ಅಂಡು ತೊಳೆಯೋ ಪ್ರವೀಣ ಹಾಗಂದಿದ್ದು ಸರೀನಾ?

Picture of Cinibuzz

Cinibuzz

Bureau Report

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ತಮ್ಮ ಪ್ರೀತಿಯ ಸುತ್ತಾ ಹರಡಿಕೊಂಡಿರೋ ರೂಮರುಗಳ ಬಗ್ಗೆ, ನಿಖರ ಎಂಬಂತೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲೊಂದಷ್ಟು ಮಂದಿ, ಮಾಧ್ಯಮದಲ್ಲಿ ಮತ್ತೊಂದಷ್ಟು ಜನ ಸೇರಿ ತಾವೇ ಮುಂದೆ ನಿಂತು ಬ್ರೇಕಪ್ ಮಾಡಿಸುತ್ತಿದ್ದಾರೆ. ರಶ್ಮಿಕಾ ರಕ್ಷಿತ್ ನಡುವೆ ಸಂಬಂಧ ಹಳಸಿಕೊಂಡಿರೋದು ನಿಜವಿರ ಬಹುದು. ಅದಕ್ಕೆ ಸಾಕಷ್ಟು ಕಾರಣವೂ ಇರ ಬಹುದು. ಆದರೆ ಅದಕ್ಕೆ ತೆಲುಗು ನಟ ವಿಜಯ್ ದೇವರಕೊಂಡ ಕಾರಣನಲ್ಲ ಎಂಬ ವಿಚಾರ ಈಗ ಜಾಹೀರಾಗಿದೆ!

ಅದ್ಯಾವ ಘಳಿಗೆಯಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿದಳೋ ರಶ್ಮಿಕಾ? ಈ ಚಿತ್ರ ಗೆದ್ದು ಭಾರೀ ದಾಖಲೆಯನ್ನೇ ಮಾಡಿದ್ದರೂ ಅದನ್ನು ಸಂಭ್ರಮಿಸೋ ಅವಕಾಶವೂ ಆಕೆಗಿಲ್ಲ. ಯಾಕೆಂದರೆ ರಶ್ಮಿಕಾ ರಕ್ಷಿತ್ ಶೆಟ್ಟಿಯಿಂದ ದೂರಾಗೋದಕ್ಕೆ ಈ ಚಿತ್ರವೇ ಕಾರಣ ಎಂದೂ ಪುಂಖಾನುಪುಂಖವಾಗಿ ಸುದ್ದಿಗಳಾಗುತ್ತಿವೆ. ಇಂಥಾ ಸುದ್ದಿಗಳೇ ವಿಜಯ್ ದೇವರಕೊಂಡನನ್ನು ವಿಲನ್ ಗೆಟಪ್ಪು ಹಾಕಿಸಿ ಕೂರಿಸಿವೆ. ರಶ್ಮಿಕಾ ಮತ್ತು ವಿಜಯ್ ನಡುವೆ ಲವ್ವಾಗಿದೆ. ಆದ್ದರಿಂದಲೇ ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ ಅಂತೆಲ್ಲ ಸುದ್ದಿ ಹಬ್ಬಿದೆ. ಆದರೆ ಅಸಲೀ ವಿಚಾರ ಬೇರೆಯದ್ದೇ ಇದೆ!

ಅಸಲಿಗೆ ವಿಜಯ್ ದೇವರಕೊಂಡ ನಿಜ ಜೀವನದಲ್ಲಿ ಸೀರಿಯಸ್ಸಾಗಿ ಲವ್ವಲ್ಲಿ ಬಿದ್ದು ಬಹಳಷ್ಟು ಕಾಲವೇ ಆಗಿದೆ. ಆತ ಅಮೆರಿಕಾದ ವಿಮ್ಮಿ ಎಂಬಾಕೆಯನ್ನು ವರ್ಷಾಂತರಗಳಿಂದ ಪ್ರೀತಿಸುತ್ತಿದ್ದಾನೆ. ಒಂದು ಸಮಾರಂಭದಲ್ಲಿ ಭೇಟಿಯಾಗಿದ್ದ ಇವರಿಬ್ಬರೂ ಜೋಡಿ ಹಕ್ಕಿಗಳಾಗಿ ಹಾರಾಡುತ್ತಿದ್ದಾರೆ. ಈ ವಿಚಾರವೇ ರಶ್ಮಿಕಾ ಮತ್ತು ರಕ್ಷಿತ್ ಬ್ರೇಕಪ್ಪಿನ ಸುತ್ತಾ ಎಷ್ಟೆಲ್ಲ ಸುಳ್ಳು ಸುದ್ದಿ ಹರಡುತ್ತಿದೆ ಎಂಬುದಕ್ಕೂ ಸಾಕ್ಷಿಯಂತಿದೆ!

