ಯಾವೊಬ್ಬ ಪಾತ್ರಧಾರಿಯ ಫೋಟೋಗಳನ್ನು ಬಳಸದೆ, ರೈಲಿನ ಕಿಟಕಿ, ಅದರ ಸುತ್ತ ರೇಲ್ವೇ ಟ್ರ್ಯಾಕು, ಅದರ ಮೊನೆಯಲ್ಲಿ ತೊಟ್ಟಿಕ್ಕುತ್ತಿರುವ ರಕ್ತ, ಬೆರಳಚ್ಚು ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ಪೋಸ್ಟರು ನೋಡಿದರೆ ಇದೊಂದು ಸಸ್ಪೆನ್ಸ್‌, ಕ್ರೈಮ್‌ ಥ್ರಿಲ್ಲರ್‌ ಜಾನರಿನ ಕಥೆ ಹೊಂದಿರುವ ಕುರುಹಿದೆ. ವಿನ್ಯಾಸ ಕಲಾವಿದ ಅಶ್ವಿನ್‌ ರಮೇಶ್‌ ಕಲಾತ್ಮಕ ಪೋಸ್ಟರನ್ನು ರೂಪಿಸಿದ್ದಾರೆ.

ಮೊದಮೊದಲು ಟೀವಿ ನಿರೂಪಕಿಯಾಗಿ ಪುಟ್ಟ ಪರದೆಮೇಲೆ ಕಾಣಿಸಿಕೊಂಡ ಶೀತಲ್‌ ಶೆಟ್ಟಿ ನಂತರ ಸ್ವೀಕರಿಸಿದ ಸವಾಲುಗಳು, ಏರಿದ ಏತ್ತರ ದೊಡ್ಡದು. ಈಗ ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ನಾಗಿಯೂ ಕಾಣಿಸಿಕೊಂಡಿದ್ದ ಅವರು ಸಂಗಾತಿ ಮತ್ತು ‘ಕಾರು’ ಎಂಬೆರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದರು. ಸಂಗಾತಿ & ಕಾರು ಶಾರ್ಟ್‌ ಮೂವಿಗಳಲ್ಲಿ ಗಹನವಾದ ವಿಚಾರಗಳನ್ನು ಕಲಾತ್ಮಕ ಶೈಲಿಯಿಂದ ನಿರೂಪಿಸಿ ಗಮನ ಸೆಳೆದಿದ್ದ ಶೀತಲ್ ಅದರ ಕಾರಣದಿಂದಲೇ ತಾಂತ್ರಿಕವಾಗಿಯೂ ಅನುಭವ ಪಡೆದುಕೊಂಡಿದ್ದರು.

ಯಾವುದೇ ಕೆಲಸವನ್ನಾದರೂ ನೀಟಾಗಿ ಮಾಡಬೇಕೆಂಬ ಮನಸ್ಥಿತಿಯ ಶೀತಲ್ ಸಂಪೂರ್ಣ ತಯಾರಿ ಮಾಡಿಕೊಂಡೇ ಮುಂದಡಿಯಿಡುತ್ತಾರೆ. ಶೀತಲ್‌ ಕಿರುಚಿತ್ರಗಳ ಬಗ್ಗೆ ಅಪಾರ ಕಾಳಜಿ ತೋರಿದಾಗಲೇ, ಮುಂದೊಂದು ದಿನ ಇವರು ಸಿನಿಮಾ ನಿರ್ದೇಶನಕ್ಕೆ ಮುಂದಾಗುತ್ತಾರೆಂಬ ಸೂಚನೆ ಸಿಕ್ಕಿತ್ತು. ಈಗ ಅದು ನಿಜವಾಗಿದೆ.  ನಿರೂಪ್‌ ಭಂಡಾರಿ ನಾಯಕನಟನಾಗಿ ನಟಿಸಿರುವ ʻವಿಂಡೋ ಸೀಟ್ʼ‌ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದಾಗಲೇ ಚಿತ್ರೀಕರಣಗಳೆಲ್ಲಾ ಮುಗಿದು, ಪೂರ್ಣಗೊಂಡಿರುವ ಚಿತ್ರದ ಮೊದಲ ಪೋಸ್ಟರ್‌ ಈಗ ಬಿಡುಗಡೆಯಾಗಿದೆ. ಇಷ್ಟರಲ್ಲೇ ವಿಂಡೋ ಸೀಟ್‌ನ ಫಸ್ಟ್‌ ಲುಕ್‌ ಕೂಡಾ ಹೊರಬರಲಿದೆ. ವಿಂಡೋ ಸೀಟ್‌ನ ಮೊದಲ ಪೋಸ್ಟರ್‌ ಅತ್ಯಾಕರ್ಷಕವಾಗಿ ಮೂಡಿಬಂದಿದೆ. ಯಾವೊಬ್ಬ ಪಾತ್ರಧಾರಿಯ ಫೋಟೋಗಳನ್ನು ಬಳಸದೆ, ರೈಲಿನ ಕಿಟಕಿ, ಅದರ ಸುತ್ತ ರೇಲ್ವೇ ಟ್ರ್ಯಾಕು, ಅದರ ಮೊನೆಯಲ್ಲಿ ತೊಟ್ಟಿಕ್ಕುತ್ತಿರುವ ರಕ್ತ, ಬೆರಳಚ್ಚು ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ಪೋಸ್ಟರು ನೋಡಿದರೆ ಇದೊಂದು ಸಸ್ಪೆನ್ಸ್‌, ಕ್ರೈಮ್‌ ಥ್ರಿಲ್ಲರ್‌ ಜಾನರಿನ ಕಥೆ ಹೊಂದಿರುವ ಕುರುಹಿದೆ. ವಿನ್ಯಾಸ ಕಲಾವಿದ ಅಶ್ವಿನ್‌ ರಮೇಶ್‌ ಕಲಾತ್ಮಕ ಪೋಸ್ಟರನ್ನು ರೂಪಿಸಿದ್ದಾರೆ. ವಿಂಡೋ ಸೀಟ್‌ನ ಪೋಸ್ಟರಿನ ಮೂಲಕವೇ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ನೆಲೆಗೊಳ್ಳುವ ಸೂಚನೆ ನೀಡಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್‌ ಮತ್ತು ಅಮೃತಾ ಅಯ್ಯಂಗಾರ್‌  ನಾಯಕಿಯರಾಗಿದ್ದಾರೆ. ಜಾಕ್‌ ಮಂಜು ನಿರ್ಮಾಣದ ವಿಂಡೋ ಸೀಟಿಗೆ ಅರ್ಜುನ್‌ ಜನ್ಯ ಸಂಗೀತ, ಯೋಗರಾಜ್‌ ಭಟ್‌, ಕವಿರಾಜ್‌, ಸುಮುಖ್ ಗೀತ ಸಾಹಿತ್ಯವಿರಲಿದೆ.

CG ARUN

ಶೀಘ್ರದಲ್ಲೇ ಶಾರ್ದೂಲ ಶೋ!

Previous article

“ಆಟಕ್ಕೂ- ಊಟಕ್ಕೂ ಬಂದವನು ಸೂಳೆ ಅಂದ…”

Next article

You may also like

Comments

Leave a reply

Your email address will not be published. Required fields are marked *