ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಮುಂತಾದ ಗಣ್ಯರು “ಗೋಪಿಲೋಲ” ಚಿತ್ರದ […]
ಕಿಚ್ಚ ಸುದೀಪ್ ಶೋನ ಸೂತ್ರಧಾರ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ಸೀಸನ್ 10ರ ಬಹುದೊಡ್ಡ ಯಶಸ್ಸಿನ ಬಳಿಕ ದೊಡ್ಡ ಜವಾಬ್ದಾರಿಯೊಂದಿಗೆ ಕಲರ್ಸ್ ಕನ್ನಡ ಮತ್ತೊಂದು ಸೀಸನ್ ಜತೆಗೆ ಆಗಮಿಸುತ್ತಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ಗಮನ ಸೆಳೆದಿರುವ ಸೀಸನ್ 11, ಇನ್ನೇನು ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ಸಲದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್, ಅಲೋಕ್ ಜೈನ್ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ […]
ಸಮರ್ಜಿತ್ ಲಂಕೇಶ್, ಗೌರಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ. ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ […]
ಸಾಮಾಜಿಕ ಜಾಲತಾಣಗಳಲ್ಲಿ ಮುಗ್ಧ ಯುವಕರನ್ನು ರಂಗು ರಂಗಿನ ಆಟಗಳ ಮೂಲಕ ಸೆಳೆಯುತ್ತ, ಅಧಿಕ ಲಾಭದ ಆಸೆ ತೋರಿಸಿ, ಅವರನ್ನು ವಂಚಿಸುವ ಆನ್ಲೈನ್ ಗೇಮ್ ರೂವಾರಿಗಳನ್ನು ನ್ಯಾಯವಾದಿಯೊಬ್ಬ ಹೇಗೆ ಕಟಕಟೆಗೆ ತಂದು ನಿಲ್ಲಿಸಿದ ಎಂಬುದನ್ನು ರೋಚಕವಾಗಿ ನಿರೂಪಿಸಿರುವ ಚಿತ್ರ ರಮ್ಮಿಆಟ. ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾದ ಈ ಚಿತ್ರವೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಬುಕ್ ಮೈ ಷೋದಲ್ಲಿ 9.4 ರೇಟಿಂಗ್ ಪಡೆಯುವ ಮೂಲಕ ಈವಾರ ತೆರೆಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಇಂಥ ಆಟಗಳನ್ನು ಪ್ರೊಮೋಷನ್ ಮಾಡುವ ಸಿನಿಮಾ […]
ಕಡಲತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ “ಅಮರಾವತಿ ಪೊಲೀಸ್ ಸ್ಟೇಷನ್”. ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟೀಸರನ್ನು ದಿ.ಲೀಲಾವತಿ ಅವರ ಪುತ್ರ, ಹಿರಿಯನಟ ವಿನೋದ್ ರಾಜ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಅಮರಾವತಿ ಕರಾವಳಿಯ ಒಂದು ಭಾಗ, ಇಲ್ಲಿ ಮುತ್ತೂ ಸಿಗುತ್ತೆ, ಮೃತ್ಯುನೂ ಸಿಗುತ್ತೆ, ಇಲ್ಲಿನ ಸಮುದ್ರದ ಅಲೆ ಕಲೆನೂ ಹೇಳುತ್ತೆ, ಎಗ್ರಾಡುದ್ರೆ […]
ಪ್ರೀತಿಯ ನಡುವೆ ಜಾತಿ ಎನ್ನುವ ಪೀಡೆ ಯಾವತ್ತೂ ನುಸುಳಬಾರದು. ಅದು ಎಲ್ಲರ ಬದುಕನ್ನೂ ಬರ್ಬಾದು ಮಾಡುತ್ತದೆ. ಈ ದೇಶದಲ್ಲಿ ಕಾನೂನಿದೆ, ಪೊಲೀಸು ವ್ಯವಸ್ಥೆ ಇದೆ ಅನ್ನೋದನ್ನೆಲ್ಲಾ ಮರೆತು ಮೇಲ್ವರ್ಗದ ಅಮಲಿನಲ್ಲಿರುವವರು ತೀರಾ ಜೀವ ವಿರೋಧಿ ಕೃತ್ಯಗಳನ್ನು ಎಸಗಿಬಿಡುತ್ತಾರೆ. ಜಾತಿಯೆನ್ನುವ ದೊಡ್ಡಸ್ಥಿಕೆ ಮಾಡಬಾರದ್ದನ್ನೆಲ್ಲಾ ಮಾಡಿಬಿಡುತ್ತದೆ. ʻಕರ್ಕಿʼ ಚಿತ್ರದ ಕಥಾವಸ್ತು ಕೂಡಾ ಇಂಥದ್ದೇ. ತಳ ಸಮುದಾಯದ ಹುಡುಗನೊಬ್ಬ ಕಾನೂನು ಪದವೀಧರನಾಗಬೇಕು ಅಂತಾ ಕನಸು ಕಂಡ ಹುಡುಗನೊಬ್ಬ ತನ್ನ ಪ್ರೀತಿಯ ಕಾರಣಕ್ಕೆ ಎಲ್ಲವನ್ನೂ ಕಳೆದುಕೊಳ್ಳುತ್ತಾ ಸಾಗಬೇಕಾಗುತ್ತದೆ. ಈತನ ಮುಂದೆ ದ್ವಂದ್ವಗಳು, ಸವಾಲುಗಳು […]
ಅವನ ಅಪ್ಪ ಸಾಯುವ ಮೊದಲು ಭಾಷೆ ತೆಗೆದುಕೊಂಡಿರುತ್ತಾನೆ. ʻಇಷ್ಟು ದಿನ ನಾನು ನನ್ನ ತಂದೆಯ ಸಂಪ್ರದಾಯ, ನಿಯಮಗಳನ್ನು ಪಾಲಿಸಿದ್ದೇನೆ. ಇನ್ನು ಮುಂದೆ ನೀನು ಅದನ್ನು ಮುಂದುವರೆಸುʼ ಎನ್ನುವಂತೆ. ಅದೇನೆಂದರೆ, ತನ್ನೊಟ್ಟಿಗೆ ಪೌರೋಹಿತ್ಯ ಮಾಡುವ ಮೊಮ್ಮಗ ಲಂಗೋಟಿಯನ್ನು ಬಿಟ್ಟು ಅಂಡರ್ವೇರ್ ತೊಡಬಾರದು ಅನ್ನೋದು ತಾತನ ಕಟ್ಟಪ್ಪಣೆ. ಇವನಿಗೋ ವಿಶ್ವದ ಟಾಪ್ ಬ್ರಾಂಡ್ ಅಂಡರ್ವೇರ್ ತೊಡೋದೇ ಜೀವನದ ಮಹದಾಸೆ. ಬುದ್ದಿ ಬಂದಾಗಿನಿಂದ ತೀರ್ಥಕುಮಾರನ ಪಾಲಿಗೆ ಲಂಗೋಟಿ ಅನ್ನೋದು ವಿಧವಿಧವಾಗಿ ಕಾಡಿರುತ್ತೆ; ಕೀಳರಿಮೆಗೆ ದೂಡಿರುತ್ತದೆ. ಸ್ನೇಹಿತರೆಲ್ಲಾ ಈಜಲು ಹೋದರೆ ಈತ ಮಾತ್ರ […]
