ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ. ವಿಷ್ಣು ವರ್ಧನ್ ಸತ್ತು ಮಲಗಿ ಬರೋಬ್ಬರಿ 10 ವರ್ಷಗಳೇ ಕಳೆದಿದ್ದರೂ ಇಂಥ ಧೀಮಂತ, ಸಹೃದಯಿ ನಟನಿಗೊಂದು ನೆಟ್ಟಗಿನ ಸಮಾಧಿಯ ವ್ಯವಸ್ಥೆಯಾಗಿಲ್ಲ. ಇದಕ್ಕೆ ಸರ್ಕಾರದ ಉಡಾಫೆ, ಒಳ ಕುತಂತ್ರಗಳು, ಕನ್ನಡ ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಕಾರಣವೆಂಬುದು ವಿಷ್ಣು ಅಭಿಮಾನಿಗಳ ಆರೋಪ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಒಂದು ಕಡೆ ವಿಷ್ಣು ಕುಟುಂಬದವರು ಸಮಾಧಿಯನ್ನೇ ಸ್ಥಳಾಂತರಿಸಿ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದರೇ ಇತ್ತ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿಯೇ ಆಗಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಇದು ಮಾತ್ರವಲ್ಲದೇ ಸ್ಮಾರಕಕ್ಕೆ ಸರ್ಕಾರ ಮಂಜೂರು ಮಾಡಿರುವ ಸ್ಥಳದ ಮೇಲೂ ಕಾನೂನಾತ್ಮಕವಾಗಿ ಅನೇಕ ತಕರಾರುಗಳಿದ್ದವು. ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆ ಮಾಡಿರುವ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲೇಬೇಕು ಎಂದು ವಿಷ್ಣು ಸೇನೆ ನಿರಂತರ ಹೋರಾಟ ಮಾಡಿಕೊಂಡು ಬರುತ್ತಲೇ ಇತ್ತು.
ಕುಮಾರಣ್ಣ ಸ್ಮಾರಕದ ವಿಚಾರದಲ್ಲಿ ಸ್ವಲ್ಪ ಕೇರ್ ತಗೋಬೇಕು..!
ವರ್ಷಾಂತರಗಳ ಕಾಲ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಕಗ್ಗಂಟಾಗಿದ್ದು, ಅದನ್ನು ಪರಿಹರಿಸುವ ಬಗ್ಗೆ ಕುಮಾರಸ್ವಾಮಿಯವರು ಜೆಡಿಎಸ್ ಪ್ರಣಾಳಿಕೆಯಲ್ಲಿಯೇ ಘೋಷಿಸಿದ್ದರು. ಇದರಿಂದಾಗಿಯೇ ಸಾಹಸ ಸಿಂಹನ ಸಮಸ್ತ ಅಭಿಮಾನಿಗಳೂ ಕೂಡಾ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಬೆಂಬಲಿಸಿದ್ದರು. ಇದೀಗ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದರಿಂದ ಸಾಹಸ ಸಿಂಹನ ಅಭಿಮಾನಿಗಳೆಲ್ಲ ಸ್ಮಾರಕ ವಿವಾದ ಪರಿಹಾರವಾಗುವ ನಿರೀಕ್ಷೆ ಹೊಂದಿದ್ದರು. ತಕ್ಷಣದಲ್ಲಿಯೇ ಕೊಟ್ಟ ಮಾತಿನಂತೆ ಈ ಬಗ್ಗೆ ಗಮನಹರಿಸಿ ವಿಷ್ಣುವರ್ಧನ್ ಅವರ ಗೌರವ ಉಳಿಸುವ ಕೆಲಸವನ್ನು ಕುಮಾರಸ್ವಾಮಿಯವರು ತುರ್ತಾಗಿ ಮಾಡಿಬೇಕಿದೆ. ಈ ಹಿಂದಿನ ಮುಖ್ಯಮಂತ್ರಿಗಳಾದ ಕುರುಬರ ದೊರೆ ಸಿದ್ಧರಾಮಯ್ಯ ಈ ಬಗ್ಗೆ ತಾತ್ಸಾರವನ್ನಷ್ಟೇ ತೋರಿದ್ದರು. ಆದರೆ ಕುಮಾರಸ್ವಾಮಿ ಸಾಹಸ ಸಿಂಹನ ಅಭಿಮಾನಿಗಳಿಗೆ ನಿರಾಸೆಯಾಗದಂತೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ಬಹುತೇಕ ಸಮಾರಂಭಗಳಲ್ಲಿ ಈ ಕುರಿತು ಸಮಾಧಾನದ ಮಾತುಗಳನ್ನಾಡಿದ್ದರು.
ಏನಿದೆ ತೀರ್ಪಿನಲ್ಲಿ…?
ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿತ್ತು. ಸದ್ಯ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಖುಷಿ ಪಡುವ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಕೆಳ ನ್ಯಾಯಾಲಯದ ಆದೇಶವನ್ನು ಹೈ ಕೋರ್ಟ್ ರದ್ದು ಮಾಡಿದೆ. ಬಹುದಿನಗಳಿಂದ ವಿಷ್ಣುಸ್ಮಾರಕದ ಜಾಗದ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಅಲ್ಲದೇ ಸರ್ಕಾರ ಒಂದೆಡೆ ಜಾಗ ಕಲ್ಪಿಸಲು ಮುಂದಾದರೆ ಕುಟುಂಬದವರು ಮೈಸೂರಲ್ಲೇ ಸ್ಮಾರಕ ನಿರ್ಮಾಣವಾಗ್ಬೇಕೆಂದು ಪಟ್ಟು ಹಿಡಿದಿದ್ದರು. ಇದೀಗ ಹೈಕೋರ್ಟ್ ತೀರ್ಪು ಸಾಕಷ್ಟು ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ಈ ಹಿಂದೆ ಜಿಲ್ಲಾಡಳಿತ ಮೈಸೂರು ತಾಲೂಕು ಉದ್ಬೂರು ಸಮೀಪ ಸ್ಥಳ ನಿಯುಕ್ತಿ ಮಾಡಿತ್ತು. ಸ್ಮಾರಕ ನಿರ್ಮಾಣ ರದ್ದು ಕೋರಿ ಊರಿನ ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಸ್ಮಾರಕ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ಕೋರಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಹೈ ಕೋರ್ಟ್ ರದ್ದು ಮಾಡಿದೆ. 2016 ರಲ್ಲಿ 5 ಎಕರೆ ಭೂಮಿಯನ್ನು ಜಿಲ್ಲಾಡಳಿತ ಒದಗಿಸಿತ್ತು. ಇನ್ನಾದರೂ ಸಾಹಸ ಸಿಂಹನ ಅಭಿಮಾನಿಗಳ ಆಸೆಯಂತೆ ತನ್ನ ನೆಚ್ಚಿನ ನಟನ ಸ್ಮಾರಕ ನಿರ್ಮಾಣ ಕಾರ್ಯ ಶೀಘ್ರ ನಿರ್ಮಾಣವಾಗಲಿದೆಯೇ ನೋಡಬೇಕು.
No Comment! Be the first one.