ಉಡುಂಬ ಚಿತ್ರಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಅಖಾಡಕ್ಕೆ ಇಳಿದಿರುವ ಪವನ್ ಶೌರ್ಯ ಚಿತ್ರಕ್ಕಾಗಿ ಜಿಮ್ ನಲ್ಲಿ ಬೆವರಿಳಿಸಿ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ. ಮೇಲಾಗಿ ಉಡುಂಬ ಚಿತ್ರದಲ್ಲಿ ಪವನ್ ಸೂರ್ಯ ನೈಜತೆಗೆ ಹೆಚ್ಚು ಆದ್ಯತೆ ನೀಡಿ ಆ್ಯಕ್ಷನ್ ದೃಶ್ಯಗಳಿಗೆ ಯಾವುದೇ ರೋಪ್, ಡ್ಯೂಪ್ ಇಲ್ಲದೆಯೇ ನಟಿಸಿರುವುದು ಸಹ ನಾಯಕನ ಸಿನಿಮಾಸಕ್ತಿಗೆ ಹಿಡಿದ ಕನ್ನಡಿ. ಗೂಳಿ ಹಟ್ಟಿ, ಹಾಲುತುಪ್ಪ ಚಿತ್ರದ ನಂತರ ಪವನ್ ಶೌರ್ಯ ನಟಿಸುತ್ತಿರುವ ಹೊಸ ಸಿನಿಮಾ ಇದಾಗಿದ್ದು, ಗೂಳಿಹಟ್ಟಿ ನಂತರ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಚಿತ್ರದಲ್ಲಿ ಮೀನುಗಾರರ ಹುಡುಗನಾಗಿ ನಟಿಸಿದ್ದಾರೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಹುಡುಂಬ ಪೋಸ್ಟರ್ ಸಹ ಹೆಚ್ಚು ಸದ್ದು ಮಾಡುತ್ತಿದ್ದು, ಪೋಸ್ಟರ್ ನಲ್ಲಿ ನಾಯಕನ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾ ಬಿಡುಗಡೆಯಾದ ಮೇಲೆ ಅದೂ ಟ್ರೆಂಡ್ ಆಗುವ ಸಾಧ್ಯತೆಯೂ ಇದೆ. ಉಡುಂಬ ಚಿತ್ರವನ್ನು ಆಂಧ್ರಪ್ರದೇಶದ ಹನುಮಂತ ರಾವ್ ಮತ್ತು ವೆಂಕಟರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಶಿವರಾಜ್ ಉಡುಂಬವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪವನ್ ಶೌರ್ಯ ಗೆ ಹುಲಿರಾಯ ಖ್ಯಾತಿಯ ಚಿರಶ್ರೀ ನಾಯಕಿಯಾಗಿ ಜತೆಯಾಗಿದ್ದಾರೆ. ಈಗಾಗಲೇ ಆಡಿಯೋ ಬಿಡುಗಡೆ ಮಾಡಿಕೊಂಡಿರುವ ಉಡುಂಬ ಇದೇ ತಿಂಗಳ ಆಗಸ್ಟ್ 23ರಂದು ಬಿಡುಗಡೆಯಾಗಲಿದೆ.