ಇತ್ತೀಚಿನ ದಿನಗಳಲ್ಲಿ ಆಲ್ಬಮ್ ಮ್ಯೂಜಿಕ್ ಟ್ರೆಂಡ್ ಹೆಚ್ಚಾಗಿದೆ. ಚಿತ್ರರಂಗದಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಈಗ ಶಾರ್ಟ್ ಫಿಲಂ ಹಾಗೂ ಮ್ಯೂಜಿಕ್ ಆಲ್ಬಮ್ ಒಂದು ವೇದಿಕೆ ಕಲ್ಪಿಸಿಕೊಡುವಂತಾಗಿದೆ. ಅದೇ ರೀತಿ ಇಲ್ಲೊಬ್ಬ ಪ್ರತಿಭೆ ರವಿಚಂದ್ರ (ರವಿ ಆರ್.ಸಿ.ಎಸ್.) ಎರಡು ಮ್ಯೂಜಿಕ್ ವೀಡಿಯೋ ಗೀತೆಗಳನ್ನು ನಿರ್ಮಿಸಿದ್ದಾರೆ. ಫ್ಯಾನ್ ಆಫ್ ಚಂದನ್ ಹಾಗೂ ವರ್ಲ್ಡ್ ಕಪ್ ನಮ್ದೆ ಎಂಬ ಈ ಗೀತೆಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಎರಡು ಗೀತೆಗಳಿಗೆ ಸಾಹಿತ್ಯ ರಚಿಸಿ ರವಿಚಂದ್ರ ಅವರೇ ಹಾಡಿದ್ದಾರೆ. ಅರುಣ್ ಸುಶೀಲ್ ಅವರ ಛಾಯಾಗ್ರಹಣದಲ್ಲಿ ರವಿಚಂದ್ರನ್ ಎಸ್. ಅರುಣ್ ಗೋಳೂರು, ಸಂಜೀವ, ಪುಟ್ಟ ಎಸ್.ಬಿ. ಅಭಿನಯಿಸಿದ್ದಾರೆ.
ನಿರ್ಮಾಣ, ನಿರ್ದೇಶನ, ಸಾಹಿತ್ಯ ಹಾಗೂ ಅಭಿನಯದ ಜೊತೆಗೆ ತಾನೇ ಹಾಡಿರುವ ಈ ವೀಡಿಯೋ ಗೀತೆಗಳ ಕುರಿತಂತೆ ಮಾತನಾಡಿದ ರವಿಚಂದ್ರ ಈಗ ವರ್ಲ್ಡ್ ಕಪ್ ಆರಂಭವಾಗಿದೆ ಇವರನ್ನು ಪ್ರೋತ್ಸಾಹಿಸಲೆಂದೇ ಈ ವರ್ಲ್ಡ್ ಕಪ್ ನಮ್ದೆ ಎಂಬ ಗೀತೆಯನ್ನು ಮಾಡಿದ್ದೇನೆ. ಇದಲ್ಲದೆ ರ್ಯಾಪರ್ ಚಂದನ್ಶೆಟ್ಟಿಯವರ ಅಭಿಮಾನಿಯಾಗಿ ಫ್ಯಾನ್ ಆಫ್ ಚಂದನ್ ಎಂಬ ಹಾಡನ್ನು ಮಾಡಿದ್ದೇನೆ.
ನಂತರ ಮಾತು ಮುಂದುವರೆಸಿದ ರವಿಚಂದ್ರ ಮುಂದಿನ ದಿನಗಳಲ್ಲಿ ನಾನು ಒಂದು ಚಲನಚಿತ್ರವನ್ನು ನಿರ್ದೇಶಿಸಬೇಕೆಂದಿದ್ದೇನೆ. ಈಗಾಗಲೇ ಎರಡು – ಮೂರು ಕಥೆಗಳನ್ನು ರೆಡಿ ಮಾಡಿಕೊಂಡಿದ್ದೇನೆ. ಸಿನಿಮಾ ಮಾಡುವುದಕ್ಕೂ ಮೊದಲು ಒಂದು ಸಣ್ಣ ಪರಿಚಯ ಮಾಡಿಕೊಡಬೇಕೆಂದು ಪ್ರಯತ್ನ ಮಾಡಿದ್ದೇನೆ. ಸಿರಾ ಕೋಟೆಯಲ್ಲಿ ಫ್ಯಾನ್ ಆಫ್ ಚಂದನ್ ಹಾಡನ್ನು ಚಿತ್ರೀಕರಿಸಿದ್ದೇವೆ. ಮತ್ತೊಂದು ಹಾಡನ್ನು ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ಚಿತ್ರೀಕರಿಸಿಕೊಂಡಿದ್ದೇವೆ ಎಂದು ಹೇಳಿದರು. ಸಂಗೀತ ನಿರ್ದೇಶಕ ದಿನೇಶ್ ಕುಮಾರ್ ಮಾತನಾಡಿ ವಲ್ರ್ಡ್ ಕಪ್ ಬಗ್ಗೆ ಹಾಡು ಮಾಡಬೇಕು ಎಂಬುದು ತುಂಬಾ ದಿನಗಳ ಕನಸು ರವಿಚಂದ್ರನ್ ಅವರ ಪ್ರಯತ್ನದಿಂದ ಈ ಹಾಡು ರೆಡಿಯಾಗಿದೆ ಎಂದು ಹೇಳಿದರು.
No Comment! Be the first one.