ವೀರಾಧಿವೀರ ಸಿನಿಮಾದ ಹಾಡುಗಳ ಧ್ವನಿಸುರುಳಿ ಬಿಡುಗಡೆ

Picture of Cinibuzz

Cinibuzz

Bureau Report

ಇಷ್ಟಾರ್ಥ, ಗಾಯಿತ್ರಿ, ಚಿತ್ರಗಳನ್ನು ನಿರ್ದೇಶಿಸಿದ್ದ, ಸತ್ಯ ಸಾಮ್ರಾಟ್‌ರವರ ನಿರ್ದೇಶನದ ಮೂರನೇ ಚಿತ್ರ ವೀರಾಧಿವೀರ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ನಡೆಸುತ್ತಿರುವ ವಿಜಯಾನಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸ್ಮೈಲ್ ಶಿವು, ಅಶ್ವಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಿರ್ಮಾಪಕ ವಿಜಯಾನಂದ ನಾಯಕಿಯ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಲಹರಿ ಸಂಸ್ಥೆ ಈ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿರ್ದೇಶಕ ಸತ್ಯಸಾಮ್ರಾಟ್ ಮಾತಾನಾಡಿ ಗಾಯಿತ್ರಿ ಎಂಬ ಹಾರರ್ ಚಿತ್ರದ ನಂತರ ಪಕ್ಕ ಹಳ್ಳಿ ಸೊಗಡಿನ ಲವ್ ಸ್ಟೋರಿ ಮಾಡಬೇಕೆಂದು ಈ ಚಿತ್ರ ಕೈಗೆತ್ತಿಕೊಂಡೆ, ಈ ಸಿನಿಮಾ ಆರಂಭವಾಗಲು ಕಾರಣ ಸ್ಮೈಲ್ ಶಿವು ಗಾಯಿತ್ರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಬೆಂಗಳೂರು, ಸಕಲೇಶಪುರ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ನಾಯಕನ ಪಾತ್ರಕ್ಕೆ ೩ ಶೇಡ್ ಇದೆ, ಕಳ್ಳ, ಪ್ರೇಮಿ ಹಾಗೂ ಅಘೋರಿಯಾಗಿ ನಾಯಕ ಕಾಣಿಸಿಕೊಂಡಿದ್ದಾರೆ. ನಾನು ಹಿಂದಿನಿಂದಲೂ ವಿಷ್ಣು ಅವರ ಅಭಿಮಾನಿ ಹಾಗಾಗಿ ಈ ಚಿತ್ರದ ಕಥೆಗೆ ಸೂಟ್ ಆಗುತ್ತೆ ಎಂದು ವೀರಾಧಿವೀರ ಟೈಟಲ್ ಇಟ್ಟಿದ್ದೇನೆ.

ನಾಯಕ ಬದುಕಿಗೋಸ್ಕರ ಕಳ್ಳತನ ಮಾಡಿಕೊಂಡಿರುತ್ತಾನೆ. ಒಬ್ಬ ಹುಡುಗಿಯ ಮೇಲೆ ಲವ್ ಆಗುತ್ತದೆ. ಅವರ ಪ್ರೀತಿಗೆ ಏನೆಲ್ಲಾ ಅಡೆತಡೆಗಳುಂಟಾದವು ಎಂಬುವುದೇ ಈ ಚಿತ್ರದ ಕಥೆ. ಇಡೀ ಸಿನಿಮಾದಲ್ಲಿ ಹಳ್ಳಿ ಸೊಗಡಿನ ಕಥೆ ಇದೆ ಎಂದು ಹೇಳಿದರು.

ನಿರ್ಮಾಪಕರಾದ ವಿಜಯಾನಂದ ಮಾತಾನಾಡಿ ನಾನು ಕೂಡ ವಿಷ್ಣುವರ್ಧನ ಅವರ ಅಭಿಮಾನಿ ನಾಯಕಿಯ ತಂದೆ ಹಾಗೂ ವಿಲನ್ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ. ನಾಯಕಿ ಅಶ್ವಿನಿ ಮಾತಾನಾಡಿ ಹಿಂದೆ ರೋಜಾ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದೆ ಹಳ್ಳಿ ಹುಡುಗಿ ಹಾಗೂ ಬಜಾರಿ ತರಹದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದು ಹೇಳಿದರು. ನಾಯಕ ಶಿವು ಮಾತಾನಾಡಿ 12 ವರ್ಷಗಳಿಂದ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೆ, ಗಾಯಿತ್ರಿ ಚಿತ್ರದ ನಂತರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಒಬ್ಬ ಕಳ್ಳನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ ಕೊನೆಗೆ ಅಘೋರಿಯಾಗುತ್ತೇನೆ ಎಂದು ಹೇಳಿದರು.

ಮತ್ತೊಬ್ಬ ನಟ ಪಳನಿ ಮಾತಾನಾಡಿ ನಾನು ನಾಯಕ ಮಾವನ ರೋಲ್ ಮಾಡಿದ್ದು, ಆತನ ಕಳ್ಳತನಕ್ಕೆ ಐಡಿಯಾ ಹೇಳಿಕೊಡುತ್ತೇನೆ ಎಂದು ಹೇಳಿದರು. ಲಹರಿ ವೇಲು ಮಾತಾನಾಡಿ ಈ ಚಿತ್ರದಲ್ಲಿರುವ ನಾಲ್ಕು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು.

#

ಇನ್ನಷ್ಟು ಓದಿರಿ

Scroll to Top