ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಈಗ ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ವಿನಯ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಬರೋದು ಮಾಮೂಲು. ಆದರೆ ವಿನಯ್ ಬಹು ಬೇಡಿಕೆಯಲ್ಲಿರುವಾಗಲೇ ಕಿರುತೆರೆಗೆ ಯಾಕೆ ವಲಸೆ ಹೋದರು ಅನ್ನೋ ಅಚ್ಚರಿ ಕಾಡೋದು ಸಹಜವೇ ಅಂದಹಾಗೆ ವಿನಯ್ ರಾಜ್ ಕುಮಾರ್ ಕಿರುತೆರೆಗೆ ಎಂಟ್ರಿ ಕೊಟ್ಟಿರೋದರ ಹಿಒಂದೆ ಅವರ ತಾಯಿಯ ಆಸೆಯೊಂದಿದೆ!
ಒಂದು ಸುದೀರ್ಘ ಗ್ಯಾಪ್ ನ ನಂತರ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ನಡಿಯಲ್ಲಿ ಧಾರಾವಾಹಿಯೊಂದು ನಿರ್ಮಾಣಗೊಂಡಿದೆ. ಮರಳಿ ಬಂದಳು ಸೀತೆ ಎಂಬ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿನ್ನೆಯಿಂದಲೇ ಪ್ರಸಾರವಾಗುತ್ತಿದೆ.
ಈ ಧಾರಾವಾಹಿಯಲ್ಲಿ ವಿನಯ್ ರಾಜ್ ಕುಮಾರ್ ಅವರೂ ಕೂಡಾ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಮೂಲಕ ತಮ್ಮ ತಾಯಿಯ ಆಸೆಯನ್ನೂ ನೆರವೇರಿಸಿದ್ದಾರೆ. ಮಗ ಕಿರುತೆರೆ ಧಾರಾವಾಹಿಯಲ್ಲಿ ನಟಿಸಬೇಕೆಂಬುದು ವಿನಯ್ ಅಮ್ಮನ ಕನಸಾಗಿತ್ತಂತೆ. ಈ ಅತಿಥಿ ಪಾತ್ರದ ಮೂಲಕ ಅದನ್ನು ವಿನಯ್ ನನಸಾಗಿಸಿದ್ದಾರೆ.