ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಿಡುಗಡೆಯಾಗಿದೆ. ಈ ಜಬರ್ದಸ್ತ್ ಟ್ರೈಲರ್ ಹೊರಬಂದು ಕ್ಷಣಾರ್ಧದಲ್ಲಿಯೇ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟ್ರೈಲರ್ ಮತ್ತೊಂದು ಅಚ್ಚರಿಗೂ ಕಾರಣವಾಗಿದೆ. ಅನಾವರಣಗೊಂಡು ಘಂಟೆ ಕಳೆಯೋದರೊಳಗೆ ಸೌತಿಂಡಿಯಾ ತುಂಬ ಯಜಮಾನ ಟ್ರೈಲರ್ ಸದ್ದು ಮಾಡುತ್ತಿದೆ!

ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಈಗ ಯಜಮಾನನ ಟ್ರೈಲರ್ ಗುಣಗಾನ ಎಗ್ಗಿಲ್ಲದೆ ನಡೆಯುತ್ತಿದೆ. ದರ್ಶನ್ ಅವರ ರಗಡ್ ಲುಕ್ಕು, ನಾನಾ ಶೇಡುಗಳ ಝಲಕ್ ತೋರಿಸಿರೋ ಅವತಾರಗಳು ಮತ್ತು ಪಕ್ಕಾ ಖದರ್ ತುಂಬಿರೋ ಡೈಲಾಗ್‌ಗಳು ಪರಭಾಷಾ ಪ್ರೇಕ್ಷಕರೂ ರಂಗೇರುವಂತೆ ಮಾಡಿದೆ.

ದರ್ಶನ್ ಅಭಿಮಾನಿಗಳಂತೂ ಅಕ್ಷರಶಃ ಕುಣಿದಾಡುವಂಥಾ ಸಂಭ್ರಮದಲ್ಲಿದ್ದಾರೆ. ಇತ್ತ ಅವರೆಲ್ಲ ಕನ್ನಡದಲ್ಲಿ ಈ ಟ್ರೈಲರ್ ಹವಾದ ಮೇಲೆ ಕಣ್ಣಿಟ್ಟಿರುವಾಗಲೇ ಅತ್ತ ಬೇರೆ ಭಾಷೆಗಳಲ್ಲಿಯೂ ಯಜಮಾನನ ಅಲೆ ಶುರುವಾಗಿದೆ. ಇದು ದರ್ಶನ್ ಅಭಿಮಾನಿಗಳ ಪಾಲಿಗೆ ಡಬಲ್ ಧಮಾಕ. ಒಟ್ಟಾರೆಯಾಗಿ ಹೇಳೋದಾದರೆ, ಜನ, ಅಭಿಮಾನಿಗಳ ನಿರೀಕ್ಷೆಯನ್ನೂ ಮೀರಿಸುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

ಈ ಮೂಲಕವೇ ಪರಭಾಷೆಗಳಲ್ಲಿಯೂ ದರ್ಶನ್ ಚಿತ್ರಗಳಿಗೆ ಮಾರ್ಕೆಟ್ ಓಪನ್ ಆಗಿದೆ. ಎಲ್ಲ ಭಾಷಚೆಗಳಲ್ಲಿಯೂ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಗವೆ ಅಭಿಮಾನಿಗಳಿದ್ದಾರೆ. ಆದರೆ ಯಜಮಾನನ ಮೂಲಕ ಇಡೀ ದೇಶದ ತುಂಬೆಲ್ಲ ಅದು ವಿಸ್ತರಿಸಿಕೊಳ್ಳೋ ಸ್ಪಷ್ಟವಾದ ಲಕ್ಷಣಗಳೇ ಕಾಣಿಸುತ್ತಿವೆ. ಅಷ್ಟಕ್ಕೂ ಯಜಮಾನ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗೋದೂ ಸೇರಿದಂತೆ ಯಾವ ಅಬ್ಬರವೂ ಇಲ್ಲದೇ ಅಣಿಗೊಂಡಿರೋ ಚಿತ್ರ. ಆದರೆ ಟ್ರೈಲರ್ ಮೂಲಕ ತಾನೇ ತಾನಾಗಿ ಯಜಮಾನನ ಪ್ರಭೆ ದೇಶದ ತುಂಬಾ ಹರಡಿಕೊಂಡಿದೆ.  ಈಗ ಎದಿರೋ ಅಲೆ ನಿಜಕ್ಕೂ ಕೆಜಿಎಫ್ ಅನ್ನೇ ಮೀರಿಸುವಂತಿರೋದು ಸುಳ್ಳಲ್ಲ. ಇದು ಸಮಸ್ತ ದರ್ಶನ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಈ ಮೂಲಕವೇ ಯಜಮಾನನ ಬಗೆಗಿದ್ದ ನಿರೀಕ್ಷೆಯ ಟೆಂಪ್ರೇಚರ್ ಏಕಾಏಕಿ ಏರಿಕೊಂಡಿದೆ!

https://www.youtube.com/watch?v=A65l7LrbAQg&t=32s #

CG ARUN

ಕರಿಯಪ್ಪನ ಬಗ್ಗೆ ಸೊಸೆ ಸಂಜನಾ ಏನಂತಾರೆ?

Previous article

’ಮೈ ನೇಮ್ ಈಸ್ ರಾಗಾ’; ರಾಹುಲ್ ಗಾಂಧಿ ಬಯೋಪಿಕ್ ಟೀಸರ್ ಇಲ್ಲಿದೆ ನೋಡಿ!

Next article

You may also like

Comments

Leave a reply

Your email address will not be published. Required fields are marked *