಗಿದೆ.
ಇತ್ತೀಚಿಗೆ ತಾನ್ಯ ಸ್ವಿಮ್ಮಿಂಗ್ ಪೂಲ್ ನಲ್ಲಿ ಹ್ಯಾಪಿ ಮೂಡ್ ನಲ್ಲಿ ಸ್ವಿಮಿಂಗ್ ಮಾಡುತ್ತಾ ಬಿಕಿನಿಯಲ್ಲಿ ಫೋಸ್ ಕೊಟ್ಟಿದ್ದಾರೆ. ಸದ್ಯ ಈ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು, ಪಡ್ಡೆಹುಡುಗರ ಮೈ ಬಿಸಿಯೇರಿಸಿದೆ. ಅಮರ ಹೊರತಾಗಿ ತಾನ್ಯ ಹೋಪ್ ಚಿರಂಜೀವಿ ಸರ್ಜಾರ ಖಾಕಿ ಸಿನಿಮಾದಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸಿದ್ದಾರೆ.
Leave a Reply
You must be logged in to post a comment.