ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಯಾವಾಗಲೂ ಸಧಭಿರುಚಿಯ ಕಾರ್ಯಕ್ರಮಗಳನ್ನೇ ನೀಡುತ್ತಾ ಬಂದಿರುವ ಜೀ ಕನ್ನಡವಾಹಿನಿ ಪಾರು, ಕಮಲಿ, ವಿಷ್ಣು ದಶಾವತಾರ, ಆತ್ಮಬಂಧನ ಹೀಗೆ ವಿವಿಧ ಜಾನರ್ ಧಾರಾವಾಹಿಗಳನ್ನು ಹಾಗೂ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪದಂಥ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಸದಾ ತನ್ನನ್ನು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ಜೀ ವಾಹಿನಿಯ ಮತ್ತೊಂದು ಹೊಸ ಪ್ರಯತ್ನವೇ ಕನ್ನಡದ ಕಣ್ಮಣಿ.
ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಮೇಲಿನ ಪ್ರೇಮ ಹಾಗು ಅಭಿಮಾನದ ಪ್ರತೀಕವಾಗಿ ಶುರುವಾಗುತ್ತಿರುವ ಈ ಹೊಸ ರಿಯಾಲಿಟಿ ಶೋಗಾಗಿ ಕರ್ನಾಟಕ ರಾಜ್ಯದ ಹತ್ತು ಜಿ ಕೇಂದ್ರಗಳಲ್ಲಿ ಭಾಗವಹಿಸಿದ್ದ ಒಂದು ಲPಕ್ಕೂ ಹೆಚ್ಚು ಮಕ್ಕಳಲ್ಲಿ ಆಡಿಷನ್ ಮೂಲಕ ಅವರಲ್ಲಿ ಸೂಕ್ತ ಮಕ್ಕಳನ್ನು ಆಯ್ಕೆ ಮಾಡಲಾಯಿತು, ನಂತರ ಆ ಎಲ್ಲಾ ಕೇಂದ್ರಗಳಲ್ಲಿ ಆಯ್ಕೆಯಾದ ಮಕ್ಕಳನ್ನು ಮೂರು ಹಂತಗಳಲ್ಲಿ ಪರೀಕ್ಷೆಗೊಳಪಡಿಸಿ ಮತ್ತೆ ಅವರಲ್ಲಿ ೧೪ ಜನ ಪ್ರತಿಭಾವಂತ ಮಕ್ಕಳನ್ನು ಆಯ್ಕೆಮಾಡಿಕೊಂಡು ವೇದಿಕೆಗೆ ಕರೆತರಲಾಗುತ್ತಿದೆ.
ಕನ್ನಡದ ಕಣ್ಮಣಿ ಇದೊಂದು ಅಪ್ಪಟ ಕನ್ನಡ ನೆಲದ ಟಾಕ್ ಶೋ ಆಗಿದ್ದು, ಇಲ್ಲಿ ಬರುವ ಮಕ್ಕಳು ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುವ ಜೊತೆಗೆ ಸಾಕಷ್ಟು ಮಾಹಿತಿಗಳನ್ನು ಕೂಡಾ ನೀಡುತ್ತಾ ಸಾಗುತ್ತಾರೆ. ಇನ್ನು ಕಿರಿಕ್ ಕೀರ್ತಿ ಈ ಕಾರ್ಯಕ್ರಮದ ನಿರೂಪಕರಾಗಿzರೆ. ಇದರ ಜೊತೆ ಜೊತೆಗೆ ಇಂತಹ ದೊಡ್ಡ ಕಾರ್ಯಕ್ರಮದ ನಿರ್ಣಾಯಕರಾಗಿ ಯಾರು ಕೂರಬಹುದು ಎಂಬ ವಿಷಯದಲ್ಲಿ ದೊಡ್ಡ ಚರ್ಚೆಯೆ ನಡೆದಿತ್ತು ಅದಕ್ಕೀಗ ಉತ್ತರವೆಂಬಂತೆ ಉತ್ತರ ಕರ್ನಾಟಕದ ದೇಶಿ ಪ್ರತಿಭೆ ಅಭಿನವ ಬೀಚಿ ಗಂಗಾವತಿ ಪ್ರಾಣೇಶ್, ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಈಗಾಗಲೇ ಕಾಮಿಡಿ ಕಿಲಾಡಿ ಮೂಲಕ ಚಿರಪರಿಚಿತರಾಗಿರುವ ನವರಸನಾಯಕ ಜಗ್ಗೇಶ್ ಕೂಡ ನಿರ್ಣಾಯಕರ ಸ್ಥಾನದಲ್ಲಿರುವುದು ಈ ಕಾರ್ಯಕ್ರಮದ ತೂಕವನ್ನ ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು. ಕರ್ನಾಟಕದಾದ್ಯಂತ ಕಿರುತೆರೆ ವೀಕ್ಷಕರಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿರುವ ಈ ಕನ್ನಡದ ಕಣ್ಮಣಿ ರಿಯಾಲಿಟಿ ಕಾರ್ಯಕ್ರಮ ಇದೇ ಫೆಬ್ರವರಿ ೨೩ರಿಂದ ಆರಂಭವಾಗಲಿದೆ. ವಾರಾಂತ್ಯದ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಂಜೆ ೫.೦೦ ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಕನ್ನಡದ ಕಣ್ಮಣಿ ಪ್ರಸಾರವಾಗಲಿದೆ.
#