ಬರೋಬ್ಬರಿ ನಾಲ್ಕು ವರ್ಷಗಳ ನಂತರ ತಾಪ್ಸಿ ಪನ್ನು ತಮಿಳು ಚಿತ್ರವೊಂದರಲ್ಲಿ ನಟಿಸುವುದು ಕನ್ ಫರ್ಮ್ ಆಗಿದೆ. ಈ ಚಿತ್ರವನ್ನು ಅಹ್ಮದ್ ನಿರ್ದೇಶನ ಮಾಡಲಿದ್ದು, ತಾಪ್ಸಿ ಜಯಂ ರವಿ ಜತೆ ರೊಮ್ಯಾನ್ಸ್ ಮಾಡಲಿದ್ದಾರೆಂಬ ಗುಸು ಗುಸು ಕಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಜಯಂ ರವಿ ನಟಿಸಿರುವ ಕೋಮಲಿ ಚಿತ್ರವು ಇತ್ತೀಚಿಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸಿನಲ್ಲಿ ಕಮಾಲು ಮಾಡುತ್ತಿದೆ. ಈ ಮಧ್ಯೆ ಅವರ ಹೊಸ ಸಿನಿಮಾವೂ ಸೆಟ್ಟೇರುವ ಸಾಧ್ಯತೆ ಇದೆ. ಈಗಾಗಲೇ ಹೊಸ ಚಿತ್ರ ತಯಾರಿಯಲ್ಲಿ ಸಾಕಷ್ಟು ಚಿತ್ರತಂಡವಿದ್ದು, ನಾಯಕಿಯ ಆಯ್ಕೆ ಫೈನಲ್ ಆಗಿದೆ.
2015ರಲ್ಲಿ ವೈ ರಾಜಾ ವೈ ಚಿತ್ರದಲ್ಲಿ ನಟಿಸಿದ್ದ ತಾಪ್ಸಿ ನಂತರ ಗೇಮ್ ಓವರ್ ಸಿನಿಮಾದಲ್ಲಿಯೂ ಅಭಿನಯಿಸಿದ್ದರು. ಈ ಚಿತ್ರವು ಕಾಲಿವುಡ್ನಲ್ಲಿ ತಾಪ್ಸಿ 2015ರಲ್ಲಿ ಬಿಡುಗಡೆಯಾದ ‘ವೈ ರಾಜಾ ವೈ’ ಚಿತ್ರದಲ್ಲಿ ನಟಿಸಿದ್ದರು.ಏಕಕಾಲದಲ್ಲಿಯೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಂತರ ತಮಿಳು ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು ಹಿಂದಿ ಸಿನಿಮಾಗಳತ್ತ ಗಮನ ಹರಿಸಿದ್ದ ತಾಪ್ಸಿ ಮತ್ತೆ ತಮಿಳಿಗೆ ಕಮ್ ಬ್ಯಾಕ್ ಆಗಿದ್ದಾರೆ.
No Comment! Be the first one.