ನಿರ್ದೇಶಕ ಕಿರಣ್ ಗೋವಿ ಮ್ಯೂಸಿಕಲ್ ಹಿಟ್ ಸಿನಿಮಾಗಳಿಗೆ ಹೆಸರಾಗಿರುವವರು. ಇದೀಗ ಅವರು ನಿರ್ದೇಶನ ಮಾಡಿರೋ ಯಾರಿಗೆ ಯಾರುಂಟು ಸಿನಿಮಾ ಕೂಡಾ ಮೆಲೋಡಿ ಮೆರವಣಿಗೆಯಲ್ಲಿಯೇ ಥೇಟರಿನತ್ತ ಪಯಣಕ್ಕೆ ಅಣಿಯಾಗಿದೆ. ಚೆಂದದ ಹಾಡುಗಳ ಕಾರಣದಿಂದಲೇ ಎಲ್ಲರೂ ಕಾತರದಿಂದ ಕಾಯುತ್ತಿರೋ ಈ ಚಿತ್ರ ಮುಂದಿನ ವಾರ ಅಂದರೆ, ಫೆಬ್ರವರಿ 22ರಂದು ಅದ್ದೂರಿಯಾಗಿ ತೆರೆ ಕಾಣಲಿದೆ.

ಹೆಚ್ ಸಿ ರಘುನಾಥ್ ಪ್ರೀತಿಯಿಂದ ನಿರ್ಮಾಣ ಮಾಡಿರೋ ಚಿತ್ರ ಯಾರಿಗೆ ಯಾರುಂಟು. ಇದರ ಮೆಲೋಡಿಯಸ್ ಹಾಡುಗಳಿಗೆ ಫಿದಾ ಆಗದವರೇ ಇಲ್ಲ. ಎಲ್ಲ ವರ್ಗದ ಜನರೂ ಗುನುಗಿಕೊಂಡು ಎಂಜಾಯ್ ಮಾಡುತ್ತಲೇ ಈ ಸಿನಿಮಾಗಾಗಿ ಕಾಯುವಂತಾಗಿದೆ. ಇನ್ನಉ ಚಿತ್ರರಂಗದ ನಾನಾ ವಿಭಾಗಗಳವರೂ ಕೂಡಾ ಈ ಹಾಡುಗಳನ್ನು ಕೊಂಡಾಡಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊದಲಿಗೆ ಯಾರಿಗೆ ಯಾರುಂಟು ಹಾಡುಗಳು, ಟ್ರೈಲರ್ ಟೀಸರ್‌ಗ ಬಗ್ಗೆ ಮೆಚ್ಚಿಕೊಂಡು ಮಾತಾಡಿದ್ದರು. ತದನಂತರ ಅವರೇ ಒಂದು ವೀಡಿಯೋ ಸಾಂಗ್ ಅನ್ನೂ ಬಿಡುಗಡೆ ಮಾಡಿ ಪ್ರೋತ್ಸಾಹಿಸಿದ್ದಾರೆ. ಇನ್ನುಳಿದಂತೆ ನಟ ನವೀನ್ ಕೃಷ್ಣ, ನಿರ್ದೇಶಕ ದಯಾಳ್ ಪದ್ಮನಾಭನ್, ನಂದ ಕಿಶೋರ್, ತರುಣ್ ಸುಧೀರ್, ಅರು ಗೌಡ, ಅನಿತಾ ಭಟ್, ಮದರಂಗಿ ಕೃಷ್ಣ, ಚಕ್ರವರ್ತಿ ಚಂದ್ರಚೂಡ್, ಭಾ ಮಾ ಹರೀಶ್, ಶಿವರಾಜ್ ಕೆಆರ್ ಪೇಟೆ, ಜೆಕೆ, ಯೋಗರಾಜ ಭಟ್ ಹೀಗೆ ಹಾಡುಗಳನ್ನು ಮೆಚ್ಚಿಕೊಂಡು ಇದು ಮೆಲೋಡಿ ಹಿಟ್ ಆಗುತ್ತೆ ಅಂತ ಭವಿಷ್ಯ ನುಡಿದವರ ಪಟ್ಟಿ ದೊಡ್ಡದಿದೆ.

ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಯಾರಿಗೆ ಯಾರುಂಟು ಬಿಡುಗಡೆಗೂ ಮುಹೂರ್ತ ಫಿಕ್ಸಾಗಿದೆ. ಇದೇ ಫೆಬ್ರವರಿ 22ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

#

CG ARUN

ಪ್ರೇಮಿಗಳಿಗೆಂದೇ ಬಂತು ಪಡ್ಡೆಹುಲಿಯ ಭಾವನಾತ್ಮಕ ಹಾಡು!

Previous article

ಫೇಸ್ ಟು ಫೇಸ್ ಟ್ರೈಲರ್ ಬಂತು!

Next article

You may also like

Comments

Leave a reply

Your email address will not be published. Required fields are marked *