ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ! ಕಾಲಿಟ್ಟಲ್ಲೆಲ್ಲಾ ಕಿರಿಕ್ಕು, ಕೈಜೋಡಿಸಿದವರ ಜೊತೆಗೆಲ್ಲಾ ಖ್ಯಾತೆ, ರಗಳೆಗಳಿಲ್ಲದಿದ್ದರೆ ಇವರಿಗೆ ತಿಂದಿದ್ದು ಅರಗೋದೇ ಇಲ್ಲ. ಅದ್ಯಾವುದೋ ಬಿಗ್ ಬಾಸು ಅನ್ನೋ ಬಿಕನಾಸಿ ಶೋ ಮೂಲಕ ಜಗತ್ತಿಗೆ ಗೊತ್ತಾದವಳು ಸಂಜನಾ.

ಬಿಗ್ ಬಾಸಿಂದ ಹೊರಬರುತ್ತಿದ್ದಂತೇ ಈ ಹುಡುಗಿ ಆಡಿದ ಆಟ ಒಂದಾ ಎರಡಾ? ಸುದ್ದಿಯಲ್ಲಿರಬೇಕು ಅನ್ನೋ ಚಟಕ್ಕೆ ಬಿದ್ದವಳಂತೆ ನಡೆದುಕೊಂಡುಬಿಟ್ಟಳು. ಪಾಪದ ಭುವನ್ ಮತ್ತು ಒಳ್ಳೇಹುಡುಗ ಪ್ರಥಮ್ ನಡುವೆ ರಣರಂಪ ಸೃಷ್ಟಿಸಿದ್ದಳು. ಹೋದಬಂದಲ್ಲೆಲ್ಲಾ ಈ ಹುಡುಗಿ ಯಡವಟ್ಟು ಮಾಡಿಕೊಳ್ಳುತ್ತಿತ್ತು. ಈ ಚಾಳಿ ಇನ್ನೂ ಈಕೆಗೆ ಕಡಿಮೆಯಾದಂತೆ ಕಾಣುತ್ತಿಲ್ಲ.

ಈ ವಾರ ತೆರೆಗೆ ಬರುತ್ತಿರುವ ‘ಉಡುಂಬಾ’ ಸಿನಿಮಾದಲ್ಲಿ ಒಂದು ಹಾಡು ಮತ್ತೆರಡು ದೃಶ್ಯಗಳಲ್ಲೇನೋ ನಟಿಸಿದ್ದಾಳಂತೆ. ಯಾಕಾದರೂ ಇವಳನ್ನು ತಮ್ಮ ಸಿನಿಮಾಗೆ ಹಾಕಿಕೊಂಡೆವೋ ಅನ್ನುವಷ್ಟರಮಟ್ಟಿಗೆ ‘ಉಡುಂಬಾ’ಗೆ ಈಕೆ ಉಸಿರುಗಟ್ಟಿಸಿದ್ದಾಳೆ. ಇವರಿಗೆ ಮೊದಲಿಗೆ ಡೇಟು ಕೊಟ್ಟು, ಅದೇ ಡೇಟನ್ನು ಮತ್ತೊಬ್ಬರಿಗೆ ಕೊಟ್ಟು ಸತಾಯಿಸುವುದನ್ನೆಲ್ಲಾ ಮಾಡಿ ಹೆಣಗಾಡಿಸಿದ್ದಳು. ಹೇಗಾದರೂ ಮಾಡಿ ಸಿನಿಮಾ ಮುಗಿಸಿಕೊಂಡರೆ ಸಾಕು ಅನ್ನುವಂತಾಗಿತ್ತು. ಸಿನಿಮಾ ಮುಗಿದ ನಂತರವೂ ಸಂಜನಾಳ ಟಾರ್ಚರು ಮುಂದುವರೆದಿದೆ. ಇತ್ತೀಚೆಗೆ ‘ಸವಾಲ್ ಗೆ ಸೈ’ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಉಡುಂಬಾ ತಂಡ ಚೆನ್ನೈಗೆ ಹೋಗಬೇಕಿತ್ತು. ಉದಯ ಟೀವಿ ಟೀಮು ಅದೆಷ್ಟು ಪ್ರೊಫೆಷನಲ್ಲು ಅಂದರೆ, ತಿಂಗಳಿಗೆ ಮುಂಚೆಯೇ ಡೇಟು ಫಿಕ್ಸ್ ಮಾಡಿ ಕನ್ಫರ್ಮ್ ಮಾಡಿಕೊಂಡಿರುತ್ತದೆ. ಹೀಗಿರುವಾಗ ಹದಿನೈದು ದಿನಗಳಿಂದ ಬರ್ತೀನಿ ಬರ್ತೀನಿ ಅಂತಾ ಕಾಗೆ ಹಾರಿಸಿದ್ದ ಸಂಜನಾ ಕಡೇ ಗಳಿಗೆಯಲ್ಲಿ ಕೈಕೊಟ್ಟಳಂತೆ!

ಮೊದಲೆಲ್ಲಾ ತನ್ನ ಮಗಳ ಎಲ್ಲ ಆಟಗಳಿಗೂ ವಕಾಲತ್ತು ವಹಿಸುತ್ತಿದ್ದವರು ಆಕೆಯ ತಾಯಿ. ಈಗ ‘ಏನ್ರೀ ನಿಮ್ಮ ಮಗಳು ಸಂಜನಾ ಹಿಂಗೆಲ್ಲಾ ಮಾಡ್ತಾಳೆ?’ ಅಂತಾ ಯಾರಾದರೂ ಪ್ರಶ್ನಿಸಿದರೆ ‘ಅಯ್ಯೋ ಏನ್ ಮಾಡೋದು.. ನನ್ ಮಗಳು ನನ್ನ ಮಾತನ್ನೇ ಕೇಳೋದಿಲ್ಲ’ ಅಂತಾ ಹಣೆ ಹಣೆ ಚಚ್ಚಿಕೊಂಡು ಗೊಳೋ ಅಂತಾ ಕಣ್ಣೀರು ಸುರಿಸುತ್ತಾಳಂತೆ!

ಹೆತ್ತ ಕಾರಣಕ್ಕೆ ತಾಯಿಯೇನೇ ಸಂಜನಾಳ ಉಪಟಳಗಳನ್ನೆಲ್ಲಾ ಸಹಿಸಿಕೊಳ್ಳಬಹುದು. ಆದರೆ ಕಾಸು ಕೊಟ್ಟವರು ಇವಳಿಂದ ಸಮಸ್ಯೆ ಅನುಭವಿಸಬೇಕು ಅಂದರೆ ಯಾವ ನ್ಯಾಯ?

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಉತ್ತರ ಕರ್ನಾಟಕ ನೆರೆ ಹಾವಳಿಯ ಕುರಿತು ಮಿಡಿದ ಯುವ ರಾಜ್ ಕುಮಾರ್!

Previous article

ಮಗನೊಂದಿಗೆ ಮರಳಿದ ತಮಟೆ ಮಲ್ಲು!

Next article

You may also like

Comments

Leave a reply

Your email address will not be published. Required fields are marked *