ಲೂಪ್ ಸ್ಟುಡಿಯೋದಲ್ಲಿ ಮಾತನಾಡಿದ “ಮಾರುತ”.

Picture of Cinibuzz

Cinibuzz

Bureau Report

ಖ್ಯಾತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ ” ಮಾರುತ”. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿದ ಈ ಚಿತ್ರದ ಡಬ್ಬಿಂಗ್ ಕೂಡ ಮುಕ್ತಾಯವಾಗಿದೆ. ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ “ಮಾರುತ” ಚಿತ್ರದ ಡಬ್ಬಿಂಗ್ ನಡೆದಿದೆ.

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ “ಮಾರುತ” ಚಿತ್ರವನ್ನು ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ‌.

ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಡಾ||ಎಸ್ ನಾರಾಯಣ್ ಅವರ ನಿರ್ದೇಶನ, ಕೆ.ಮಂಜು – ರಮೇಶ್ ಯಾದವ್ ಅವರ ನಿರ್ಮಾಣ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿರುವ‌ ದುನಿಯಾ ವಿಜಯ್, ಶ್ರೇಯಸ್ ಅವರ ಅಭಿನಯ‌ದಲ್ಲಿ‌ ಮೂಡಿಬರುತ್ತಿರುವ “ಮಾರುತ” ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅಭಿಮಾನಿಗಳು ಸಹ ಆದಷ್ಟು ಬೇಗ ಬಹು ನಿರೀಕ್ಷಿತ ಈ ಚಿತ್ರವನ್ನು ತೆರೆಯ ಮೇಲೆ‌ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ “ಮಾರುತ” ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.

ಒಂದೊಳ್ಳೆ ಕಂಟೆಂಟ್ ವುಳ್ಳ ಈ ಚಿತ್ರದ ರಚನೆ ಹಾಗೂ ನಿರ್ದೇಶನ ಎಸ್ ನಾರಾಯಣ್ ಅವರದು. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನ ಈ‌ ಚಿತ್ರಕ್ಕಿದೆ.

ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು‌, ಬೃಂದಾ(ನಾಯಕಿ), ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಸಿದ್ದಾರೆ..

ಇನ್ನಷ್ಟು ಓದಿರಿ

Scroll to Top