ಪ್ರಭಾಸ್ ನಟನೆಯ “ದಿ ರಾಜಾಸಾಬ್” ಚಿತ್ರದ ಬಗೆಗಿನ ವದಂತಿ ತಳ್ಳಿ ಹಾಕಿದ ಚಿತ್ರತಂಡ

Picture of Cinibuzz

Cinibuzz

Bureau Report

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಟ್ರೇಲರ್ ಮೂಲಕ ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಫಿಕ್ಷನ್ ಕಥೆಯ ಬಗೆಗಿನ ಕುತೂಹಲ ಪ್ರಭಾಸ್ ಅಭಿಮಾನಿಗಳಲ್ಲಿಯೂ ಹೆಚ್ಚಾಗಿದೆ. ಈ ನಡುವೆ ಇದೇ ಚಿತ್ರದ ಬಗ್ಗೆ ಒಂದಿಲ್ಲೊಂದು ಗಾಸಿಪ್ ಹರಿದಾಡ್ತಿದೆ. ಆ ಗಾಸಿಪ್ ಬಗ್ಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ.

ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೀಗಿರುವಾಗ ಇದೇ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ವದಂತಿಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ವದಂತಿಯನ್ನು ತಳ್ಳಿ ಹಾಕಿದೆ.

ಈ ಮೂಲಕ ಜನವರಿ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಿ ರಾಜಾಸಾಬ್ ಸಿನಿಮಾ ತೆರೆಗೆ ಬರುವುದು ಖಚಿತ ಎಂದು ಚಿತ್ರತಂಡ ಹೇಳಿದೆ.‌ ಯಾವುದೇ ವಿಳಂಬವಿಲ್ಲದೆ, ಅತ್ಯುನ್ನತ ತಾಂತ್ರಿಕ ಗುಣಮಟ್ಟವನ್ನು ಕಾಪಾಡಿಕೊಂಡು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದಿದೆ.

​ಚಿತ್ರವು ಅತ್ಯಂತ ಅದ್ದೂರಿ ರೂಪದಲ್ಲಿ ಪ್ರೇಕ್ಷಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಿಭಾಗವು ಪರಿಪೂರ್ಣ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ​ಈ ‘ಲಾರ್ಜರ್ ದ್ಯಾನ್ ಲೈಫ್’ ರೀತಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಒಂದು ಅತ್ಯುತ್ತಮ ಥಿಯೇಟರ್ ಅನುಭವ ನೀಡಲೆಂದೇ ಈ ಸಿನಿಮಾ ನಿರ್ಮಾಣಮಾಡಲಾಗಿದೆ ಎಂದಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top