ಲಂಗೋಟಿ ಮ್ಯಾನ್ ಸಿನಿಮಾದ ಮೂಲಕ ನಾಯಕನಟನಾಗಿ ಬಣ್ಣ ಹಚ್ಚಿರುವ ಹುಡುಗ ಆಕಾಶ್ ರಾಂಬೋ. ಮೈಮೇಲೆ ಬಟ್ಟೆಯಿದ್ದೂ, ಕ್ಯಾಮೆರಾ ಮುಂದೆ ನಟಿಸೋದು ಕಷ್ಟ. ಆದರೆ, ಬರೀ ತುಂಡು ಲಂಗೋಟಿ ಕಟ್ಟಿಕೊಂಡು ನೂರಾರು ಜನರ ನಡುವೆ ನಟಿಸೋದು ಸುಮ್ಮನೆ ಮಾತಲ್ಲ. ಆದರೆ ಆಕಾಶ್ ನಾಚಿಕೆ ಗೀಚಿಕೆಗಳನ್ನೆಲ್ಲಾ ಕಿತ್ತೆಸೆದು ಬೋಲ್ಡ್ ಆಗಿ ನಟಿಸಿದ್ದಾರೆ. ಆಕಾಶ್ ಮಾತಾಡುತ್ತಿದ್ದರೆ, ಈತ ಹೊಸಬ ಅಂತಾ ಯಾವ ಕೋನದಲ್ಲೂ ಅನ್ನಿಸೋದಿಲ್ಲ. ತನ್ನ ಮನಸ್ಸಿನಲ್ಲಿರೋದನ್ನೆಲ್ಲಾ ಯಾವ ಮುಲಾಜು, ಅಂಜಿಕೆಗಳಿಲ್ಲದೆ ಪಟಪಟ ಅಂತಾ ಮುಕ್ತ ಮನಸ್ಸಿನಿಂದ ಮಾತಾಡುವ ಆಕಾಶ್ ಗೆ […]
ಇದೇ ವಾರ ಲಂಗೋಟಿ ಮ್ಯಾನ್ ಹೆಸರಿನ ಚಿತ್ರ ತೆರೆಗೆ ಬರುತ್ತಿದೆ. ಪುರುಷರ ಅಸ್ತಿತ್ವವೇ ಆಗಿರುವ ಲಂಗೋಟಿಯ ಸುತ್ತ ಕಥಾವಸ್ತುವನ್ನು ಹೆಣೆದು, ಅದಕ್ಕೆ ಪೂರಕವಾದ ತಮಾಷೆಯನ್ನೂ ಬೆರೆಸಿ ಸಿನಿಮಾರೂಪದಲ್ಲಿ ಕಟ್ಟಿರುವವರು ಮಹಿಳಾ ನಿರ್ದೇಶಕಿ. ಹೆಚ್ಚೇನಲ್ಲ, ಕಳೆದ ಒಂಭತ್ತು ವರ್ಷಗಳ ಹಿಂದಷ್ಟೇ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ನೋಡಿದ ಎಲ್ಲರೂ ಇಷ್ಟಪಟ್ಟಿದ್ದ ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಸಂಜೋತಾ. ಮೊದಲ ಸಿನಿಮಾದ ನಿರ್ದೇಶನದ ನಂತರ ಟೀವಿ ವಾಹಿನಿಯಲ್ಲಿ ನೌಕರಿ ಆರಂಭಿಸಿದ್ದರು. ಟೀವಿ ಉದ್ಯಮದ ಒತ್ತಡ […]
ಈವಾರ ಲಂಗೋಟಿ ಮ್ಯಾನ್ ಚಿತ್ರ ತೆರೆಗೆಬರುತ್ತಿದೆ. ಭಿನ್ನ ಶೀರ್ಷಿಕೆಯ ಅಷ್ಟೇ ಹೊಸತನದ ಕಥಾವಸ್ತು ಹೊಂದಿರು ಲಂಗೋಟಿ ಮ್ಯಾನ್ ಬಗ್ಗೆ ಅದರ ನಿರ್ದೇಶಕಿ ಸಂಜೋತಾ ಒಂದಿಷ್ಟು ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ…! ಟೀಸರ್ ನೋಡಿದ ಕೆಲವರು ನಮ್ಮ ಚಿತ್ರದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದು ನಿಜ. ಯಾವಾಗ ಹಾಡು ಅನಾವರಣಗೊಂಡಿತೋ ಆಗ ಜನಕ್ಕೆ ವಾಸ್ತವದ ಅರಿವಾಯಿತು. ಲಂಗೋಟಿ ಮ್ಯಾನ್ ಎನ್ನುವ ಹೆಸರಿಟ್ಟಿದ್ದೇವೆ ಹೊರತು, ಇದು ಯಾವುದೇ ಜನಾಂಗ ಅಥವಾ ವರ್ಗವನ್ನು ಲೇವಡಿ ಮಾಡುವ ಉದ್ದೇಶ ಹೊಂದಿಲ್ಲ ಅನ್ನೋದು […]