ಕೆ. ಮಂಜು ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು. ಅಲ್ಲೊಂದು ಇಲ್ಲೊಂದು ವಿಶೇಷ ಪಾತ್ರಗಳನ್ನು ಬಿಟ್ಟರೆ ಯಾವತ್ತೂ ಪೂರ್ಣಪ್ರಮಾಣದ ನಟನಾಗುವ ಪ್ರಯತ್ನ ಮಾಡಿದವರಲ್ಲ‌. ಆದರೆ, ಇವರ ಪುತ್ರ ಶ್ರೇಯಸ್ ಮೊದಲಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ತೀರಾ ಸಣ್ಣ ವಯಸ್ಸಿನಿಂದಲೇ ಚಿತ್ರರಂಗದ ದಿಗ್ಗಜರ, ಸ್ಟಾರ್ ನಟರ ಒಡನಾಟವಿದ್ದದ್ದು ಅದಕ್ಕೆ ಕಾರಣವಿರಬಹುದು. ಹೀರೋ ಆಗಿ ಲಾಂಚ್ ಆಗಬೇಕು ಅಂತಾ ತೀರ್ಮಾನಿಸಿದ ಮೇಲೆ ಏಕಾ ಏಕಿ ಕ್ಯಾಮೆರಾ ಮುಂದೆ ಬಂದು ನಿಲ್ಲಲಿಲ್ಲ. ಬದಲಿಗೆ, ನಟನೆ, ನೃತ್ಯ, ಫೈಟು ಸೇರಿದಂತೆ ಸಿನಿಮಾಗೆ ಬೇಕಿರುವ ಎಲ್ಲವನ್ನೂ ಕಲಿತು, ತಯಾರಿ ಪಡೆದ ಮೇಲಷ್ಟೇ ಸಿನಿಮಾ ಒಪ್ಪಿಕೊಂಡಿದ್ದು. ಹಾಗೆ ಪಡ್ಡೆಹುಲಿ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಜ್ಜೆಯಿರಿಸಿದ ಶ್ರೇಯಸ್ ಈಗ ಎರಡನೇ ಚಿತ್ರವನ್ನೂ ಬಹುತೇಕ ಪೂರ್ಣಗೊಳಿಸಿದ್ದಾರೆ. ಇಂದು ವಿಷ್ಣುಪ್ರಿಯ ಶ್ರೇಯಸ್ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಶ್ರೇಯಸ್ ಸಿನಿಬಜ಼್ ಗೆ ನೀಡಿರುವ ವಿಶೇಷ ಸಂದರ್ಶನವಿದು…

ಇಷ್ಟೂ ವರ್ಷದ ಬರ್ತಡೇಗೂ ಇವತ್ತಿನ ದಿನಕ್ಕೂ  ಸಾಕಷ್ಟು ವ್ಯತ್ಯಾಸವಿರುತ್ತದೆ ಅಲ್ವಾ?

ಖಂಡಿತಾ. ಇಲ್ಲೀತನಕ ಹುಟ್ಟಿದ ದಿನಗಳು ಅದ್ಧೂರಿಯಾಗಿ ಇರುತ್ತಿದ್ದವು. ಆದರಿಂದು ಅದು ನಿಜಕ್ಕೂ ಅರ್ಥಪೂರ್ಣವಾಗಿ ನೆರವೇರಿದೆ. ಯಾಕೆಂದರೆ, ಇವತ್ತು ಎರಡೂಮುಕ್ಕಾಲು ಸಾವಿರ ಜನಕ್ಕೆ ಊಟ ತಲುಪಿಸುವ ವ್ಯವಸ್ಥೆ ಮಾಡಿದ್ದೀವಿ. ನನ್ನ ಸ್ನೇಹಿತರಾದ ಮಣಿ ಮತ್ತು ನಮ್ಮ ಇಡೀ ತಂಡ ಬೆಳಗಿನಿಂದಲೂ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಕೊರೋನಾ ಸಮಯದಲ್ಲಿ ದುಡಿಯುವ ವರ್ಗದವರಿಗೆ ಊಟ ಕೂಡಾ ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಕೈಲಾದ ಸೇವೆಯನ್ನು ಮಾಡಿರೋದು ನನ್ನಲ್ಲಿ ಸಾರ್ಥಕಭಾವನೆ ಮೂಡಿಸಿದೆ.

