“ನಿಮಿತ್ತ ಮಾತ್ರ” ಕನ್ನಡ ಸಿನಿಮಾಗಳಲ್ಲಿ ಪ್ರಥಮ ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದು, ಬೆಂಗಳೂರು ಮತ್ತು ಮಂಗಳೂರು ಹಿನ್ನೆಲೆಯೊಂದಿಗೆ ಮೂಡಿ ಬಂದಿದೆ. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಅತೀವ ಭಯಾನಕ ಘಟನೆಯೆ ಈ ಕಥೆಯ ಆಧಾರ. ತನ್ನ ತಂದೆಯಿಂದ ಬಿಟ್ಟುಹೋಗಿದ್ದ ಸಂಧರ್ಭವನ್ನು ಅರಿಯಲು investigative ಪತ್ರಕರ್ತನೊಬ್ಬ ಈ ಕೇಸ್ ಪರಿಹರಿಸಲು ಹೊರಟಿದ್ದಾನೆ. ಅವನು ಸತ್ಯವನ್ನು ಪತ್ತೆಹಚ್ಚುವನೋ? ಅಪರಾಧಿಯನ್ನು ನ್ಯಾಯದ ಕಟ್ಟೆಗೆ ಸೆಳೆವನೋ? ಈ ಪ್ರಶ್ನೆಗಳು ಚಿತ್ರದಲ್ಲಿ ಮುಂದುವರೆಯುತ್ತ ಹೋಗುತ್ತದೆ. ಚಿತ್ರವನ್ನು ರೋಶನ್ ಡಿ ಸೌಜಾ ಅವರು ಬರೆದಿದ್ದು, ನಿರ್ದೇಶಿಸಿ […]
ಅರುಣ್ ಕುಮಾರ್ ಜಿ ಡಿಸಿಪಿ ಅರವಿಂದ್ ಸುತ್ತ ನಡೆಯುತ್ತಿರುವ ಘಟನಾವಳಿಗಳು ʻಅವರ ಬದುಕಿನಲ್ಲಿ ಏನೋ ಸಮಸ್ಯೆ ಇದೆʼ ಅನ್ನೋದನ್ನು ಆರಂಭದಲ್ಲೇ ತಿಳಿಸಿಬಿಡುತ್ತೆ. ಅವರ ಪುಟಾಣಿ ಮಗಳ ಕಣ್ಣಿಗೆ ಯಾವುದೋ ಪ್ರೇತಾತ್ಮವೊಂದು ಕಾಣಿಸುತ್ತಿರುತ್ತೆ. ಕ್ರಮೇಣ ಡಿಸಿಪಿಯ ಕಣ್ಣಿಗೂ ಗೋಚರಿಸುತ್ತದೆ. ಸತ್ತುಹೋಗಿರುವ ತನ್ನ ಪತ್ನಿಯೇ ಈ ರೀತಿ ಪ್ರೇತವಾಗಿ ಕಾಡುತ್ತಿರಬಹುದಾ ಅನ್ನೋದು ಪೊಲೀಸ್ ಅಧಿಕಾರಿ ಅರವಿಂದ್ ಅವರ ಅನಿಸಿಕೆಯಾಗುತ್ತದೆ. ತಮ್ಮ ಕಾರ್ ಚಾಲಕ ವೀರಯ್ಯ ತಂದುಕೊಟ್ಟ ಯಂತ್ರವನ್ನು ಕಟ್ಟಿಕೊಂಡು ಸುಧಾರಿಸಿಕೊಳ್ಳುತ್ತಾರೆ. ಅದೇ ವೀರಯ್ಯನ ಮಾರ್ಗದರ್ಶನದಲ್ಲಿ ಕಾಶಿಗೆ ಹೋಗಿ ಅಘೋರಿಗಳನ್ನು ಮೀಟ್ […]
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಅಕ್ಟೋಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿನೀಡಿ ಶ್ರೀಮಂಜನಾಥಸ್ವಾಮಿ ದರ್ಶನ ಪಡೆದುಕೊಂಡರು. ಧರ್ಮಾಧಿಕಾರಿಗಳಾದ ಶ್ರೀವೀರೇಂದ್ರ ಹೆಗಡೆ ಅವರು “ಗೋಪಿಲೋಲ” ಚಿತ್ರದ ಪೋಸ್ಟರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ಆಶೀರ್ವದಿಸಿದರು. ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ […]
ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ತೆರೆಬಿದ್ದಿದೆ. ಸೆಪ್ಟೆಂಬರ್ 28-29ರಂದು ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡ ಕಪ್ ಗೆದ್ದಿದ್ದು, ಸೃಜನ್ ನಾಯಕತ್ವದ ಅಪ್ಪು ಪ್ಯಾಂಥರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞನರು, ಮಾಧ್ಯಮದವರು ಭಾಗಿಯಾಗಿ ಪಂದ್ಯಾವಳಿಯನ್ನು ಮತ್ತಷ್ಟು ರಂಗುಗೊಳಿಸಿದರು. ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಅಪ್ಪು ಪ್ಯಾಂಥರ್ಸ್ ನ ಮಂಜಯ್ಯ, ಪ್ರವೀಣ ಪ್ಲೇಯರ್ಸ್ ಆಫ್ […]
