Somu Sound EngineerCharan Raj, Directed By Abhi, Produced By Christopher Kini_Cinibuzz_Review
ಎಲ್ಲಿ ಕಂಡ ಕನಸು ನನಸಾಗೋದಿಲ್ಲವೋ? ತಾನೊಪ್ಪುವ, ತನ್ನನ್ನೊಪ್ಪುವ ಹುಡುಗ ಸಿಗೋದಿಲ್ಲವೋ ಅನ್ನೋದು ಆ ಹೆಣ್ಣುಮಗಳ ತಳಮಳ. ಸ್ಥೂಲಕಾಯದ ಹುಡುಗಿಯರಿಗೆ ಅಂಥದ್ದೊಂದು ಟೆನ್ಷನ್ ಯಾವತ್ತಿಗೂ ಇರುತ್ತದೆ. ಬರುವವರೆಲ್ಲಾ ಸಣ್ಣಗಿರುವ ತಂಗಿಯ ಕಡೆ ನೋಡಿದರೆ ಯಾರಿಗೆ ತಾನೆ ಸಂಕಟವಾಗೋದಿಲ್ಲ. ಒಂದೊಳ್ಳೆ ಸೀರೆಗೆ ಒಪ್ಪುವ ಡಿಸೈನರ್ ರವಿಕೆ ಒಲಿಸಲು ತನ್ನ ಊರಿನ ಚಂದ್ರಣ್ಣನ ಬಳಿ ಹೋಗುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ರವಿಕೆಯ ತಮಾಷೆ ಪ್ರಸಂಗ. ಕ್ರಮೇಣ ಅದು ವಿಕೋಪಕ್ಕೆ ಹೋಗಿ ಸೀರಿಯಸ್ ಪ್ರಸಂಗವಾಗಿಯೂ ಮಾರ್ಪಡುತ್ತದೆ. ಇಲ್ಲಿ ರವಿಕೆ ಅನ್ನೋದು ಒಂದು ರೂಪಕವಷ್ಟೇ. ಹೊಂದಾಣಿಕೆ […]
ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ […]
ಆ ಕಾಲೇಜು ತೆರೆದುಕೊಂಡಿದ್ದೇ ಬರೀ ಮೂವತ್ತೈದು ಪರ್ಸೆಂಟ್ ಪಡೆದು ಪಾಸಾದ ಮಕ್ಕಳಿಗಾಗಿ. ಇಂತಿಷ್ಟು ಪರ್ಸೆಂಟು, ಪೇಮೆಂಟು ಇದ್ದರೂ ಕಾಲೇಜಿಗೆ ಪ್ರವೇಶಾವಕಾಶ ಸಿಗೋದು ಕಷ್ಟ. ಇಂಥದ್ದರಲ್ಲಿ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಕಾಲೇಜು ಆರಂಭವಾದರೆ ಅಂಥಾ ಹುಡುಗರಿಗೆ ಎಷ್ಟು ಖುಷಿಯಾಗಬಹದು. ಕಾಲೇಜು ಮಾತ್ರವಲ್ಲ, ಹಾಸ್ಟೆಲ್ ಸೌಲಭ್ಯವೂ ಅಲ್ಲಿರುತ್ತದೆ ಅಂದರೆ ಹುಡುಗರ ಪಾಲಿಗದು ಸ್ವರ್ಗ! ಹಾಗೆ ಸೀಟು ಪಡೆದು ಬಂದ ಹುಡುಗ ಹುಡುಗಿಯರ ಪ್ರೀತಿ ಪ್ರೇಮ ಪ್ರಣಯದಾಟಗಳೂ ಶುರುವಾಗುತ್ತವೆ. ಹುಡುಗರ ಭವಿಷ್ಯದಂತೆಯೇ ಇಲ್ಲಿನ ಕಥೆ ಕೂಡಾ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು ಎನ್ನುವ […]
