ತಂದೆಗಿರುವ ಸ್ಟಾರ್ ಪಟ್ಟದ ಜತೆಗೂ ಸ್ವ ಪ್ರತಿಭೆಯಿಂದ ಬೇಡಿಕೆ ಸೃಷ್ಟಿಸಿರುವ ನಟಿ ವರಲಕ್ಷ್ಮೀ ಶರತ್ ಕುಮಾರ್. ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ಪ್ರತಿಯೊಂದು ಚಿತ್ರದಲ್ಲಿಯೂ ಸವಾಲಿನ ಪಾತ್ರಗಳನ್ನೇ ಅವರು ಚ್ಯೂಸ್ ಮಾಡುತ್ತಾರೆ. ಸದ್ಯ ವರಲಕ್ಷ್ಮೀ ಮಹಿಳಾ ಪ್ರಧಾನ ಸಿನಿಮಾಗಳಾದ ವೆಲ್ವೆಟ್ ನಗರಮ್, ಡ್ಯಾನಿ, ರಾಜಾ ಪಾರವಾಯ್ ಮತ್ತು ಕಟ್ಟರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚೇಸಿಂಗ್ ಎನ್ನುವ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯರಾಗಿರುವ ವರಲಕ್ಷ್ಮೀ ಚಿತ್ರದಲ್ಲಿ ಬೈಕರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.
https://twitter.com/varusarath/status/1133706144784850945
ಚೇಸಿಂಗ್ ನ ಸಾಹಸ ದೃಶ್ಯವೊಂದಕ್ಕೆ ಯಾವುದೇ ರೋಪ್ ಗಳ ಸಹಾಯವನ್ನು ಪಡೆದುಕೊಳ್ಳದೇ ಸ್ಟಂಟ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ವೀರಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಯಮುನಾ ಚಿಂದುರೈ, ಬಾಲಾ ಸರವಣನ್, ಜೆರಾಲ್ಡ್, ಸ್ವಿಸ್ ರಘು ವರಲಕ್ಷ್ಮೀಗೆ ಜತೆಯಾಗಿದ್ದಾರೆ.
Leave a Reply
You must be logged in to post a comment.