ಯಾವಾಗ ನಟ ದರ್ಶನ್ ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯ ಶುರು ಮಾಡಿದರೋ? ಆಗಿನಿಂದ ಅವರನ್ನು ಅನುಸರಿಸುವ ಉಳಿದ ನಟರೂ ತಮಗಿಷ್ಟವಾದ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಈಗ ವಸಿಷ್ಠ ಕೂಡಾ ಅದೇ ಲಿಸ್ಟಿಗೆ ಸೇರಿದ್ದಾರೆ.
ರಾಜಾ ಹುಲಿ, ರುದ್ರ ತಾಂಡವ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಅನ್ನಿಸಿಕೊಂಡು, ನಂತರ ಅಲೋನ್ ಚಿತ್ರದ ಮೂಲಕ ಹೀರೋ ಕೂಡಾ ಆಗಿದ್ದವರು ನಟ ವಸಿಷ್ಠ ಸಿಂಹ. ಇಂಥಾ ವಸಿಷ್ಠರನ್ನು ಜನ ಗುರುತಿಸಿದ್ದು ಮಫ್ತಿ, ಗೋಧಿ ಬಣ್ಣ ಮತ್ತು ಟಗರು ಸಿನಿಮಾಗಳಲ್ಲಿ ಮಾತ್ರ. ಯಾವಾಗ ಟಗರು ಸಿನಿಮಾದಲ್ಲಿ ಚಿಟ್ಟೆ ಕ್ಯಾರೆಕ್ಟರ್ ಗಮನ ಸೆಳೆಯಿತೋ ವಸಿಷ್ಠ ಕೆರಿಯರ್ ಕೂಡಾ ಬೇರೆ ಮಟ್ಟದಲ್ಲಿ ಟೇಕಾಫ್ ಆಯಿತು. ಈಗ ತಮಿಳು, ತೆಲುಗು ಸಿನಿಮಾಗಳಿಗೂ ವಸಿಷ್ಠ ಎಂಟ್ರಿ ಕೊಟ್ಟಿದ್ದಾರೆ.
ಟಗರು ನಂತರ ವಸಿಷ್ಠ ಸ್ಟಾರ್ ವರ್ಚಸ್ಸು ಪಡೆದರಲ್ಲಾ? ಅದಾದ ನಂತರ ತಯಾರಾದ ಸಿನಿಮಾ ಇಂಡಿಯಾ ವರ್ಸಸ್ ಇಂಗ್ಲೆಂಡ್. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರ ಅಂದುಕೊಂಡಂತೆ ಗೆಲುವು ಕಾಣಲಿಲ್ಲ. ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾವನ್ನು ಒಪ್ಪಿದ್ದೇ ವಸಿಷ್ಠ ಮಾಡಿದ ತಪ್ಪು ಅನ್ನುವುದು ಬಿಟ್ಟರೆ ಸಿನಿಮಾದ ಸೋಲಿಗೆ ಬೇರೆಯದ್ದೇ ಕಾರಣಗಿಳಿದ್ದವು. ಬಹುಶಃ ಈ ಕೆಟ್ಟ ಅನುಭವದ ನಂತರ ಎಚ್ಚೆತ್ತ ವಸಿಷ್ಠ ಹೀರೋ ಆಗುವ ಕಡೆ ಹೆಚ್ಚು ಗಮನ ಕೊಡದೇ ಒಳ್ಳೆ ಪಾತ್ರಗಳನ್ನು ಒಪ್ಪಿ ನಟಿಸುವುದನ್ನು ಮುಂದುವರೆಸಿದ್ದಾರೆ. ಇವರ ನಟನೆಯ ಕಾಲಚಕ್ರ, ಯುವರತ್ನ ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಒಟ್ಟಾರೆ, ಸದ್ಯದ ಪರಿಸ್ಥಿತಿ ಗಮನಿಸಿದರೆ ಗಟ್ಟಿ ದನಿಯ ವಸಿಷ್ಠ ಭಾರತೀಯ ಚಿತ್ರರಂಗದಲ್ಲಿ ಗಟ್ಟಿಯಾಗೇ ನೆಲೆಸುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಇವೆಲ್ಲ ಖುಷಿಯ ಜೊತೆಗೇ ವಸಿಷ್ಠ ತಮ್ಮ ಸಾಮಾಜಿಕ ಕಾಳಜಿ, ಪ್ರಾಣಿ ಪ್ರೀತಿಯನ್ನೂ ಪ್ರದರ್ಶಿಸುತ್ತಿದ್ದಾರೆ. ಹೆಸರಿನಲ್ಲೇ ಸಿಂಹವನ್ನಿಟ್ಟುಕೊಂಡಿರುವ ವಸಿಷ್ಠ ಈಗ ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿನಲ್ಲಿರುವ ಸಿಂಹವೊಂದನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುತ್ತಿದ್ದಾರೆ.
ಯಾವಾಗ ನಟ ದರ್ಶನ್ ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯ ಶುರು ಮಾಡಿದರೋ? ಆಗಿನಿಂದ ಅವರನ್ನು ಅನುಸರಿಸುವ ಉಳಿದ ನಟರೂ ತಮಗಿಷ್ಟವಾದ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಈಗ ವಸಿಷ್ಠ ಕೂಡಾ ಅದೇ ಲಿಸ್ಟಿಗೆ ಸೇರಿದ್ದಾರೆ. ʻದರ್ಶನ್ ಅವರ ವ್ಯಕ್ತಿತ್ವ ಮಾದರಿಯಾಗಿದೆ. ಬದುಕಿದರೆ ಅವರಂತೆ ಬದುಕಬೇಕುʼ ಎಂದೆಲ್ಲಾ ಈ ಹಿಂದೆ ದರ್ಶನ್ ಅವರ ಗುಣವಿಶೇಷಣಗಳನ್ನು ವಸಿಷ್ಠ ಹೊಗಳಿ ಕೊಂಡಾಡಿದ್ದರು. ಈಗ ಸಿಂಹವನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರ ಹಾದಿಯನ್ನು ಅನುಸರಿಸುತ್ತಿದ್ದಾರೆ ಅನ್ನೋದನ್ನು ಅಕ್ಷರಶಃ ನಿಜವಾಗಿಸಿದ್ದಾರೆ.
Comments