ನಡೆದುಹೋದ ಘಟನೆ ಮತ್ತೆ ಮರುಕಳಿಸಲ್ಲ. ಆದರೆ, ಅಲ್ಲಿ ಏನು ನಡೆಯಿತು ಅಂತಾ ತಿಳಿದುಕೊಳ್ಳೋಕೆ ಎವಿಡೆನ್ಸ್ ಇಂದ ಮಾತ್ರ ಸಾಧ್ಯ…. ನಾಲೆ ನಿರ್ಮಾಣದ ಕಾಮಗಾರಿ ಮಾಡಲು ಹೋದ ಕಾರ್ಮಿಕರ ಕಣ್ಣಿಗೆ ಬಿದ್ದ ಅಸ್ತಿಪಂಜರಗಳ ಬಗ್ಗೆ ತನಿಖೆ ಮಾಡಲು ಬಂದ ಫೊರೆನ್ಸಿಕ್ ತಂಡ ಅಗೆದು ತೆಗೆಯೋದು ಬರೋಬ್ಬರಿ ನೂರಾ ಎಂಟು ಜನರ ಕಳೇಬರ. ಅವರೆಲ್ಲಾ ಸತ್ತಿದ್ದು ಯಾಕೆ? ಅವರನ್ನೆಲ್ಲಾ ಅಷ್ಟು ನಿರ್ದಯಿಯಾಗಿ ಕೊಂದು ಒಂದೇ ಕಡೆ ಹೂತವನು ಯಾರು? ಅದಕ್ಕೆ ಕಾರಣ ಏನಿರಬಹುದು…? ಇಂಥದ್ದೊಂದು ಕೌತುಕದ ಪ್ರಶ್ನೆಯೊಂದಿಗೆ ಆರಂಭವಾಗುವ ಕತೆ […]
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ದಿಢೀರಂತಾ ಮದುವೆಯಾಗಿ ಒಟ್ಟು ಸೇರಿದ ಎರಡು ಜೀವಗಳು ಇಡೀ ಜೀವನ ಒಂದಾಗಿ ಬಾಳಬೇಕು. ಪರಸ್ಪರರ ಇಷ್ಟ ಕಷ್ಟ, ನಡೆ, ನುಡಿ, ಮಾತು, ಮಂಥನಗಳು ಬೇರೆಬೇರೆಯಾಗಿರುತ್ತವೆ. ಇಬ್ಬರು ಬೆಳೆದ ವಾತಾವರಣ, ಸಂಸ್ಕೃತಿ, ರಿವಾಜುಗಳು ಕೂಡಾ ಭಿನ್ನವಾಗಿರುತ್ತವೆ. ಅಸಲಿಗೆ ಒಬ್ಬರಿಗೆ ಒಬ್ಬರ ಪರಿಚಯವೇ ಇರೋದಿಲ್ಲ. ಮದುವೆಗೆ ಮುಂಚೆ ಸಿಕ್ಕಾಪಟ್ಟೆ ಕನಸು ಕಂಡಿರುತ್ತಾರೆ. ಬದುಕು ಇನ್ನೇನೋ ಆಗಿಬಿಡಬಹುದು ಅಂತಾ ಭ್ರಮಿಸಿರುತ್ತಾರೆ. ಆದರೆ ಮದುವೆ ಅಂತಾದಮೇಲೆ ಆಗೋದೇ ಬೇರೆ. ಇಬ್ಬರೂ ನೀರಿಂದ ತೆಗೆದು ನೆಲಕ್ಕೆಸೆದ ಮೀನಂತಾಡಲು ಶುರು […]
ಬೆಂಗಳೂರಿನ ದ್ರೌಪದಮ್ಮನ ಕರಗ ವಿಶ್ವಾದ್ಯಂತ ಹೆಸರುವಾಸಿ. ಜಾತಿ ಮತ ಮೀರಿ ಎಲ್ಲರೂ ಒಂದಾಗಿ ಸೇರಿ ಇದನ್ನು ಆಚರಿಸುತ್ತಾರೆ. ಈ ಧರ್ಮರಾಯನ ಗುಡಿಗೆ ಬರೋಬ್ಬರಿ ಎಂಟು ನೂರು ವರ್ಷಗಳ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡರು ಇದೇ ಗುಡಿಯನ್ನು ಕೇಂದ್ರವಾಗಿಟ್ಟುಕೊಂಡೇ ಬೆಂಗಳೂರನ್ನು ಕಟ್ಟಿದ್ದು ಎನ್ನುವ ಮಾತಿದೆ. ಇದೇ ಬೆಂಗಳೂರಿನ ಧರ್ಮರಾಯನ ದೇವಸ್ಥಾನದ ಆಸುಪಾಸಿನಲ್ಲಿರುವ ತಿಗಳರ ಪೇಟೆಯಲ್ಲಿ ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಹರಿದಿರೋ ನೆತ್ತರು ಒಬ್ಬಿಬ್ಬರದ್ದಲ್ಲ. ಅಂಥದ್ದೇ ಒಂದು ರಕ್ತ ಚರಿತ್ರೆ ʻಕೈವʼದ ಮೂಲಕ ತೆರೆದುಕೊಂಡಿದೆ.. ಪ್ರೀತಿಯೊಂದಕ್ಕೆ ಬಿಟ್ಟು ಅವನ ಹೃದಯದಲ್ಲಿ […]
