ಈತನ ಸಮಾಜಸೇವೆಗೆ ಕಾರಣ ಶಂಕರ್ ನಾಗ್ ಮೇಲಿನ ಅಭಿಮಾನ!

Picture of Cinibuzz

Cinibuzz

Bureau Report

ಮರೆಯಾಗಿ ಅದೆಷ್ಟೋ ಸಂವತ್ಸರಗಳು ಕಳೆದ ಬಳಿಕವೂ ಅಭಿಮಾನಿಗಳ ಮನಸಲ್ಲಿ ಹಸಿರಾಗುಳಿದಿರುವವರು ಶಂಕರ್ ನಾಗ್. ಇಂದಿಗೂ ಅದೆಷ್ಟೋ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅವರೇ ಸ್ಫೂರ್ತಿ. ಅವರೆಡೆಗಿನ ಅಭಿಮಾನವೂ ಕೂಡಾ ಹತ್ತಾರು ಜನರಿಗೆ ಒಳಿತು ಮಾಡುವ ಕೆಲಸ ಕಾರ್ಯಗಳಿಗೇ ಪ್ರೇರಣೆಯಾಗುತ್ತಾ ಬಂದಿದೆ. ಶಂಕರ್ ನಾಗ್ ಹೆಸರಲ್ಲಿ ಅಂಥಾದ್ದೇ ಸಮಾಜಮುಖಿ ಕೆಲಸ ಮಾಡುತ್ತಾ ಅವರ ಅಭಿಮಾನಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಆತ ಆಟೋ ಡ್ರೈವರ್ ಮಲ್ಲಿಕಾರ್ಜುನ!

ಶಂಕರ್ ನಾಗ್ ಅವರ ಅಪ್ರತಿಮ ಅಭಿಮಾನಿಯಾದ ಮಲ್ಲಿಕಾರ್ಜುನ ಆಟೋ ಡ್ರೈವರ್. ಬದುಕು ನಡೆಸೋದಕ್ಕಾಗಿ ಈತ ಆಟೋ ಓಡಿಸುವ ವೃತ್ತಿ ಆರಂಭಿಸಿದ್ದು ಕೂಡಾ ಶಂಕರ್ ನಾಗ್ ಅವರ ಪ್ರೇರಣೆಯಿಂದಲೇ. ತನ್ನ ಆಟೋಗೂ ಸಾಂಗ್ಲಿಯಾನ ಅಂತಲೇ ಹೆಸರು ಹಾಕಿಸಿಕೊಂಡಿರೋ ಮಲ್ಲಿಕಾರ್ಜುನ ಬರೀ ಬಾಯಿ ಮಾತಲ್ಲಿ ಶಂರ್ ನಾಗ್‌ರೆಡೆಗಿನ ಅಭಿಮಾನ ತೋರಿಸದೇ ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ತನ್ನ ಪಾಡಿಗೆ ತಾನು ಜನೋಪಕಾರ ಮಾಡುತ್ತಿರೋ ಇಂಥಾ ಅಪರೂಪದ ಅಭಿಮಾನಿಯನ್ನು ಕನ್ನಡದ ಖ್ಯಾತ ಕಥೆಗಾರರಾದ ಕುಂ ವೀರಭದ್ರಪ್ಪ!

Related image

ಯಾದಗಿರಿ ಪಟ್ಟಣ ಮತ್ತು ಆಸುಪಾಸಿನ ಊರುಗಳಲ್ಲಿ ಈ ಮಲ್ಲಿಕಾರ್ಜುನ ಸಾಂಗ್ಲಿಯಾನ ಅಂತಲೇ ಫೇಮಸ್ಸು. ಬಡ ಜನರು, ಕಷ್ಟದಲ್ಲಿರುವವರ ಪಾಲಿಗೆ ಆಪತ್ಭಾಂಧವ. ತನ್ನ ಆಟೋದಲ್ಲಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದಕ್ಕೆ, ಬಡ ರೋಗಿಗಳ ಪ್ರಯಾಣಕ್ಕೆ ಉಚಿತವಾಗಿಯೇ ಸೇವೆ ಒದಗಿಸುತ್ತಿದ್ದಾನೆ. ಅನಾಥ ಕಳೇಬರಗಳನ್ನು ಸ್ಮಶಾನಕ್ಕೆ ಸಾಗಿಸಲೂ ಈತ ಸದಾ ಸಿದ್ಧ. ಆಗಾಗ ಶಂಕರಣ್ಣನ ಹೆಸರಲ್ಲಿ ರಕ್ತ ದಾನ ಮಾಡುತ್ತಾ ಇತರರಿಗೂ ಪ್ರೇರೇಪಿಸುತ್ತಿರುವ ಮಲ್ಲಿಕಾರ್ಜುನ ಈ ಭಾಗದಲ್ಲಿ ಜನರಿಗೆ ಹತ್ತಿರಾಗಿದ್ದಾನೆ.

Image result for Shankar nag

ಶಂಕರ್ ನಾಗ್ ಅವರ ಅಂತಿeಮ ಅಭಿಮಾನಿಯಾದ ಈತ ಎಲ್ಲ ನಟರ ಅಭಿಮಾನಿಗಳಿಗೂ ಮಾದರಿ. ಸುಮ್ಮನೆ ಸಮಾರಂಭ, ಮೆರೆದಾಟ ಅಂತ ಕಾಲ ಕಳೆಯೋದರ ಬದಲು ಇಂಥಾ ಸಮಾಜಮುಖಿ ಕೆಲಸ ಕಾರ್ಯ ಮಾಡುವಂತಾದರೆ ಅದು ಆಯಾ ನಟರಿಗೆ ಸಲ್ಲಿಸೋ ನಿಜವಾದ ಗೌರವ…Related image

 

ಇನ್ನಷ್ಟು ಓದಿರಿ

Scroll to Top