ಟ್ರಜರ್ ಹಂಟ್ ಕಥೆಯ, ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಂದಿರಬಹುದು. ಆದರೆ ಯೆಲ್ಲೋಗ್ಯಾಂಗ್ ತನ್ನ ಗುಣಮಟ್ಟದ ಕಾರಣಕ್ಕೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಕೆಲವೊಂದು ಸಿನಿಮಾದ ಕಥೆಯೇ ಹಾಗಿರುತ್ತದೆ. ಹೀಗೀಗೆ ಅಂತಾ ಒಂದೇ ಗುಕ್ಕಿಗೆ ಹೇಳಿಬಿಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಥರಹೇವಾರಿ ಪಾತ್ರಗಳು, ಒಂದಕ್ಕೊಂದು ಸೂತ್ರ-ಸಂಬಂಧವಿಲ್ಲದ ಟ್ರ್ಯಾಕುಗಳೆಲ್ಲಾ ಸೇರಿ ಒಂದು ಆಕಾರ ಪಡೆದಿರುತ್ತದೆ. ಕಲ್ಪಿತ ಚೌಕಟ್ಟಿನ ಒಳಗೆ ಚಿತ್ರ ರೂಪಿಸುವವರಿಂದ ಇಂಥ ಕತೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಥೇಟು ಚದುರಂಗದ ನುರಿತ ಆಟಗಾರರಂತೆ ತೀರಾ ಬುದ್ದಿವಂತ ನಿರ್ದೇಶಕರು ಮಾತ್ರ ಕಟ್ಟಿ, ಗೆಲ್ಲಬಲ್ಲ […]
ಸಿನಿಮಾ ಕಥೆ ಮಾಡುವುದಕ್ಕೆ ಎಲ್ಲಿಂದ ಸ್ಫೂರ್ತಿ ಸಿಗುತ್ತದೆ ಎಂದು ಹೇಳುವುದು ಕಷ್ಟ. ಒಂದು ಸಣ್ಣ ಘಟನೆಯೇ ಯಶಸ್ವಿ ಚಿತ್ರಕ್ಕೆ ಮುನ್ನುಡಿಯಾಗಹುದು. ಈ ಶುಕ್ರವಾರ ಬಿಡಗುಡೆಯಾಗುತ್ತಿರುವ ಕೃಷ್ಣ, ನಿಶ್ವಿಕಾ ಮತ್ತು ಮೇಘಾ ಶೆಟ್ಟಿ ಅಭಿನಯದ ‘ದಿಲ್ ಪಸಂದ್’ ಚಿತ್ರದ ಕಥೆಗೆ ಸ್ಫೂರ್ತಿ ಏನು ಗೊತ್ತಾ? ನಿರ್ದೇಶಕ ಶಿವತೇಜಸ್ ಅವರ ಸ್ನೇಹಿತರ ಜೀವನದಲ್ಲಿ ನಡೆದ ಘಟನೆಯಂತೆ. ‘ನನ್ನ ಸ್ನೇಹಿತರ ಜೀವನದಲ್ಲಿ ನೋಡಿದ್ದೆ. ಅದರಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆಯನ್ನು ಬರೆದಿದ್ದೇನೆ. ಈಗಿನ ಕಾಲಘಟ್ಟದಲ್ಲಿ ಕೆಲವು ಘಟನೆಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ […]
