ಮನಸಿನ ಮರೆಯಲಿ 9 ರಂದು ಬಿಡುಗಡೆ

Picture of Cinibuzz

Cinibuzz

Bureau Report


ಆಸ್ಕರ್, ಮಿಸ್ ಮಲ್ಲಿಗೆಯಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಲನಚಿತ್ರ ಮನಸಿನ ಮರೆಯಲಿ. ಈ ವರೆಗೆ ಥ್ರೀಲ್ಲರ್, ರೋಮ್ಯಾಂಟಿಕ್ ಸಿನಿಮಾಗಳನ್ನೇ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ಒಂದು ಅಪ್ಪಟ ಪ್ರೇಮ ಕಥೆಯನ್ನು ತೆಗೆದುಕೊಂಡು ನಿರ್ದೇಶನ ಮಾಡಿದ್ದಾರೆ. ಇದೇ ಶುಕ್ರವಾರ ರಾಜ್ಯಾದ್ಯಾಂತ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ಕಿಶೋರ್ ಯಾದವ್ ಹಾಗೂ ದಿವ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಕಿಂಗ್ ಲಿಂಗರಾಜು ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಶ್ರೀಮತಿ. ಶಬೀನಾ ಅರಾ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಾಯಿರಾಂ ಚಿತ್ರಕತೆ. ಸಂಭಾಷಣೆ ಬರೆದಿದ್ದಾರೆ. ಮೊನ್ನೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಮಾತಾನಾಡಿದ ನಿರ್ದೇಶಕ ಕೃಷ್ಣ ಲವ್ ಸ್ಟೋರಿ ನನ್ನ ಮೊದಲ ಪ್ರಯತ್ನ ಈ ವರೆಗೆ ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗಳನ್ನೆ ಮಾಡಿದ್ದ ನಾನು ಹೊಸದಾಗಿ ಟ್ರೈ ಮಾಡಿದ್ದೇನೆ. ಇಂತಹ ಸಿನಿಮಾಗಳಲ್ಲಿ ಗಿಮಿಕ್ ಮಾಡಲು ಸಾದ್ಯವಿಲ, ನೈಜತೆಗೆ ಹತ್ತಿರವಿದ್ದರೆ ಜನ ಪಾತ್ರಗಳಿಗೆ ರಿಲೇಟ್ ಮಾಡಿಕೊಳ್ಳುತ್ತಾರೆ. ಲಿಂಗರಾಜು ಕೂಡ ಒಂದೇ ಮಾತಿಗೆ ಒಪ್ಪಿಕೊಂಡರು, ಟೈಟಲ್ ಹಿಂದೆಯೇ ಅಂದುಕೊಂಡಿದ್ದೇ ಅದು ಈ ಕಥೆಗೆ ಸೂಟ್ ಆಯಿತು. ಕಿಶೋರ್ ತೆಲುಗು ಹೀರೋತರ ಇದ್ದಾನೆ, ಹೊಸಬರನ್ನು ಲಾಂಚ್ ಮಾಡಲು ಲವ್ ಸ್ಟೋರಿನೆ ಬೇಸ್ ಎಂದು ಸ್ನೇಹಿತರೆಲ್ಲಾ ಹೇಳಿದರು. ಒಂದು ಪ್ರೀತಿಯನ್ನು ಹಲವಾರು ಸಂದಂರ್ಭಗಳು ಭಾರ ಮಾಡುತ್ತವೆ ಸಣ್ಣದೊಂದು ಇಗೋ, ಕ್ಲಾಶ್‌ನಿಂದ ನಾಯಕ ನಾಯಕಿ ಇಬ್ಬರೂ ಬೇರೆಯಾಗುತ್ತಾರೆ. ನಮ್ಮ ನಮ್ಮ ಆಲೋಚನೆಗಳೆ ನಮಗೆ ವಿಲನ್ ಆಗುತ್ತವೆ ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. ಬೆಂಗಳೂರು, ಮೈಸೂರು, ಮಡಿಕೇರಿ, ಕುಶಾಲನಗರ ಸುತ್ತಮುತ್ತಾ ಚಿತ್ರೀಕರಣ ನಡೆಸಲಾಗಿದ್ದು, ನವೆಂಬರ್ ೯ ರಂದು ರಿಲೀಸ್ ಆಗುತ್ತಿದೆ.

ನಾಯಕ ಕಿಶೋರ್ ಮಾತಾನಾಡಿ ಇದು ನನ್ನ ಪಸ್ಟ್ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವಂತಹ ಲವ್‌ಸ್ಟೋರಿ, ಪ್ರೀತಿ ಬಗ್ಗೆ ಯಾವುದೇ ನಂಬಿಕೆ ಇರದ ನಾಯಕ ಒಬ್ಬ ಹುಡುಗಿಯ ವಿಷಯದಲ್ಲಿ ಹೇಗೆ ನಂಬಿಕೆ ಉಳಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಎಳೆ ಎಂದು ಹೇಳಿದರು.

ನಿರ್ಮಾಪಕ ಕಿಂಗ್ ಲಿಂಗರಾಜು ಮಾತಾನಾಡಿ ಎಲ್ಲರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರಿಂದ ಸಿನಿಮಾ ಒಳ್ಳೆ ಸಮಯದಲ್ಲಿ ಹೊರಬರುತ್ತಿದೆ ಎಂದು ಹೇಳಿದರು. ಚಿತ್ರದಲ್ಲಿ ಕಳನಟನಾಗಿ ಕಾಣಿಸಿದ್ದ ವರ್ಧನ ಮಾತಾನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಮತ್ತೊಬ್ಬ ನಟ ನಂದಕುಮಾರ್ ಕೂಡ ಹಾಜರಿದ್ದರು.

#

ಇನ್ನಷ್ಟು ಓದಿರಿ

Scroll to Top