ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಜೈ ಟ್ರೇಲರ್ ರಿಲೀಸ್

Picture of Cinibuzz

Cinibuzz

Bureau Report

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಜೈ ಸಿನಿಮಾವನ್ನ ನಿರ್ದೇಶನ ಮಾಡಿ, ಅವರೇ ನಟಿಸಿರುವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೀಗ ಟ್ರೇಲರ್ ರಿಲೀಸ್ ಆಗಿದ್ದು, ಒಂದು ಭರಪೂರ ಮನರಂಜನೆಯ ಸಿನಿಮಾ ಎಂಬುದು ತೋಚುತ್ತಿದೆ. ಆಂಕರ್ ಅನುಶ್ರೀ ಟ್ರೇಲರ್ ರಿಲೀಸ್ ಮಾಡಿದ್ದು, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಹಲವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ರೂಪೇಶ್ ಶೆಟ್ಟಿ ಹಾಗೂ ಜೈ ತಂಡಕ್ಕೆ ಶುಭಕೋರಿದರು. ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ಹುಲಿ ಕುಣಿತ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಅಶ್ಚತ್ಥ್ ನಾರಾಯಣ್ ಅವರು ಕೂಡ ಆಗಮಿಸಿದ್ದರು. ಅವರು ಹೂಗುಚ್ಛ ನೀಡಿ ರೂಪೇಶ್ ಶೆಟ್ಟಿ ಸ್ವಾಗತಿಸಿದರು. ಇವತ್ತು ಜೈ ಸಿನಿಮಾದ ಟ್ರೇಲರ್ ಲಾಂಚ್ ಆಗ್ತಾ ಇದೆ. ಜೈ ದೇಶದಾದ್ಯಂತ ರಿಲೀಸ್ ಆಗಲಿದೆ. ನಾವೆಲ್ಲಾ ನೋಡುವುದಕ್ಕೆ ಕಾತುರರಾಗಿದ್ದೇವೆ ಎಂದಿದ್ದಾರೆ.

ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮಾತನಾಡಿ, ಇವತ್ತು ತುಂಬಾನೇ ಖುಷಿ ಆಗ್ತಾ ಇದೆ. ತುಳುನಲ್ಲಿ ಸಣ್ಣದಾಗಿ ಮಾಡಬೇಕೆಂದು ಶುರು ಮಾಡಿದ ಸಿನಿಮಾ. ಆದ್ಎ ವಿದೇಶದಲ್ಲೂ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ತುಳು ಸಿನಿಮಾ ಕನ್ನಡ ಹಾಗೂ ತುಳು ಸಿನಿಮಾವಾಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್ ಶೆಟ್ಟಿ ಅಣ್ಣ. ಸುನೀಲ್ ಶೆಟ್ಟಿ ಅಣ್ಣನಿಗೆ ನಾವ್ಯಾರು ಅಂತಾನೆ ಗೊತ್ತಿರಲಿಲ್ಲ. ಪ್ರೊಡ್ಯೂಸರ್ ಕಡೆಯಿಂದ ಭೇಟಿಯಾಗಿ ಮನವಿ ಮಾಡಿಕೊಂಡೆವು. ನೀವೂ ಬೆಂಬಲ ಕಿಟ್ಟರೆ ನಮ್ಮ ಸಿನಿಮಾ ಇನ್ನೆಲ್ಲೋ ಹೋಗಿ ಬಿಡುತ್ತೆ ಅಂತ. ಒಪ್ಪಿಕೊಂಡ್ರು, ಸಿನಿಮಾ ಮುಗಿಸಿ ಹೋಗಿ ಬಿಡಬಹುದಿತ್ತು. ಆದರೆ ಪ್ರಚಾರಕ್ಕೂ ನಮ್ಮ ಜೊತೆಗೆ ನಿಂತಿದ್ದಾರೆ. ಸಿನಿಮಾ ರಿಲೀಸ್ ಜೊತೆಗೆ ಬರ್ತಿನಿ ಎಂದಿದ್ದಾರೆ ಎಂದು ಸುನೀಲ್ ಶೆಟ್ಟಿಯ ಬೆಂಬಲವನ್ನ ಹೊಗಳಿದರು.

ಸುನೀಲ್ ಶೆಟ್ಟಿ ಮಾತನಾಡು, ನಾನು ಕರ್ನಾಟಕದವನು. ನಾನು ಬೆಂಗಳೂರಿಗೆ ಸಾಕಷ್ಟು ಸಲ ಬರ್ತಾ ಇರ್ತೀನಿ. ಯಾಕಂದ್ರೆ ನನ್ನ ಸಹೋದರಿ ಸೇರಿದಂತೆ ನನ್ನ ಸಂಬಂಧಿಕರು ಇಲ್ಲಿದ್ದಾರೆ. ಸಾಕಷ್ಟು ನೆನಪುಗಳು ಬೆಂಗಳೂರಿನ ಜೊತೆಗೆ ಇದೆ. ರಾಜ್‍ಕುಮಾರ್ ಅವರು ಪುನೀತ್ ರಾಜ್‍ಕುಮಾರ್ ಅವರು ನಂಗೆ ತುಂಬಾ ಕ್ಲೋಸ್ ಇದ್ರು. ಕಿಚ್ಚ ಸುದೀಪ ತುಂಬಾ ಆತ್ಮೀಯರಾಗಿದ್ದಾರೆ. ಮುಂಬೈ, ಮಹಾರಾಷ್ಟ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ಅದು ನನ್ನ ಕರ್ಮ ಭೂಮಿ. ಆದರೆ ನನ್ನ ಜನ್ಮ ಭೂಮಿ ಕರ್ನಾಟಕದ ಮುಲ್ಕಿ ಎಂದು ಕರ್ನಾಟಕದ ನಂಟಿನ ಬಗ್ಗೆಯೂ ಹೇಳುತ್ತಾ, ಜೈ ಸಿನಿಮಾ ನೋಡಲು ತಿಳಿಸಿದರು.

