ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮಗನು ಕೇಳಲೇಬೇಕಾದ, ನೋಡಲೇಬೇಕಾದ ಹಾಡು..

Picture of Cinibuzz

Cinibuzz

Bureau Report

ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರವೀಗ ಹಾಡುಗಳ ಹಂಗಾಮದಿಂದ ಮತ್ತಷ್ಟು ಪ್ರೇಕ್ಷಕರನ್ನು ತಲುಪಲಾರಂಭಿಸಿದೆ. ಅಜೇಯ್ ರಾವ್ ಹೊಸಾ ಗೆಟಪ್ಪಿನಲ್ಲಿ ನಟಿಸಿರೋ, ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರದ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ.

ಈಗ ಬಿಡುಗಡೆಯಾಗಿರೋ ಅಮ್ಮ ನಿನ್ನ ಮಗನೆಂಬ ಹೆಮ್ಮೆ.. ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿ ಜನ್ಮಕೂ… ಎಂಬ ಈ ಹಾಡೂ ಈ ಹಿಂದಿನ ಎರಡು ಹಾಡುಗಳನ್ನೇ ಮೀರಿಸುವಂತೆ ಹಿಟ್ ಆಗೋ ಸೂಚನೆಯೂ ದಟ್ಟವಾಗಿಯೇ ಕಾಣಿಸುತ್ತಿದೆ. ಅಮ್ಮನ ಮೇಲಿನ ಪ್ರೀತಿಯ ಪ್ರತೀಕದಂತಿರೋ ಈ ಹಾಡಿನ ಸಾಲುಗಳು ಭಾವಗೀತೆಯಂಥಾ ನವಿರುತನದಿಂದ ಎಲ್ಲರನ್ನು ಆವರಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ ಎಂಬ ಹಾಡೂ ಟ್ರೆಂಡಿಂಗ್‌ನಲ್ಲಿದೆ. ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡುತ್ತಾ ಬಂದಿರೋ ಚಿತ್ರತಂಡ, ಆ ಹಾಡುಗಳನ್ನು ಒಂದಕ್ಕಿಂತ ಒಂದು ಚೆಂದ ಎಂಬಂತೆ ರೂಪಿಸುತ್ತಿರೋದು ವಿಶೇಷ.

https://www.youtube.com/watch?v=uCrUZoh_gqQ&feature=youtu.be #

ಇನ್ನಷ್ಟು ಓದಿರಿ

Scroll to Top