ಒಬ್ಬಳಿಗೆ ಭಯಂಕರ ಕೋಪ. ಇನ್ನೊಬ್ಬಳು ಬಹಳ ಮುಗ್ಧೆ … ಇವರಿಬ್ಬರ ನಡುವೆ ಸಿಕ್ಕಿಕೊಂಡರೆ ಆಗ ಕೃಷ್ಣ ಗತಿ ಏನು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ, ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ‘ದಿಲ್ ಪಸಂದ್’ ಚಿತ್ರವನ್ನು ನೋಡಬೇಕು. ‘ದಿಲ್ ಪಸಂದ್’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಸಿಕ್ಕಾಪಟ್ಟೆ ನಗು ಜೊತೆಗೆ ಒಂದಿಷ್ಟು ಅಳು ತರಿಸುವ ಸೆಂಟಿಮೆಂಟ್ ದೃಶ್ಯಗಳೂ ಇವೆ. ಒಟ್ಟಾರೆ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಿದ್ದು, ಕುಟುಂಬದವರೆಲ್ಲರಿಗೂ ಚಿತ್ರ ಬಹಳ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರತಂಡದವರಿಗೆ ಇದೆ. ಅದರಲ್ಲೂ […]
‘ಡಾರ್ಲಿಂಗ್’ ಕೃಷ್ಣ ಅಭಿನಯದ ಚಿತ್ರಗಳಲ್ಲಿ ಇಬ್ಬರು ಹೀರೋಯಿನ್ ಗಳಿದ್ದರೆ, ಚಿತ್ರ ಹಿಟ್ ಆಗುತ್ತದಾ? ಇಂಥದ್ದೊಂದು ಕುತೂಹಲ ಗಾಂಧಿನಗರದ ಮಂದಿಯಲ್ಲಿದೆ. ಅದಕ್ಕೆ ಕಾರಣ, ಕೃಷ್ಣ ಅವರ ಹಿಂದಿನ ಯಾವ್ಯಾವ ಚಿತ್ರಗಳಲ್ಲಿ ಅವರಿಗೆ ಇಬ್ಬಿಬ್ಬರು ನಾಯಕಿಯರಿದ್ದರೋ ಅವೆಲ್ಲವೂ ಹಿಟ್ ಆಗಿವೆ. ‘ಲವ್ ಮಾಕ್ಟೇಲ್’ನಲ್ಲಿ ಇಬ್ಬರು ನಾಯಕಿಯರಿದ್ದರು. ಅದು ಹಿಟ್ ಆಯಿತು. ಕೆಲವು ತಿಂಗಳುಗಳ ಹಿಂದೆ ‘ಲಕ್ಕಿ ಮ್ಯಾನ್’ ಚಿತ್ರ ಬಿಡುಗಡೆಯಾಯಿತು. ಅದು ಸಹ ಯಶಸ್ವಿಯಾಯಿತು. ಈಗ ‘ದಿಲ್ ಪಸಂದ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದರಲ್ಲೂ ಇಬ್ಬರು ನಾಯಕಿಯರು. ಹಾಗಾಗಿ, ಈ ಚಿತ್ರ […]
ನಿರೀಕ್ಷೆಗಳು ನಿಜವೇ ಆದರೆ ದಿಲ್ ಪಸಂದ್ ʻಲವ್ ಮಾಕ್ಟೇಲ್ʼ ಸರಣಿ ಸಿನಿಮಾಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ಮದರಂಗಿ ಕೃಷ್ಣ ಅವರನ್ನು ಹೇಗೆಲ್ಲಾ ನೋಡಲು ಜನ ಬಯಸುತ್ತಿದ್ದಾರೋ ಅಂಥಾದ್ದೇ ರೋಲಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲ ನೆನಪಿರಬೇಕು. ಇಸವಿ 2016ರಲ್ಲಿ ʻನಾನಿʼ ಹೆಸರಿನ ಸಿನಿಮಾ ಬಂದಿತ್ತು. ಪ್ರಣಾಳ ಶಿಶುವನ್ನು ಆವರಿಸಿದ್ದ ನೈಜ ಮತ್ತು ಭಯಾನಕ ಘಟನೆಯೊಂದರ ಸುತ್ತ ಹೆಣೆದಿದ್ದ ಸಿನಿಮಾವದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಸುಮಂತ್. ಇವರ ಮೂಲ ಹೆಸರು ರಾಘವೇಂದ್ರ ಗೊಲ್ಲಹಳ್ಳಿ. ತೀರಾ ಸಣ್ಣ ವಯಸ್ಸಿಗೇ ಚಿತ್ರ ನಿರ್ದೇಶಕನಾಗಬೇಕು […]
ಇಲ್ಲಿ ಕಾಣ್ತಿರೋ ಯಂಗ್’ಸ್ಟರ್ಸ್ ಮತ್ತವರ ಟೀಮ್ ಕಟ್ಟಿಕೊಟ್ಟಿರೋ ‘ಕಂಬ್ಳಿಹುಳ’ ಚಿತ್ರದ ಬಗ್ಗೆ ಬಹಳಷ್ಟು ಹೇಳಲಿಕ್ಕಿದೆ. ಈ ಚಿತ್ರ ಬರೀ ಒಂದು ಲವ್’ಸ್ಟೋರಿಯಾಗಿದ್ರೆ ನೋಡಿದವ್ರನ್ನ ಇಷ್ಟೆಲ್ಲ ಕಾಡ್ತಿರಲಿಲ್ಲ. ಇದು ಲವ್ ಸ್ಟೋರಿ ಫಾರ್ಮಟ್ಟನ್ನು ಜಂಪ್ ಮಾಡಿದ ಸಿನಿಮಾ. ಕನ್ನಡ ಸಿನಿಮಗಳಲ್ಲಿ ಹತ್ತತ್ತಿರ ಮಾಯವಾಗಿಯೇ ಹೋಗಿರುವ ‘ಸ್ಥಳೀಯ ಪರಿಸರ, ಜನಜೀವನ, ಹುಲುಮಾನವರು, ಸಣ್ಣ ಊರುಗಳ ಸಣ್ಣ ಬದುಕು ಬದುಕುವ ಜನಗಳ ನಡುವೆ ಈ ಕಥೆ ನಡೆಯುತ್ತದೆ. ಇಲ್ಲೊಮ್ಮೆ ಬರುವ ಹಾವಾಡಿಸುವ ವೃತ್ತಿಯವ ತನ್ನ ಕೆಲಸವೇ ಅಕ್ರಮವೆಂದಾಗಿ ಅವರಿವರನ್ನು ಅನ್ನಕ್ಕೆ ಕಾಸು […]
ಕಿಟ್ಟಿಗೆ ಮಾರ್ಕೆಟ್ ಇಲ್ಲ ಅಂತೇಳಿ ಬಹುತೇಕರು ಮೂಲೆಗೆ ತಿಳ್ಳಿಬಿಟ್ಟಿದ್ದರು. ಇದರ ನಡುವೆ ನನಗೆ ಕಿಟ್ಟೀನೇ ಬೇಕು ಅಂತಾ ಹಠ ಹಿಡಿದು, ಅವರನ್ನು ಕರೆತಂದು, ಅವರಿಗೊಪ್ಪುವ ಪಾತ್ರ ಮಾಡಿಸಿ, ಈಗ ವ್ಯಾಪಾರದಲ್ಲೂ ಗೆಲ್ಲುತ್ತಿರುವ ನಿರ್ದೇಶಕನ ಹೆಸರು ಸೂರಾ ಶ್ರೀನಗರ ಕಿಟ್ಟಿ ಅಂದರೆ ಯಾರು ಅನ್ನೋದನ್ನೇ ಹೆಚ್ಚೂಕಮ್ಮಿ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಮರೆತುಬಿಟ್ಟಿದ್ದರು. ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ವೆಡ್ಸ್ ಗೀತಾ ಎನ್ನುವ ಮೂರು ಸಿನಿಮಾಗಳನ್ನು ಹೊರತುಪಡಿಸಿ ಕಿಟ್ಟಿ ಹೀರೋ ಆಗಿ ನಟಿಸಿದ ಯಾವ ಸಿನಿಮಾಗಳೂ ತಲೆಯೆತ್ತಲಿಲ್ಲ. […]
ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು. ಬದುಕಲ್ಲಿ ಕಷ್ಟ ಕಂಡವರು ಮಾತ್ರ ಮತ್ತೊಬ್ಬರ ಕಣ್ಣೀರು ಒರೆಸಲು ಸಾಧ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವ ದೊಡ್ಡಬಳ್ಳಾಪುರದಲ್ಲಿ ದೊಡ್ಡರಾಯಪ್ಪನಹಳ್ಳಿ ಎನ್ನುವ ಪುಟ್ಟ […]
‘ಬನಾರಸ್’ ಚಿತ್ರ ಶುರುವಾಗಿ ಎರಡ್ಮೂರು ವರ್ಷಗಳೇ ಆಗಿವೆ. ಇನ್ನು, ಚಿತ್ರದ ಪ್ರಮೋಷನ್ ಶುರುವಾಗಿ ಕೂಡಾ ತಿಂಗಳುಗಳೇ ಆಗಿವೆ. ಒಂದಿಷ್ಟು ಇವೆಂಟುಗಳೂ ಆಗಿವೆ. ಆದರೆ, ಎಲ್ಲೂ ನಾಯಕ ಝೈದ್ ಖಾನ್ ಅವರ ತಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಚಿತ್ರತಂಡದ ಜೊತೆಯಾಗಲೀ, ಝೈದ್ ಜೊಯಾಗಿಲೀ ಕಾಣಿಸಿಕೊಂಡಿರಲಿಲ್ಲ. ಚಿತ್ರದ ಬಗ್ಗೆಯಾಗಲೀ, ತಮ್ಮ ಮಗನ ಬಗ್ಗೆಯಾಗಲೀ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಜಮೀರ್ ಅಹ್ಮದ್ ಖಾನ್ ಚಿತ್ರ ಹಾಗೂ ತಮ್ಮ ಮಗನ ಕುರಿತು ಮಾತನಾಡಿದ್ದಾರೆ. ‘ನನಗೆ ಹೆಚ್ಚು ಟೈಮ್ ಸಿಗುವುದಿಲ್ಲ […]
ಅವಳು ಅಪ್ಪ-ಅಮ್ಮನನ್ನು ಕಳೆದುಕೊಂಡು, ಚಿಕ್ಕಪ್ಪ-ಚಿಕ್ಕಮ್ಮನ ಮಮತೆಯಲ್ಲಿ ಬೆಳೆದವಳು. ಓದುತ್ತಲೇ, ಉದಯೋನ್ಮುಖ ಹಾಡುಗಾರ್ತಿಯಾಗಿಯೂ ಹೆಸರು ಮಾಡಿರುತ್ತಾಳೆ. ಇಂತವಳ ಮುಂದೆ ಅದೊಂದು ದಿನ ಹುಡಗ ಪ್ರತ್ಯಕ್ಷನಾಗುತ್ತಾನೆ. ಅವಳ ಹೆಸರು, ಹಿನ್ನೆಲೆ, ಇಷ್ಟ-ಕಷ್ಟಗಳನ್ನೆಲ್ಲಾ ಪಟಪಟನೆ ವಿವರಿಸುತ್ತಾನೆ. ನಾನು ಭವಿಷ್ಯದಲ್ಲಿ ನಿನ್ನ ಗಂಡನಾಗುವವನು. ನಮಗೆ ಇಂಥದ್ದೇ ಹೆಸರಿನ ಹೆಣ್ಣುಮಗು ಹುಟ್ಟುತ್ತದೆ… ಎಂಬಿತ್ಯಾದಿಯಾಗಿ ತ್ರಿಕಾಲ ಜ್ಞಾನಿಯಂತೆ ಭವಿಷ್ಯ ನುಡಿಯುತ್ತಾನೆ. ಹಿಂದಿನದ್ದನ್ನು ಕರಾರುವ್ಕಾಗಿ ಹೇಳಿದವನು ಮುಂದಿನದ್ದೂ ಕರೆಕ್ಟಾಗಿ ನುಡಿಯುತ್ತಿರುಬೇಕು ಅಂತಾ ಆಕೆ ನಂಬುತ್ತಾಳೆ… ಅಲ್ಲಿಂದ ಅಸಲೀ ವರಸೆಯೂ ಶುರುವಾಗುತ್ತದೆ. ಜೀವನವಿಡೀ ಮಾಡಿದ ಪಾಪ-ಕರ್ಮಗಳನ್ನು ತೊಳೆದುಕೊಳ್ಳಲು ಕೊನೆಗೆ […]