ಶೆಟ್ಟಿ ಕಲೆಯಲ್ಲಿ ತುಂಬಾ ಗಟ್ಟಿ. ಹಂಗಾಗಿ ಹಟ್ಟಿಯಾಗಿ ನೆಲೆಯೂರಿದ್ದಾರೆ. ಅವರಿಗೋಸ್ಕರ ನಾನು ಇದು ಮೊದಲ ಕಾರ್ಯಕ್ರಮ ಮಾಡ್ತಾ ಇರೋದು. ಅವರು ಕೂಡ ಆರ್ಜೆ ಆಗಿ, ಕಿರುತೆರೆ ನಿರೂಪಕರಾಗಿ, ಸಹ ನಟನಾಗಿದ್ದವರು ಇಂದು ನಾಯಕ ನಟನಾಗಿ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದ್ದಾರಲ್ವಾ, ಈ ರೀತಿಯ ಹೀರೋಗಳನ್ನ ಬೆಳೆಸಬೇಕು ಅಂದ್ರೆ ಚಪ್ಪಾಳೆ ಸಿಗಲೇಬೇಕು. ತುಳುನಾಡಲ್ಲಿ ರೂಪೇಶ್ ಶೆಟ್ಟಿ ಅವರನ್ನ ವಾಕಿಂಗ್ ಸ್ಟಾರ್ ಅಂತ ಕರೀತೀವಿ ಎಂದು ರೂಪೇಶ್ ಶೆಟ್ಟಿ ಅವರನ್ನ ಹಾಡಿ ಹೊಗಳಿದರು ಅನುಶ್ರೀ ಅವರು.

ರಾಜ್ ದೀಪಕ್ ಶೆಟ್ಟಿ ಮಾತನಾಡುತ್ತಾ, ರೂಪೇಶ್ ಶೆಟ್ಟಿ ವಯಸ್ಸಲ್ಲಿ ನನಗಿಂತ ಚಿಕ್ಕವರೇ ಇರಬಹುದು. ಆದರೆ ಅವರ ಅದ್ಭುತ ಆಲೋಚನೆ ತುಂಬಾ ದೊಡ್ಡದು. ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್ ಗೂ ಬೇಕಾಗಿರುವಂತ ಒಂದಷ್ಟು ವಿಚಾರಗಳನ್ನ ಅವರಿಂದ ತಿಳಿದುಕೊಂಡಿದ್ದೇನೆ. ಸಿನಿಮಾ ಮುಗಿದ ಮೇಲೆ ವಿಲನ್ ನ ಬಿಟ್ಟು ಬಿಡ್ತಾರೆ. ಆದ್ರೆ ರೂಪೇಶ್ ಶೆಟ್ಟಿ ಜೊತೆಗೆ ಇಟ್ಟುಕೊಂಡಿದ್ದಾರೆ. ಸುನೀಲಣ್ಣ ಕೂಡ ಈ ಸಿನಿಮಾದಲ್ಲಿದ್ದಾರೆ ಎಂದಾಗ ಒಪ್ಪಿಕೊಳ್ಳದೆ ಇರೋಕೆ ಆಗುತ್ತಾ. ಕಥೆ ಕೇಳಜದಾಗ ವಾವ್ ಅನ್ನಿಸ್ತು ಎಂದಿದ್ದಾರೆ.

ಗುರುಕಿರಣ್ ಮಾತನಾಡುತ್ತಾ, ಇವತ್ತು ಕಾರ್ಯಕ್ರಮಕ್ಕೆ ಸುನೀಲಣ್ಣ ಬಂದಿರೋದು ಬಹಳ ಖುಷಿಯ ವಿಚಾರ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನ ಸಂಗೀತಕ್ಕೆ ಪ್ರೋತ್ಸಾಹ ಮಾಡಿದ್ದೇ ಸುನೀಲಣ್ಣ. ಒಂದು‌ ಲೆಕ್ಕದಲ್ಲಿ ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣವೇ ಸುನೀಲಣ್ಣ. ಅದನ್ನ ಯಾವತ್ತು ಮರೆಯೋದಕ್ಕೆ ಸಾಧ್ಯವಿಲ್ಲ. ಶೆಟ್ರುಗಳೆಲ್ಲಾ ಸಿಕ್ಸರ್ ಹೊಡೀತಾ ಇದ್ದಾರೆ. ರೂಪೇಶ್ ಶೆಟ್ರು ಹೇಗೆ ಹೊಡೆಯುತ್ತಾರೆ ಎಂಬುದನ್ನ ನೋಡಬೇಕು. ಈ ಸಿನಿಮಾದಲ್ಲಿ ನಾನು ಒಂದು ಹಾಡು ಹಾಡಿದ್ದೇನೆ. ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top