ಅವನಿಗೆ ನಯ-ವಿನಯವಿಲ್ಲ. ದೊಡ್ಡವರು ಚಿಕ್ಕವರು ಅನ್ನೋದನ್ನೆಲ್ಲಾ ನೋಡದೆ, ಯಾರ ಮುಂದೆ ಬೇಕಾದರೂ ಕಾಲಮೇಲೆ ಕಾಲು ಹಾಕಿಕೊಂಡು ಕೂರುವ, ಮೌನಾಚರಣೆಯ ಸಭೆಯಲ್ಲೂ ದೊಡ್ಡ ಸದ್ದಿನಲ್ಲಿ ಸೀನಿಬಿಡುವ, ಬೂಟಿಗೆ ಕುದುರೆ ಲಾಳ ಫಿಕ್ಸ್ ಮಾಡಿಕೊಂಡು ಸದ್ದು ಮಾಡಿಕೊಂಡು ನಡೆಯುವ, ಎದುರಿದ್ದವನು ಎಷ್ಟೇ ಬಲಶಾಲಿಯಾದರೂ ಮುಷ್ಟಿ ಹಿಡಿದು ಗುದ್ದುವ ಒರಟ… ಒಂಥರಾ ಮ್ಯಾನರ್ಸ್ ಇಲ್ಲದವನು! ಬ್ಯಾಡ್ ಮ್ಯಾನರ್ಸನ್ನೇ ಬಾಡಿ ತುಂಬಾ ತುಂಬಿಕೊಂಡ ರುದ್ರೇಶ್ ಅಲಿಯಾಸ್ ರುದ್ರನ ತಂದೆ ಕಾಲವಾದಮೇಲೆ ಅದೇ ಪೊಲೀಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿರುತ್ತದೆ. ಅದೊಂದು ದಿನ ಸರ್ವೀಸ್ ಗನ್ […]
ಸುತ್ತಲೂ ಮೂಢರು, ಮತಿಹೀನರು, ಅವಿದ್ಯಾವಂತರು, ಕೇಡುಗರು, ಕುಯುಕ್ತಿ ಮನಸ್ಸಿನವರೇ ತುಂಬಿದ್ದಾಗ ಅವರ ಮಧ್ಯದಲ್ಲೊಬ್ಬ ತಿಳಿವಳಿಕೆ ಉಳ್ಳವನು, ಓದು ಬರಹ ಬಲ್ಲವನು ಇದ್ದಾನೆ ಅಂದುಕೊಳ್ಳಿ. ಸುತ್ತಲಿನ ಆ ಮಂದಿ ಈತನನ್ನು ನೋಡುವ ರೀತಿಯೇ ಬೇರೆ. ಅತಿಯಾಗಿ ಓದಿದವರು ಜಗತ್ತಿನ ಕಣ್ಣಿಗೆ ಅರೆಹುಚ್ಚರಂತೆ, ಕೆಲಸಕ್ಕೆ ಬಾರದವರಂತೆ ಕಾಣುವುದಿದೆ. ಇಲ್ಲಿ ಕಥಾನಾಯಕ ಪ್ರಾಣೇಶ ಅಲಿಯಾಸ್ ಪ್ರಾಣಿಯ ಪಾಡು ಕೂಡಾ ಹಾಗೇ ಆಗಿರುತ್ತದೆ. ಆ ಹಳ್ಳಿಯಲ್ಲಿ ಇವನೊಬ್ಬನೇ ಅತಿ ಹೆಚ್ಚು ಓದಿದವನು. ಕೆ.ಎ.ಎಸ್. ಬರೆದು ಸರ್ಕಾರಿ ಅಧಿಕಾರಿಯಾಗಬೇಕು ಅಂತಾ ಬಯಸಿರುತ್ತಾನೆ. ʻʻಮೂಲಾ ನಕ್ಷತ್ರದಲ್ಲಿ […]
ಅವನು ಅಪ್ಪ-ಅಮ್ಮನನ್ನು ಕಳೆದುಕೊಂಡ ಯುವಕ. ಹೆಸರು ಮಾನವ್. ಸಣ್ಣ ಶಾಲೆಯಲ್ಲಿ ಶಿಕ್ಷಕ ವೃತ್ತಿ. ಒಬ್ಬಂಟಿ ಜೀವನ. ಯಾರಾದರೂ ಜೊತೆಯಾದರೆ ಸಾಕು ಅಂತಾ ಚಡಪಡಿಸಿದವನ ಪಾಲಿಗೆ ತನ್ನ ಮನೆಯ ಸುತ್ತಲೂ ಬಿಕೋ ಎನ್ನುವ ವಾತಾವರಣ. ಎದುರು ಮನೆಯತ್ತ ಇಣುಕಿದರೆ ಟು-ಲೆಟ್ ಬೋರ್ಡು ಮಾತ್ರ ಕಾಣಲು ಸಾಧ್ಯ. ಹೀಗಿರುವಾಗಲೇ ಅದೊಂದು ದಿನ ಅದೇ ಎದುರುಮನೆಯ ಕಾಂಪೌಂಡಿನಲ್ಲಿ ಅರಳಿನಿಂತ ಹೆಣ್ಣುಮಗಳು ಪ್ರತ್ಯಕ್ಷ. ಜೊತೆಗೊಬ್ಬ ಹಿರಿಯ ವ್ಯಕ್ತಿ. ಮನೆಯವರ ಹಿತದೃಷ್ಟಿಯಿಂದ ಅಂಕಲ್ ವಯಸ್ಸಿನವನ ವ್ಯಕ್ತಿಯನ್ನು ಮದುವೆಯಾದ ಚೆಂದದ ಯುವತಿ ಅವಳು. ನಿರೀಕ್ಷೆಯಂತೇ ಮಾನವ್ಗೆ […]