ದರ್ಶನ್ ಮ್ಯಾನೇಜರ್ ಮಹಾದ್ರೋಹಿ ಮಲ್ಲಿ ಎಲ್ಲಿದ್ದಾನೆ ಗೊತ್ತಾ?

Picture of Cinibuzz

Cinibuzz

Bureau Report


ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದುಬಿಡುವ ‘ಯಜಮಾನ’, ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನೂ ಸ್ನೇಹಿತರಂತೆ ಪೊರೆಯುವ ‘ಒಡೆಯ’ ದರ್ಶನ್ ಅವರಿಗೆ ಮಲ್ಲಿಕಾರ್ಜುನ ಎನ್ನುವ ಮ್ಯಾನೇಜರ್ ಮಹಾದ್ರೋಹವೆಸಗಿ ಗಾಯಬ್ ಆದನಲ್ಲಾ? ಆತ ಎಲ್ಲಿದ್ದಾನೆ ಅನ್ನೋದರ ಸಣ್ಣ ಸುಳಿವೊಂದು ಸಿಕ್ಕಿದೆ!
ಮ್ಯಾನೇಜರ್ ಮಲ್ಲಿ ಅನ್ನೋ ಮಹಾನುಭಾವ ದರ್ಶನ್ ಮತ್ತವರ ತಂಡಕ್ಕೆ ಕೈಕೊಟ್ಟು ಊರುಬಿಟ್ಟಿದ್ದಾನೆ ಅನ್ನೋ ಸುದ್ದಿಯನ್ನು ಮೊಟ್ಟ ಮೊದಲ ಬಾರಿಗೆ ಸ್ಫೋಟಿಸಿದ್ದು ಸಿನಿಬಜ್. ನಾವು ಸುದ್ದಿ ನೀಡಿದ ಮೇಲೂ ಎಷ್ಟೋ ಜನ ‘ಹೌದಾ? ನಿಜಾನಾ? ಅದು ಹೇಗೆ ಸಾಧ್ಯ?’ ಅಂತೆಲ್ಲಾ ಪ್ರಶ್ನಿಸಿದ್ದರು. ಯಾರೆಂದರೆ ಯಾರೂ ನಂಬಲೂ ಸಾಧ್ಯವಾಗದ ನಿಜಾಂಶವನ್ನು ಸಿನಿಬಜ಼್ ಬಯಲಿಗೆಳೆದಿತ್ತು. ನಂತರ ನಮ್ಮ ವರದಿಯ ಸತ್ಯಾಸತ್ಯತೆ ಜಗತ್ತಿಗೂ ಗೊತ್ತಾಯಿತು. ಇರಲಿ, ವಿಷಯ ಅದಲ್ಲ!

ಊರುಬಿಡುವ ಮುಂಚೆ ಪಕ್ಕಾ ಪ್ಲಾನು ಮಾಡಿಕೊಂಡು, ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಹೆಂಡತಿ ಮಕ್ಕಳನ್ನೆಲ್ಲಾ ತನ್ನ ಹುಟ್ಟೂರಿಗೆ ಬಿಟ್ಟುಬಂದಿದ್ದ ಈತ ಒಮ್ಮೆಲೇ ಗಾಯಬ್ ಆಗಿದ್ದ. ಮಲ್ಲಿ ಓಡಿಹೋದ, ದರ್ಶನ್ ಮತ್ತವರ ಸುತ್ತಲಿನವರಿಗೆ ವಂಚಿಸಿ ಕಾಲುಕಿತ್ತಿದ್ದಾನೆ ಅನ್ನೋದು ಬಿಟ್ಟರೆ ಬೇರಾವ ಸುಳಿವೂ ಈವರೆಗೆ ಸಿಕ್ಕಿರಲಿಲ್ಲ.

ಏಕಾಏಕಿ ಯಾವ ಸೂಚನೆಯನ್ನೂ ನೀಡದೆ ಊರುಬಿಟ್ಟು ಎಸ್ಕೇಪ್ ಆದ ಮಲ್ಲಿ ಈಗೆಲ್ಲಿದ್ದಾನೆ? ಅನ್ನೋದರ ಸಣ್ಣ ಸುಳಿವೊಂದು ನಮಗೆ ದೊರೆತಿದೆ.  ಅದರ ಪ್ರಕಾರ ಹೇಳೋದಾದರೆ ಮಲ್ಲಿ ಈಗ ಕೆನಡಾದಲ್ಲಿ ಸೆಟಲ್ ಆಗಿ ಅಲ್ಲೊಂದು ಫ್ಲಾಟು ಖರೀದಿಸಿ ಕೂಲಾಗಿ ಜೀವನ ನಡೆಸುತ್ತಿದ್ದಾನಂತೆ. ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಆಧಾರ ಸಮೇತ ಸಿಕ್ಕನಂತರವಷ್ಟೇ ಪಕ್ಕಾ ಆಗಲಿದೆ. ಇಷ್ಟಕ್ಕೂ ಮಲ್ಲಿ ಯಾಮಾರಿಸಿ ತೆಗೆದುಕೊಂಡು ಹೋದ ಹಣವನ್ನು ಏನು ಮಾಡಿದ್ದಾನೆ? ನಂಬಿದವರನ್ನು ವಂಚಿಸುವ ದರ್ದಾದರೂ ಈತನಿಗೇನಿತ್ತು? ಇವೆಲ್ಲ ವಿವರಗಳು ಇಷ್ಟರಲ್ಲೇ ಬಯಲಾಗಲಿದೆ… ಕಾದು ನೋಡಿ!

  #

ಇನ್ನಷ್ಟು ಓದಿರಿ

Scroll to Top