ನಿಮ್ಮ ಬರ್ತಡೇಗೆ ವಿಷ್ಣುಪ್ರಿಯ ವಿಶೇಷತೆ ಏನು?

ಇವತ್ತು ಟೀಸರ್ ಬಿಡೋಣ ಅನ್ನೋ ಪ್ಲಾನ್ ಇತ್ತು. ಆದರೆ, ಕೊರೋನಾ ಪ್ರಾಬ್ಲಮ್ಮಿನಿಂದ ಅದು ಸಾಧ್ಯವಾಗಲಿಲ್ಲ. ಇವತ್ತು ಬೆಳಿಗ್ಗೆ 11.30ಕ್ಕೆ ವಿಷ್ಣುಪ್ರಿಯ ಪೋಸ್ಟರ್ ರಿಲೀಸ್ ಮಾಡಿದ್ದೀವಿ. ಇದನ್ನು ನೋಡಿದ ಎಲ್ಲರೂ ಇಷ್ಟಪಟ್ಟಿದ್ದಾರೆ. ಇದು ನನ್ನ ಬರ್ತಡೇ ಸ್ಪೆಷಲ್ ಅಂದುಕೊಳ್ಳಬಹುದು.

ವಿಷ್ಣುಪ್ರಿಯ ಯಾವ ಹಂತದಲ್ಲಿದೆ? ಇದರ ವಿಶೇಷತೆಗಳೇನು?

ಈಗ ರೀರೆಕಾರ್ಡಿಂಗ್ ನಡೀತಿದೆ. ಇನ್ನೊಂದು ಹಾಡು ಶೂಟ್ ಆಗಬೇಕು. ಅದು ಮುಗಿದರೆ ಸಿನಿಮಾ ಕಂಪ್ಲೀಟ್ ಆಗುತ್ತದೆ.
ಇದು ರಿಯಲಿಸ್ಟಿಕ್ ಸಿನಿಮಾ. ಈಗ ಜನ ರೆಗ್ಯುಲರ್ ಕಮರ್ಷಿಯಲ್ ಸಬ್ಜೆಕ್ಟುಗಳನ್ನು ಇಷ್ಟಪಡೋದಿಲ್ಲ. ಹೀಗಾಗಿ ಎಲ್ಲರಿಗೂ ಇಷ್ಟವಾಗುವಂಥ, ಯೂನಿವರ್ಸಲ್ ಲವ್ ವಿಚಾರವನ್ನು ಸೆಲೆಕ್ಟ್ ಮಾಡಿಕೊಂಡಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಪ್ರಿಯಾ ವಾರಿಯರ್ ನನ್ನ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಚಿತ್ರ. ಮೊದಲ ಸಿನಿಮಾದಲ್ಲೇ ಮಹಾನ್ ಕಲಾವಿದರಾದ ರವಿಚಂದ್ರನ್ ಸರ್, ಪುನೀತ್ ಸರ್, ರಕ್ಷಿತ್ ಸರ್ ಜೊತೆಗೆಲ್ಲಾ ಸ್ಕ್ರೀನ್ ಶೇರ್ ಮಾಡುವಂತಾ ಅದೃಷ್ಟ ಒದಗಿಬಂದಿತ್ತು. ಈ ಸಲ ಅದ್ಬುತವಾದ ಕತೆ, ತಾತ್ರಿಕತೆ ಜೊತೆಯಾಗಿದೆ. ಎರಡು ಗಂಟೆ ಕೂತು ನೋಡಿ ಪ್ರತಿಯೊಬ್ಬರೂ ಇಷ್ಟಪಡುವಂಥಾ ಸಿನಿಮಾ ಇದಾಗಿದೆ. ಆದಷ್ಟು ಬೇಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿ, ಆ ನಂತರ ವಿಷ್ಣುಪ್ರಿಯ ಚಿತ್ರವನ್ನು ತೆರೆಗೆ ತರುತ್ತೇವೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೇಗ ಎದ್ದುಬನ್ನಿ ಬುಲೆಟ್!

Previous article

ರಂಗಣ್ಣ ಇರಬೇಕಿತ್ತು!

Next article

You may also like

Comments

Leave a reply

Your email address will not be published. Required fields are marked *