ʻʻಯಾವುದಕ್ಕೂ ಇರಲಿ ಅಂತಾ ಜಗದೀಶ್ ಒಂದು ಬಾಲು ಎಸೆದರು.. ಅದನ್ನು ರಪಕ್ಕಂತಾ ಮಾ.ಮು. ಕ್ಯಾಚು ಹಿಡಿದುಬಿಟ್ಟಿತು… ಇದರ ಹೊರತಾಗಿ ಜಗದೀಶ್ ಬಳಿ ಯಾವುದೇ ವಿಡಿಯೋ ಇದ್ದಂತಿಲ್ಲ.ʼʼ ಅನ್ನೋದು ಜಗದೀಶ್ ಅವರನ್ನು ತೀರಾ ಹತ್ತಿರದಿಂದ ಬಲ್ಲ, ಖ್ಯಾತ ವಕೀಲರೊಬ್ಬರ ಈ ಕ್ಷಣದ ಅಭಿಪ್ರಾಯ. ಫೈರ್ ಬ್ರಾಂಡ್ ಅಂತಲೇ ಫೇಮಸ್ಸಾಗಿರೋ ವಕೀಲ ಜಗದೀಶ್ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಲಾಯರ್ ಜಗದೀಶ್ ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿಯೊಬ್ಬರ ಖಾಸಗೀ ವಿಡಿಯೋ ಇದೆ ಅಂತಾ ಹೇಳುತ್ತಲೇ ಬಂದಿದ್ದರು. ಅವರು ವಿಡಿಯೋ […]
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ. ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ […]
ಕರುನಾಡ ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ […]
ಕನ್ನಡದಲ್ಲಿ ಈಗಾಗಲೇ ‘ಅಮೃತ್ ಅಪಾರ್ಟ್ಮೆಂಟ್’ ಮತ್ತು ‘ದ ಜಡ್ಜ್ ಮೆಂಟ್’ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಸದ್ದಿಲ್ಲದೆ ಹೊಸ ಸಿನೆಮಾಕ್ಕೆ ತಯಾರಿ ನಡೆಸಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಕಥಾಹಂದರ ಈಗಾಗಲೇ ಪೂರ್ಣಗೊಂಡಿದ್ದು, ಈ ಸಿನೆಮಾಕ್ಕೆ ಹಿಂದಿಯ ‘ಲಾಪತ ಲೇಡಿಸ್’ ಖ್ಯಾತಿಯ ಸೋನು ಆನಂದ್ ಬರಹಗಾರರಾಗಿ ಎಂಟ್ರಿಯಾಗಿದ್ದಾರೆ. ಇತ್ತೀಚೆಗಷ್ಟೇ ಹಿಂದಿಯ ‘ಲಾಪತ ಲೇಡಿಸ್’ ಸಿನೆಮಾ ಭಾರತದಿಂದ ಅಧಿಕೃತವಾಗಿ ‘ಆಸ್ಕರ್ ಪ್ರಶಸ್ತಿ’ ನಾಮನಿರ್ದೇಶನವಾಗಿದೆ. ‘ಆಮೀರ್ ಖಾನ್ ಪ್ರೊಡಕ್ಷನ್’ ನಿರ್ಮಾಣದ […]
ಬಾಲಿವುಡ್ ಸ್ಟಾರ್ ಸೋನು ಸೂದ್ ನಟಿಸಿರುವ, ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಚಿತ್ರದ ವಿಶೇಷ ಪ್ರದರ್ಶನ ಸೆ.29ರಂದು ದುಬೈನಲ್ಲಿ ನಡೆಯಲಿದೆ. ನಮ್ಮ ರೈತರ ಪರಿಶ್ರಮ, ಬದುಕು ಬವಣೆ ಹಾಗೂ ಹೋರಾಟದ ಕಥನವನ್ನು ಒಳಗೊಂಡ ಈ ಚಿತ್ರ ವಿಮರ್ಶಕರ ಹಾಗೂ ವೀಕ್ಷಕರಿಂದ ಪ್ರಶಂಸೆ ಗಳಿಸಿ ಯಶಸ್ವಿ ಪ್ರದರ್ಶನ ಕಂಡಿತ್ತು. ಸೋನು ಸೂದ್ ಅಭಿನಯ ಹಾಗೂ ಹಂಸಲೇಖ ಅವರ ಸಾಹಿತ್ಯ, ಸಂಗೀತದ ಹಾಡುಗಳು ಶ್ರೀಮಂತ ಚಿತ್ರದ ಹೈಲೈಟ್ ಆಗಿತ್ತು. ದುಬೈನ ಅಲ್ ಘುರೈರ್ ಸೆಂಟರ್ ನಲ್ಲಿ ಸೆ.29ರ ಮ.2ಗಂಟೆಗೆ ನಡೆಯಲಿರುವ […]
ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗಿಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ಇದೀಗ ಕನ್ನಡದ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚೇತನ್ ರಾವ್ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಹೌದು, ಕನ್ನಡಿಗ ಅದರಲ್ಲೂ ಬೆಂಗಳೂರಿಗರಾದ ಚೇತನ್ ರಾವ್, ಆರ್ವಿ ಕಾಲೇಜಿನಲ್ಲಿ ಇಂಜಿನಿಯರಿಂಗ […]