ಇಂಥಾ ಸುದ್ದಿಗಳು ಹರಡುತ್ತಿರೋದಕ್ಕೆ ಮೂಲಕ ಕಾರಣ ರಕ್ಷಿತ್ ಮತ್ತು ರಶ್ಮಿಕಾ ಪರಿಪಾಲಿಸುತ್ತಿರುವ ಮಹಾ ಮೌನ. ಈ ಬಗ್ಗೆ ಅವರಿಬ್ಬರೂ ಬಾಯಿಬಿಟ್ಟು ಮಾತಾಡಿದ ಕ್ಷಣದಿಂದ ಇಂಥವೆಲ್ಲ ಕಡಿಮೆಯಾಗಬಹುದು. ಆದರೆ ಅವರಿಬ್ಬರೂ ಸದ್ಯಕ್ಕೆ ಮೌನ ಮುರಿಯೋ ಲಕ್ಷಣಗಳು ಕಾಣಿಸುತ್ತಿಲ್ಲ.

ಈ ಸ್ಟಾರ್ ಗಳು ಕುಂತರೂ ನಿಂತರೂ ಸುದ್ದಿ ಮಾಡಿಸಿಕೊಳ್ಳುತ್ತಾರೆ. ಇವರು ಎಂಗೇಜಮೆಂಟ್ ಮಾಡಿಕೊಂಡರೆ ಅದು ಎಲ್ಲಾ ಚಾನೆಲ್ಲುಗಳಲ್ಲೂ ಲೈವ್ ಸುದ್ದಿಯಾಗಬೇಕು. ಅದೇ ಇವರು ಸಂಬಂಧಗಳಿಂದ ಕಳಚಿಕೊಂಡಾಗ ‘ಅದು ನಮ್ಮ ಪರ್ಸನಲ್ ವಿಚಾರ’ ಎಂದು ಸುಮ್ಮನಾಗಿಬಿಡುತ್ತಾರೆ. ಸಾಲದು ಅಂತಾ ‘ಏನೇ ಬರೆಯೋದಿದ್ದರೂ ಒಂದ್ಸಲ ಕೇಳಿ ಬರೀರಿ. ತಪ್ಪು ಮಾಹಿತಿ ರವಾನೆಯಾಗಬಾರದು’ ಅಂತಾ ಉಪದೇಶ ಪುಂಗುವ ರಕ್ಷಿತ್ ಥರದ ನಟರು ‘ಕೇಳಿಯೇ ಬರೆಯೋಣ’ ಅಂತಾ ಯಾರಾದರೂ ಸಂಪರ್ಕಿಸಿದರೆ ಯಾವ ಕಾರಣಕ್ಕೂ ಪ್ರತಿಕ್ರಿಯೆ ನೀಡೋದಿಲ್ಲ. ರಕ್ಷಿತ್ ಶೆಟ್ಟಿ ಕೂಡಾ ಇದೇ ರೂಲ್ಸನ್ನೇ ಫಾಲೋ ಮಾಡುತ್ತಿದ್ದಾನೆ.

ರಕ್ಷಿತ್ ಶೆಟ್ಟಿಯ ಪಟಾಲಮ್ಮಿನಲ್ಲಿರೋ ತಿರುಬೋಕಿ ಪ್ರವೀಣನೊಬ್ಬ ‘ಮೀಡಿಯಾ ಮತ್ತು ಟ್ರೋಲ್ ಪೇಜುಗಳು ಡ್ಯಾಶ್ ಮುಚ್ಕೊಂಡು ನಿಮ್ಮ ಕೆಲಸ ನೀವು ಮಾಡಿ’ ಎಂದು ಬರೆದಿದ್ದಾನಂತೆ. ರಕ್ಷಿತ್ ಶೆಟ್ರು ಕಕ್ಕ ಮಾಡಿ ಹಿಂತಿರುಗಿ ಕೂತಾಗ ಅಂಡು ತೊಳೆಯೋ ಕೆಲಸ ಮಾಡುವ ಹುಡುಗರೆಲ್ಲಾ ಮೀಡಿಯಾದ ಡ್ಯಾಶ್ ಮುಚ್ಚಿಸುವ ಕೆಲಸ ಮಾಡುತ್ತಾರೆಂದರೆ, ಏನು ಹೇಳಬೇಕು?

https://www.youtube.com/watch?v=t78yMnRQgOw #

ಇನ್ನಷ್ಟು ಓದಿರಿ

Scroll to Top